AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra: ಕೊವಿಡ್​ 19 ನಿಯಂತ್ರಣ ನಿಯಮಗಳಲ್ಲಿ ಸಡಿಲಿಕೆ; ಮಧ್ಯರಾತ್ರಿ 12ಗಂಟೆವರೆಗೂ ಓಪನ್​ ಇರಲಿವೆ ರೆಸ್ಟೋರೆಂಟ್​, ಹೋಟೆಲ್​ಗಳು

ಮಹಾರಾಷ್ಟ್ರ ರಾಜ್ಯ ಸರ್ಕಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮುಂಬರುವ ಹಬ್ಬದ ಸೀಸನ್​ ದೃಷ್ಟಿಯಿಂದ ಅಂಗಡಿ, ರೆಸ್ಟೋರೆಂಟ್​, ಹೋಟೆಲ್​ಗಳ ಸಮಯ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

Maharashtra: ಕೊವಿಡ್​ 19 ನಿಯಂತ್ರಣ ನಿಯಮಗಳಲ್ಲಿ ಸಡಿಲಿಕೆ; ಮಧ್ಯರಾತ್ರಿ 12ಗಂಟೆವರೆಗೂ ಓಪನ್​ ಇರಲಿವೆ ರೆಸ್ಟೋರೆಂಟ್​, ಹೋಟೆಲ್​ಗಳು
ಸಾಂಕೇತಿಕ ಚಿತ್ರ
TV9 Web
| Edited By: |

Updated on: Oct 19, 2021 | 5:01 PM

Share

ಮುಂಬೈ:  ಮಹಾರಾಷ್ಟ್ರದಲ್ಲಿ ಕೊವಿಡ್​ 19 (Covid 19) ನಿಯಂತ್ರಣ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇನ್ನು ಮುಂದೆ ಇಲ್ಲಿನ ರೆಸ್ಟೋರೆಂಟ್​ ಮತ್ತು ಹೋಟೆಲ್​​ಗಳು ಮಧ್ಯರಾತ್ರಿ 12ಗಂಟೆಯವರೆಗೂ ತೆರೆದಿರಲಿವೆ. ಹಾಗೇ, ಅಂಗಡಿ-ಮುಗ್ಗಟ್ಟುಗಳನ್ನು ರಾತ್ರಿ 11ಗಂಟೆಯವರೆಗೆ ತೆರೆದಿಡಲು ಅವಕಾಶ ಕಲ್ಪಿಸಲಾಗಿದೆ.  ಈ ಹಿಂದೆ ರೆಸ್ಟೋರೆಂಟ್​, ಹೋಟೆಲ್​, ಅಂಗಡಿಗಳನ್ನಲ್ಲೆ ರಾತ್ರಿ 10ಕ್ಕೆ ಬಂದ್ ಮಾಡಬೇಕಿತ್ತು. 

ಮಹಾರಾಷ್ಟ್ರ ರಾಜ್ಯ ಸರ್ಕಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮುಂಬರುವ ಹಬ್ಬದ ಸೀಸನ್​ ದೃಷ್ಟಿಯಿಂದ ಅಂಗಡಿ, ರೆಸ್ಟೋರೆಂಟ್​, ಹೋಟೆಲ್​ಗಳ ಸಮಯ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.  ಹಬ್ಬಗಳ ಹಿನ್ನೆಲೆಯಲ್ಲಿ ಖರೀದಿಗಾಗಿ ಬರುವ ಜನರ ಸಂಖ್ಯೆ ಹೆಚ್ಚಿರುತ್ತದೆ. ರಾತ್ರಿ 10ಗಂಟೆಗೆ ಎಲ್ಲವೂ ಬಂದ್ ಆಗುತ್ತದೆ ಎಂಬ ಕಾರಣಕ್ಕೆ ಒಂದೇ ಬಾರಿಗೆ ಹೆಚ್ಚೆಚ್ಚು ಜನರು ಬರುತ್ತಾರೆ. ಹೀಗಾದರೆ ಜನಸಂದಣಿ ಅಧಿಕಗೊಳ್ಳುತ್ತದೆ. ಇದನ್ನು ತಪ್ಪಿಸಲು ಎಲ್ಲ ರೀತಿಯ ಅಂಗಡಿಗಳು, ಹೋಟೆಲ್​, ರೆಸ್ಟೋರೆಂಟ್​​ಗಳ ಸಮಯವನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ.

ಈಗ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್​ ಕುಂಟೆ ಅವರ ಸಹಿ ಇದೆ. ಹಾಗೇ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳಬೇಕು ಎಂದೂ ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಕೊವಿಡ್ 19 ಸೋಂಕಿನ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಮುಂಬೈನಲ್ಲಿ ಭಾನುವಾರ ಕೊರೊನಾದಿಂದ ಒಬ್ಬರೂ ಮೃತಪಟ್ಟಿದ್ದು ವರದಿಯಾಗಿಲ್ಲ. 2020ರ ಮಾರ್ಚ್​​ 26ರಿಂದ ಇಲ್ಲಿಯವರೆಗೆ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಕೊರೊನಾದಿಂದ ಯಾರೂ ಮೃತಪಟ್ಟಿದ್ದು ವರದಿಯಾಗಿಲ್ಲ. ಹಾಗೇ, ಅಕ್ಟೋಬರ್​ 22ರಿಂದ ರಾಜ್ಯದ ಅಮ್ಯೂಸ್​ಮೆಂಟ್​ ಪಾರ್ಕ್​​ಗಳು ಕಾರ್ಯನಿರ್ವಹಿಸಬಹುದು ಎಂದು ಸೋಮವಾರವಷ್ಟೇ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಹಾಗೇ, ಅಕ್ಟೋಬರ್​ 22ರಿಂದ ಸಿನಿಮಾ ಹಾಲ್​ಗಳು, ರಂಗಭೂಮಿ ವೇದಿಕೆಗಳನ್ನೂ ತೆರೆಯಬಹುದು, ಆದರೆ ಶೇ.50ರಷ್ಟು ಪ್ರೇಕ್ಷಕರ ಸಾಮರ್ಥ್ಯದಲ್ಲಿ ಪ್ರದರ್ಶನಗಳು ನಡೆಯಬೇಕು ಎಂದು ಕೂಡ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಬಹುತೇಕ ಉಪಚುನಾವಣೆಗಳಲ್ಲಿ ನಾವು ಸೋತಿದ್ದೇವೆ, ಕಷ್ಟದಲ್ಲಿದ್ದೇವೆ: ಎಚ್​ಡಿ ಕುಮಾರಸ್ವಾಮಿ

‘ಈಗ ಎಲ್ಲ ಮಕ್ಕಳೂ ಕುಡಿಯುತ್ತಾರೆ..ಅದೇನೂ ದೊಡ್ಡ ವಿಷಯವಲ್ಲ, ನನ್ನ ಸೋದರಳಿಯನ ಬಿಟ್ಟುಬಿಡಿ’-ಪೊಲೀಸರಿಗೆ ತಾಕೀತು ಮಾಡಿದ ಕಾಂಗ್ರೆಸ್​ ಶಾಸಕಿ

Follow Us
TV9 Web
TV9 Web

TV9 Kannada

Read More
‘ಪ್ಯಾರಡೈಸ್’ ಸೋಲು: ‘ಮಾರ್ಟಿನ್’ ದಿನಗಳನ್ನು ನೆನಪಿಸಿಕೊಂಡ ಉದಯ್ ಮೆಹ್ತಾ
‘ಪ್ಯಾರಡೈಸ್’ ಸೋಲು: ‘ಮಾರ್ಟಿನ್’ ದಿನಗಳನ್ನು ನೆನಪಿಸಿಕೊಂಡ ಉದಯ್ ಮೆಹ್ತಾ
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ