ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 50 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ಅಭಿನಂದಿಸಿದರು. ಭಜನ್ ಲಾಲ್ ಮತ್ತು ಅವರ ಇಡೀ ತಂಡವು ರಾಜಸ್ಥಾನದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲು ತುಂಬಾ ಶ್ರಮಿಸಿದೆ ಎಂದು ಅವರು ಹೇಳಿದರು. ಇಂದು ಉದ್ಘಾಟನೆಗೊಂಡ ಯೋಜನೆಗಳು ರಾಜಸ್ಥಾನದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಯೋಜನೆಗಳು ರಾಜಸ್ಥಾನವನ್ನು ದೇಶದ ಅತ್ಯಂತ ಸಂಪರ್ಕಿತ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುತ್ತದೆ. ಇದು ರಾಜಸ್ಥಾನದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ರಾಜಸ್ಥಾನದ ಪ್ರವಾಸೋದ್ಯಮ, ಇಲ್ಲಿನ ರೈತರು ಮತ್ತು ಯುವಕರು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದು ಮೋದಿ ವಿವರಿಸಿದ್ದಾರೆ.
ಈ ಯೋಜನೆಗಳು ರಾಜಸ್ಥಾನದ ಶೇ. 100ರಷ್ಟು ಮನೆಗಳಿಗೆ ಆದಷ್ಟು ಬೇಗ ನಲ್ಲಿ ನೀರನ್ನು ಒದಗಿಸುವ ವಿಶ್ವಾಸವಿದೆ. ಸಿ.ಆರ್. ಪಾಟೀಲ್ ನೇತೃತ್ವದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಮಳೆ ನೀರು ಕೊಯ್ಲು ಮಾಡಲು ರೀಚಾರ್ಜ್ ಬಾವಿಗಳನ್ನು ನಿರ್ಮಿಸಲಾಗುತ್ತಿದೆ. ನೀರಿನ ಕೊರತೆ ಇರುವ ಭಾರತದ ರಾಜ್ಯಗಳಲ್ಲಿ ಇದುವರೆಗೆ ಸುಮಾರು 3 ಲಕ್ಷ ಮಳೆ ನೀರು ಕೊಯ್ಲು ರಚನೆಗಳನ್ನು ನಿರ್ಮಿಸಲಾಗಿದೆ ಎಂದು ಮೋದಿ ಹೇಳಿದರು.
#WATCH | Jaipur, Rajasthan: PM Narendra Modi inaugurates and lays the foundation stone of 24 projects worth Rs 46,400 Crores. pic.twitter.com/p2ZnaQFQJy
— ANI (@ANI) December 17, 2024
ಇದನ್ನೂ ಓದಿ: One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ಪ್ರಧಾನಿ ನರೇಂದ್ರ ಮೋದಿ ಇಂದು ರಾಜಸ್ಥಾನದ ಜೈಪುರದಲ್ಲಿ ಸುಮಾರು 50 ಸಾವಿರ ಕೋಟಿ ರೂ.ಗಳ 24 ಯೋಜನೆಗಳನ್ನು ಉದ್ಘಾಟಿಸಿದರು. ಇಂಧನ, ರಸ್ತೆ, ರೈಲ್ವೇ ಮತ್ತು ಜಲ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳಿಗೆ ಪ್ರಧಾನಮಂತ್ರಿ ಮೋದಿ ಶಂಕುಸ್ಥಾಪನೆ ಮಾಡಿದರು.
#WATCH | Jaipur, Rajasthan: PM Narendra Modi says, “Today, BJP is receiving such massive public support. In Lok Sabha, the country has given us the opportunity to serve, for the third consecutive term. This never happened in last 60 years. After 60 years, people of the country… pic.twitter.com/zlqdA5lE5U
— ANI (@ANI) December 17, 2024
ಪಾರ್ವತಿ, ಕಾಳಿಸಿಂಧ್, ಚಂಬಲ್ ಯೋಜನೆಯಿಂದ ರಾಜಸ್ಥಾನದ 21 ಜಿಲ್ಲೆಗಳಿಗೆ ನೀರಾವರಿ ಹಾಗೂ ಕುಡಿಯುವ ನೀರು ಒದಗಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಇದು ರಾಜಸ್ಥಾನ ಮತ್ತು ಮಧ್ಯಪ್ರದೇಶ ಎರಡರ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ನಮ್ಮ ಸರ್ಕಾರವು ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯನ್ನು ಅನುಮೋದಿಸಿದೆ ಮತ್ತು ವಿಸ್ತರಿಸಿದೆ ಎಂದಿದ್ದಾರೆ.
Jaipur, Rajasthan: PM Narendra Modi says, “Rajasthan has immense potential in the field of energy. Rajasthan can become the leading state in this regard in the country. Our government has made solar energy a means to zero out your electricity bill. The central government is… pic.twitter.com/hUvkMBKbzg
— IANS (@ians_india) December 17, 2024
ಇದನ್ನೂ ಓದಿ: ಪರಿಸರ ಸಂರಕ್ಷಣೆ ದಾರಿದೀಪ: ತುಳಸಿ ಗೌಡ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ರಾಜಸ್ಥಾನವು ಇಂಧನ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ. ರಾಜಸ್ಥಾನವು ಈ ವಿಷಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವಾಗಬಲ್ಲದು. ನಮ್ಮ ಸರ್ಕಾರವು ನಿಮ್ಮ ವಿದ್ಯುತ್ ಬಿಲ್ ಅನ್ನು ಶೂನ್ಯಗೊಳಿಸಲು ಸೌರಶಕ್ತಿಯನ್ನು ಒಂದು ಸಾಧನವನ್ನಾಗಿ ಮಾಡಿದೆ. ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುಚ್ಛಕ್ತಿ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ ಸರ್ಕಾರವು 80,000 ರೂ. ಸಬ್ಸಿಡಿಯನ್ನು ಒದಗಿಸುತ್ತಿದೆ, ಇದರಿಂದ ಉತ್ಪಾದನೆಯಾಗುವ ವಿದ್ಯುತ್ ಬಳಸಿ. ಮತ್ತು ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದರೆ, ಅದನ್ನು ಮತ್ತೆ ಸರ್ಕಾರಕ್ಕೆ ಮಾರಾಟ ಮಾಡಬಹುದು ಎಂದು ಮೋದಿ ಹೇಳಿದ್ದಾರೆ.
Jaipur, Rajasthan: PM Narendra Modi says, “I remember, about 100 years ago, there was a Jain monk named Buddhisagar Maharaj in Gujarat who wrote that one day, drinking water will be sold at grocery stores. He wrote this 100 years ago, and today, we are forced to buy bottled water… pic.twitter.com/PtZ6paeSVa
— IANS (@ians_india) December 17, 2024
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಪ್ರಧಾನಿ ಮೋದಿ ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನ ವಿವಿಧ ಭಾಗಗಳಿಗೆ ನರ್ಮದಾ ನೀರನ್ನು ತರಲು ದೊಡ್ಡ ಅಭಿಯಾನವನ್ನು ನಡೆಸಿದ್ದೆ. ಆದರೆ ಆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಬದಲು ಹಿಂದಿನ ಕಾಂಗ್ರೆಸ್ ಸರ್ಕಾರ ರಾಜ್ಯಗಳ ನಡುವೆ ಜಲವಿವಾದವನ್ನು ಹೆಚ್ಚಿಸಿತು ಎಂದು ಮೋದಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ