ನವದೆಹಲಿ; ವಿಶ್ವಾದ್ಯಂತ ಒಮಿಕ್ರಾನ್ (Omicron) ಭೀತಿ ಹೆಚ್ಚಾಗಿದ್ದು, ಕೆಲವು ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ (Omicron Variant) ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಯುಎಇ ಮತ್ತು ಕುವೈತ್ ಪ್ರವಾಸವನ್ನು ಮುಂದೂಡಲಾಗಿದೆ. ಈ ಮೊದಲು ಜನವರಿ 6ರಂದು ಪ್ರಧಾನಿ ಮೋದಿ ಯುಎಇ ಮತ್ತು ಕುವೈತ್ಗೆ ಭೇಟಿ ನೀಡುವುದು ನಿಗದಿಯಾಗಿತ್ತು.
ಸೌತ್ ಬ್ಲಾಕ್ ಮೂಲಗಳ ಪ್ರಕಾರ, ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳ ಕಾರಣದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯುಎಇ ಭೇಟಿಯನ್ನು ಮುಂದೂಡಲಾಗಿದ್ದು, ಫೆಬ್ರವರಿಯಲ್ಲಿ ಪ್ರವಾಸ ನಡೆಸಲಿದ್ದಾರೆ. ಕೊರೊನಾವೈರಸ್ನ ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಉಲ್ಬಣಗೊಂಡಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಮೇಲೆ ಈ ವೈರಸ್ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಅಮೆರಿಕದಲ್ಲಿ ಒಮಿಕ್ರಾನ್ ಈಗ ಡೆಲ್ಟಾಗಿಂತಲೂ ಪ್ರಬಲ ವೈರಸ್ ಆಗಿ ಬದಲಾಗಿದೆ.
Prime Minister Narendra Modi’s visit to UAE postponed. PM Modi was scheduled to visit the UAE on Jan 6: Sources
(File pic) pic.twitter.com/G1AUCp6Dbn
— ANI (@ANI) December 29, 2021
ಇಂಗ್ಲೆಂಡ್ನಲ್ಲಿ ಒಮಿಕ್ರಾನ್ ಸೋಂಕಿನ ವೇಗದ ಹರಡುವಿಕೆಯಿಂದಾಗಿ ಕೊವಿಡ್-19 ಪ್ರಕರಣಗಳು ಪ್ರತಿದಿನ ಏರಿಕೆಯಾಗುತ್ತಲೇ ಇದೆ. ಭಾರತದಲ್ಲಿ ಕೊವಿಡ್ ಪರಿಸ್ಥಿತಿ ಇಲ್ಲಿಯವರೆಗೆ ನಿಯಂತ್ರಣದಲ್ಲಿದೆ. ಏಳು ಎಮಿರೇಟ್‌ಗಳ ಒಕ್ಕೂಟವಾದ ಯುಎಇಯಲ್ಲಿ ಸೋಮವಾರ 1,732 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ, ಯುಎಇಯಲ್ಲಿ 7,55,000 ಕೊವಿಡ್ ಪ್ರಕರಣಗಳು ಮತ್ತು 2,160 ಸಾವುಗಳನ್ನು ವರದಿಯಾಗಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳ; ಆರೋಗ್ಯ ಸಮೀಕ್ಷೆಗೆ ಸರ್ಕಾರದಿಂದ ಆದೇಶ
ಹೊಸ ವರ್ಷಕ್ಕೆ ಗೋವಾದಲ್ಲಿ ಪಾರ್ಟಿ ಮಾಡೋ ಪ್ಲಾನ್ ಇದೆಯಾ?; ಹೊಸ ಕೊವಿಡ್ ನಿಯಮಗಳು ಹೀಗಿವೆ