ಟೋಕಿಯೊ: ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆಯವರ (Shinzo Abe) ಅಂತ್ಯಕ್ರಿಯೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸುವ ಸಾಧ್ಯತೆ ಇದೆ ಎಂದು ಜಪಾನ್ನ ಮಾಧ್ಯಮಗಳು ವರದಿ ಮಾಡಿವೆ. ಸೆಪ್ಟೆಂಬರ್ 27ಕ್ಕೆ ಅಬೆ ಅವರ ಅಂತ್ಯಕ್ರಿಯೆ ಸಮಾರಂಭ ಟೋಕಿಯೊದ ಕಿಟನುಮರು ನ್ಯಾಷನಲ್ ಗಾರ್ಡನ್ನ ನಿಪ್ಪೋನ್ ಬುಡೋಕನ್ ಪ್ರದೇಶದಲ್ಲಿ ನಡೆಯಲಿದೆ. ನರೇಂದ್ರ ಮೋದಿ ಅವರು ಅಧಿಕೃತ ವಿದಾಯ ಸಮಾರಂಭದಲ್ಲಿಯೂ ಭಾಗಿಯಾಗಲಿದ್ದಾರೆ ಎಂದು ಕ್ಯೊಡೊ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೋದಿ ಅವರು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರ ಜತೆ ಸಭೆ ನಡೆಸಲಿದ್ದಾರೆ ಎಂದು ಈ ಮಾಧ್ಯಮ ವರದಿ ಮಾಡಿದೆ. ಜಪಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಉಭಯ ರಾಷ್ಟ್ರಗಳು ಅಮೆರಿಕ ಮತ್ತು ಆಸ್ಟ್ರೇಲಿಯಾ ಜತೆ ಸಮಗ್ರ ಪಾಲುದಾರಿಕೆಯ ಕ್ವಾಡ್ ಸ್ವರೂಪದಲ್ಲಿ ಎರಡೂ ದೇಶಗಳು ಸಹಕರಿಸುತ್ತವೆ. ಮೋದಿ ಮತ್ತು ಅಬೆ ಅವರ ಅಧಿಕಾರಾವಧಿಯಲ್ಲಿ ಮತ್ತು ನಂತರವೂ ಎರಡೂ ದೇಶಗಳ ಸ್ನೇಹ ಸಂಬಂಧಗಳನ್ನು ಉಳಿಸಿಕೊಂಡರು. 2018ರಲ್ಲಿ ಮೋದಿ ಅವರು ಜಪಾನ್‌ಗೆ ಅಧಿಕೃತ ಪ್ರವಾಸ ಕೈಗೊಂಡಾಗ ಅಬೆ ಅವರು ಮೋದಿಯನ್ನು ಯಮನಾಶಿ ಪ್ರಿಫೆಕ್ಚರ್‌ನಲ್ಲಿರುವ ಮನೆಗೆ ಆಹ್ವಾನಿಸಿದ್ದರು.
ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್‌ಗೆ ಭೇಟಿ ನೀಡಿದ ಭಾಗವಾಗಿ ಜಪಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಸುಮಾರು ಎರಡು ವರ್ಷಗಳ ನಂತರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಅಬೆ ಅವರನ್ನು ಭೇಟಿಯಾದರು.
ಜುಲೈ 8 ರಂದು ಜಪಾನಿನ ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ಅಬೆ ಮೇಲೆ ದಾಳಿ ನಡೆಸಲಾಯಿತು.
ಹಿಂಬದಿಯಿಂದ ಗುಂಡು ತಗುಲಿದ ತಕ್ಷಣ ಅವರು ಪ್ರಜ್ಞಾವಸ್ಥೆಯಲ್ಲಿದ್ದರು. ಆದರೆ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾರ ಹೃದಯ ಮತ್ತು ಶ್ವಾಸಕೋಶದ ಸ್ತಂಭನದೊಂದಿಗೆ ಅವರ ಸ್ಥಿತಿ ಗಂಭೀರವಾಯಿತು. ಇದಾದ ನಂತರ ಸ್ಥಳೀಯ ಆಸ್ಪತ್ರೆಯು ಅವರು ಸಾವನ್ನಪ್ಪಿದ್ದಾರೆ.
ಅಬೆ ಅವರ ಹತ್ಯೆಯ ನಂತರ ಪ್ರಧಾನಿ ಮೋದಿ ಭಾರತದಲ್ಲಿ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದರು.
ಪ್ರಧಾನಿ ಮೋದಿ ಅವರು “ಮೈ ಫ್ರೆಂಡ್, ಅಬೆ ಸ್ಯಾನ್” ಎಂಬ ಶೀರ್ಷಿಕೆಯ ಬ್ಲಾಗ್ ಅನ್ನು ಸಹ ಬರೆದಿದ್ದಾರೆ. “ಅಬೆ ಅವರ ನಿಧನದಲ್ಲಿ ಜಪಾನ್ ಮತ್ತು ಜಗತ್ತು ಒಬ್ಬ ಮಹಾನ್ ದಾರ್ಶನಿಕನನ್ನು ಕಳೆದುಕೊಂಡಿದೆ ಮತ್ತು ನಾನು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ” ಎಂದು ಅವರು ಹೇಳಿದ್ದರು. ಸೆಪ್ಟೆಂಬರ್ 27 ರಂದು ಅಬೆ ಅವರ ಅಂತ್ಯಕ್ರಿಯೆಯು ವಿಶ್ವ ಯುದ್ಧ 2 ರ ನಂತರ ಮಾಜಿ ಪ್ರಧಾನಿಯ ಎರಡನೇ ಸರ್ಕಾರಿ ಅಂತ್ಯಕ್ರಿಯೆಯಾಗಿದೆ. ಮೊದಲನೆಯದನ್ನು 1967 ರಲ್ಲಿ ಶಿಗೆರು ಯೋಶಿಡಾಗಾಗಿ ನಡೆಸಲಾಗಿತ್ತು.