Uttarakhand Flood: ಉತ್ತರಾಖಂಡ ಪ್ರವಾಹದಿಂದ 16 ಜನ ಸಾವು; ಭೂಕುಸಿತದಿಂದ ದ್ವೀಪವಾದ ನೈನಿತಾಲ್

Uttarakhand Flood: ಉತ್ತರಾಖಂಡ ಪ್ರವಾಹದಿಂದ 16 ಜನ ಸಾವು; ಭೂಕುಸಿತದಿಂದ ದ್ವೀಪವಾದ ನೈನಿತಾಲ್
ನೈನಿತಾಲ್​ನಲ್ಲಿ ಭೂಕುಸಿತ

Nainital Landslide: ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ನೈನಿತಾಲ್​ನಲ್ಲಿ ಇಂದು ಮುಂಜಾನೆಯಿಂದ ಸಾಲು ಸಾಲಾಗಿ ಭೂಕುಸಿತವಾಗುತ್ತಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

TV9kannada Web Team

| Edited By: Sushma Chakre

Oct 19, 2021 | 6:19 PM

ನೈನಿತಾಲ್: ಉತ್ತರಾಖಂಡದಲ್ಲಿ (Uttarakhand Rain) ಭಾರೀ ಮಳೆಯಿಂದಾಗಿ ಭೂಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉತ್ತರಾಖಂಡದ ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ನೈನಿತಾಲ್​ಗೆ (Nainital Landslide) ಹೋಗುವ ಮೂರು ರಸ್ತೆಗಳಲ್ಲಿ ಭೂಮಿ ಕುಸಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಉತ್ತರಾಖಂಡ ರಾಜ್ಯದಿಂದ ನೈನಿತಾಲ್ ಪ್ರತ್ಯೇಕಗೊಂಡು ದ್ವೀಪದಂತಾಗಿದ್ದು, ಯಾವುದೇ ಸಂಪರ್ಕ ಇಲ್ಲದಂತಾಗಿದೆ.

ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ನೈನಿತಾಲ್​ನಲ್ಲಿ ಇಂದು ಮುಂಜಾನೆಯಿಂದ ಸಾಲು ಸಾಲಾಗಿ ಭೂಕುಸಿತವಾಗುತ್ತಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಉತ್ತರಾಖಂಡ ರಾಜ್ಯದ ಉಳಿದ ಭಾಗಕ್ಕೂ ರಸ್ತೆಸಂಪರ್ಕ ಕಡಿತವಾಗಿದೆ. ಕುಮೋನ್ ಪ್ರಾಂತ್ಯದಲ್ಲಿ ಇಂದು ಮಳೆ ಮುಂದುವರಿದ ಪರಿಣಾಮ ಮನೆಗಳು ಕುಸಿದು ಬಿದ್ದಿವೆ. ಈ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಉತ್ತರಾಖಂಡ ರಾಜ್ಯದಲ್ಲಿ ಮಳೆ, ಭೂಕುಸಿತದಿಂದ 16 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಭೂಕುಸಿತ ಮತ್ತು ಪ್ರವಾಹದಿಂದ 11 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ನೈನಿತಾಲ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸಾವಿನ ಸಂಖ್ಯೆ ಏರುತ್ತಲೇ ಇದೆ. ಕಳೆದ ಮೂರು ದಿನಗಳಿಂದಲೂ ಸುರಿಯುತ್ತಿರುವ ಮಳೆ ಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಮೂರು ಹೆಲಿಕಾಪ್ಟರ್​ಗಳನ್ನು ಬಳಸಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಇದರ ನಡುವೆ ಉತ್ತರಾಖಂಡದ ಪ್ರವಾಹ ಮತ್ತು ಭೂಕುಸಿತದ ಆಘಾತಕಾರಿ ವಿಡಿಯೋಗಳು ಟ್ವಿಟ್ಟರ್​ನಲ್ಲಿ ಹರಿದಾಡುತ್ತಿವೆ.

ಉತ್ತರಾಖಂಡದ ಪ್ರವಾಹ ಸ್ಥಿತಿ ಗಂಭೀರವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿಯೊಂದಿಗೆ ಮಾತನಾಡಿದ್ದಾರೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಧಾಮಿ ಪ್ರಧಾನಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ. ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳ ಮಳೆಯಲ್ಲಿ ನೇಪಾಳದ ಕಾರ್ಮಿಕರು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ. ಹವಾಮಾನ ಸುಧಾರಿಸುವವರೆಗೂ ಹಿಮಾಲಯದ ದೇವಸ್ಥಾನಗಳಿಗೆ ತೆರಳದಂತೆ ಅಧಿಕಾರಿಗಳು ಚಾರ್​ಧಾಮ್ ಯಾತ್ರಿಕರಿಗೆ ಸೂಚಿಸಿದ್ದಾರೆ.

ನೈನಿತಾಲ್​ನ ನೈನಿ ಕೆರೆ ಉಕ್ಕಿ ಹರಿಯುತ್ತಿದ್ದು, ಹಲವು ಮನೆಗಳು ನೀರಿನಿಂದ ಆವೃತವಾಗಿವೆ. ನೈನಾ ದೇವಿ ದೇವಸ್ಥಾನಕ್ಕೂ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದಿಂದಾಗಿ ನೈನಿತಾಲ್​ಗೆ ಬಂದಿದ್ದ ಪ್ರವಾಸಿಗರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ರಾಮನಗರ ಮಾರ್ಗದ ಲೆಮ್ ಟ್ರೀ ರೆಸಾರ್ಟ್​ನಲ್ಲಿ 100ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: Uttarakhand Rain: ಮಳೆಯಿಂದ ಬಂಡೆಗಳ ಮಧ್ಯೆ ಸಿಲುಕಿದ ಕಾರಲ್ಲಿದ್ದವರ ರಕ್ಷಣೆ; ಶಾಕಿಂಗ್ ವಿಡಿಯೋ ಇಲ್ಲಿದೆ

Uttarakhand Rain: ಉತ್ತರಕಾಶಿಯಲ್ಲಿ ಭೂಕುಸಿತದಿಂದ ಗಂಗೋತ್ರಿ, ಯಮುನೋತ್ರಿ ಹೆದ್ದಾರಿ ಬಂದ್

Follow us on

Related Stories

Most Read Stories

Click on your DTH Provider to Add TV9 Kannada