Terrorists Encounter: ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಿದ ಸೈನಿಕರು; ರಾಜೌರಿಯಲ್ಲಿ 6 ಎಲ್ಇಟಿ ಉಗ್ರರ ಹತ್ಯೆ
ಇದೇ ರಾಜೌರಿ ಅರಣ್ಯದಲ್ಲಿ 9 ಭಾರತೀಯ ಯೋಧರನ್ನು ಉಗ್ರರನ್ನು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಎನ್ಕೌಂಟರ್ ಕಾರ್ಯಾಚರಣೆ ನಡೆಸಿರುವ ಸೇನಾಪಡೆ 6 ಎಲ್ಇಟಿ ಉಗ್ರರನ್ನು ಬಲಿ ಪಡೆದಿದೆ.
ರಾಜೌರಿ: ಜಮ್ಮು ಕಾಶ್ಮೀರದ ರಾಜೌರಿ ವಲಯದಲ್ಲಿನ ಕಾಡಿನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಎನ್ಕೌಂಟರ್ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಸಂಘಟನೆಯ 6 ಉಗ್ರರನ್ನು ಭಾರತೀಯ ಸೈನಿಕರು ಹತ್ಯೆ ಮಾಡುವ ಮೂಲಕ ಉಗ್ರರ ಬೇಟೆಯನ್ನು ಮುಂದುವರೆಸಿದ್ದಾರೆ.
ರಾಜೌರಿಯ ದಟ್ಟ ಕಾಡಿನಲ್ಲಿ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಕಳೆದೊಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಕಾಶ್ಮೀರದ ಪೊಲೀಸರಿಂದ ಎನ್ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಹಲವು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಕೆಲವು ಸೈನಿಕರು ಕೂಡ ಹುತಾತ್ಮರಾಗಿದ್ದಾರೆ. ಇದೇ ರಾಜೌರಿ ಅರಣ್ಯದಲ್ಲಿ 9 ಭಾರತೀಯ ಯೋಧರನ್ನು ಉಗ್ರರನ್ನು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಎನ್ಕೌಂಟರ್ ಕಾರ್ಯಾಚರಣೆ ನಡೆಸಿರುವ ಸೇನಾಪಡೆ 6 ಎಲ್ಇಟಿ ಉಗ್ರರನ್ನು ಬಲಿ ಪಡೆದಿದೆ.
ಪಾಕಿಸ್ತಾನದಿಂದ ಸುಮಾರು 10 ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರು ಕಳೆದ 2-3 ತಿಂಗಳಲ್ಲಿ ರಾಜೌರಿ-ಪೂಂಚ್ ಜಿಲ್ಲೆಯ ಗಡಿಯಲ್ಲಿರುವ ಅರಣ್ಯದೊಳಗೆ ನುಸುಳಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಉಗ್ರರು ನುಸುಳಲು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Tral Encounter: ಕಾಶ್ಮೀರದ ತ್ರಾಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಜೈಷ್ ಉಗ್ರ ಸಂಘಟನೆಯ ಕಮಾಂಡರ್ ಹತ್ಯೆ
Terrorist Encounter: ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಉಗ್ರರ ಎನ್ಕೌಂಟರ್, ಹುತಾತ್ಮರಾದ ಇಬ್ಬರು ಭಾರತೀಯ ಯೋಧರು
Published On - 5:39 pm, Tue, 19 October 21