Kerala Rain ಕೇರಳದಲ್ಲಿ ಮುಂದುವರಿದ ಮಳೆ, 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

Rashmi Kallakatta

|

Updated on:Oct 19, 2021 | 5:15 PM

Kerala Flood Today Latest Updates ಅಕ್ಟೋಬರ್ 20 ರಂದು ತಿರುವನಂತಪುರ, ಪತ್ತನಂತಿಟ್ಟ, ಕೋಟ್ಟಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ

Kerala Rain ಕೇರಳದಲ್ಲಿ ಮುಂದುವರಿದ ಮಳೆ, 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಮಳೆ

Follow us on

ತಿರುವನಂತಪುರಂ: ಎರಡು ದಿನಗಳ ವಿರಾಮದ ನಂತರ, ಕೇರಳದ 11 ಜಿಲ್ಲೆಗಳಲ್ಲಿ ನಿರಂತರ ಮಳೆ ಬೀಳುವ ಸೂಚನೆ ಇದೆ ಎಂದು ಹೇಳಿರುವ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಗುರುವಾರವೂ 12 ರಾಜ್ಯಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.  ಅಕ್ಟೋಬರ್ 20 ರಂದು ತಿರುವನಂತಪುರ, ಪತ್ತನಂತಿಟ್ಟ, ಕೋಟ್ಟಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಅಕ್ಟೋಬರ್ 21ರಂದು ಕಣ್ಣೂರು ಮತ್ತು ಕಾಸರಗೋಡು ಹೊರತು ಪಡಿಸಿ ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅಪಾರ ನಾಶ ನಷ್ಟ ಸಂಭವಿಸಿದೆ. ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆಂಟಿಮೀಟರ್‌ಗಿಂತ ಹೆಚ್ಚು ಭಾರೀ ಮಳೆಯಾಗುವುದನ್ನು ಸೂಚಿಸುತ್ತದೆ. ಆದರೆ ಆರೆಂಜ್ ಅಲರ್ಟ್ 6 ಸೆಂ.ಮೀ.ನಿಂದ 20 ಸೆಂ.ಮೀ, ಯೆಲ್ಲೋ ಅಲರ್ಟ್ ಎಂದರೆ 6 ರಿಂದ 11 ಸೆಂಮೀ ನಡುವೆ ಭಾರೀ ಮಳೆಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಏತನ್ಮಧ್ಯೆ, ರಾಜ್ಯದ ಅಣೆಕಟ್ಟು ಅಧಿಕಾರಿಗಳು ಧಾರಾಕಾರ ಮಳೆಯಿಂದ ಉಂಟಾಗುವ ಪರಿಸ್ಥಿತಿಯ ಅರಿವನ್ನು ತೆಗೆದುಕೊಳ್ಳುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಇಡುಕ್ಕಿ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲಾಗಿದ್ದು, ಕೇರಳದ ಅತಿದೊಡ್ಡ ಜಲಾಶಯವು ತನ್ನ ನೇರ ಶೇಖರಣಾ ಸಾಮರ್ಥ್ಯದ ಶೇಕಡಾ 93 ಕ್ಕಿಂತಲೂ ಹೆಚ್ಚು ನೀರಿನ ಪ್ರಮಾಣ ಹೊಂದಿದೆ.

ಜಲಾಶಯದಿಂದ ಮೂರು ವರ್ಷದಲ್ಲಿ ಎರಡನೇ ಬಾರಿಗೆ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದು ರಾಜ್ಯದ ಅತಿದೊಡ್ಡ ಮತ್ತು ಏಷ್ಯಾದ ಅತಿ ಎತ್ತರದ ಕಮಾನು ಅಣೆಕಟ್ಟುಗಳಲ್ಲಿ ಒಂದಾಗಿದೆ.  ಭಾರೀ ಮಳೆ ಮತ್ತು ನಂತರದ ಭೂಕುಸಿತಗಳಿಂದ ಕೇರಳ ತತ್ತರಿಸಿ ಹೋಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (SDMA) ಪ್ರಕಾರ, ಕೇರಳದಲ್ಲಿ ಅಕ್ಟೋಬರ್ 12 ರಿಂದ ಅಕ್ಟೋಬರ್ 18 ರವರೆಗೆ ಮಳೆಯಿಂದಾಗಿ 38 ಮಂದಿ ಸಾವಿಗೀಡಾಗಿದ್ದಾರೆ. ಇದೇ ಅವಧಿಯಲ್ಲಿ, ಮಳೆಯಲ್ಲಿ ಕನಿಷ್ಠ 90 ಮನೆಗಳು ನಾಶವಾಗಿದ್ದು 702 ಭಾಗಶಃ ಹಾನಿಯಾಗಿದೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅದರ ಹೊರತಾಗಿ, ರಾಜ್ಯದ ಹತ್ತು ಪ್ರಮುಖ ಅಣೆಕಟ್ಟುಗಳಿಗೆ ರೆಡ್ ಅಲರ್ಟ್ ಘೋಷಣೆಯೊಂದಿಗೆ ರಾಜ್ಯದ ಅಣೆಕಟ್ಟುಗಳು ತುಂಬಿವೆ. ಹೆಚ್ಚುವರಿ ನೀರನ್ನು ಬಿಡಲು ರಾಜ್ಯದ ಒಟ್ಟು 78 ಅಣೆಕಟ್ಟುಗಳಲ್ಲಿ ಇಡುಕ್ಕಿ, ಇಡಮಲಯಾರ್, ಪಂಪಾ ಮತ್ತು ಕಕ್ಕಿ ನಾಲ್ಕು ಪ್ರಮುಖ ಅಣೆಕಟ್ಟುಗಳನ್ನು ತೆರೆಯಲಾಗಿದೆ. ಹಲವಾರು ಜಿಲ್ಲಾಡಳಿತಗಳು ತಗ್ಗುಪ್ರದೇಶದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯನ್ನು ನೀಡಿದ್ದು, ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಶಿಬಿರಗಳಿಗೆ ಜನರನ್ನು ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: Kerala Rain ಪ್ರವಾಹದಿಂದ ತತ್ತರಿಸಿದ ಕೇರಳದಲ್ಲಿ ಮತ್ತೆ ಮಳೆ ಸಾಧ್ಯತೆ; 35 ಮಂದಿ ಸಾವು

ತಾಜಾ ಸುದ್ದಿ

Related Stories

Click on your DTH Provider to Add TV9 Kannada