PM Modi Varanasi visit: ಉತ್ತರ ಕರ್ನಾಟಕದ ಮಹಿಳೆಗೆ ಪಿಎಂ ಕಿಸಾನ್ ಯೋಜನೆ ಪ್ರಮಾಣ ಪತ್ರ ನೀಡಿದ ಮೋದಿ

ಈ ಕಾರ್ಯಕ್ರಮದ ನಂತರ ಪ್ರಧಾನಿಯವರು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯನ್ನು ವೀಕ್ಷಿಸಲಿದ್ದಾರೆ ಮತ್ತು ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರಾತ್ರಿ ವಾರಣಾಸಿಯಲ್ಲಿ ತಂಗಲಿದ್ದು, ಬುಧವಾರ ಬೆಳಗ್ಗೆ ಬಿಹಾರಕ್ಕೆ ತೆರಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

PM Modi Varanasi visit: ಉತ್ತರ ಕರ್ನಾಟಕದ ಮಹಿಳೆಗೆ ಪಿಎಂ ಕಿಸಾನ್ ಯೋಜನೆ ಪ್ರಮಾಣ ಪತ್ರ ನೀಡಿದ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jun 18, 2024 | 6:16 PM

ವಾರಣಾಸಿ, ಜೂನ್ 18: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಪಿಎಂ-ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಭಾಗಿಯಾಗಿದ್ದು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 17 ನೇ ಕಂತನ್ನು ಇಂದು (ಮಂಗಳವಾರ)ರಂದು ವಾರಣಾಸಿಯಲ್ಲಿ (Varanasi)ಬಿಡುಗಡೆ ಮಾಡಲಿದ್ದಾರೆ.. ಇದರಲ್ಲಿ 9.26 ಕೋಟಿಗೂ ಹೆಚ್ಚು ರೈತರು 20,000 ಕೋಟಿಗೂ ಅಧಿಕ ಮೊತ್ತದ ಲಾಭವನ್ನು ಪಡೆಯಲಿದ್ದಾರೆ.ಅದೇ ಪ್ರಧಾನ ಮಂತ್ರಿಗಳು ಕೃಷಿ ಸಖಿಗಳಾಗಿ ತರಬೇತಿ ಪಡೆದ 30,000 ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಪ್ಯಾರಾ ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ಮಾಡಲು ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವಾರು ರಾಜ್ಯ ಸಚಿವರು ಭಾಗಿಯಾಗಿದ್ದಾರೆ.

ಕಿಸಾನ್ ಸಮ್ಮೇಳನವನ್ನು ತಲುಪಿದ ನಂತರ ಪ್ರಧಾನಿ ಮೋದಿ ರೈತರೊಂದಿಗೆ ಸಂವಾದ ನಡೆಸಿದರು. ವಾರಣಾಸಿಯ ಮೂವರು ರೈತರು ಕೂಡ ಪ್ರಧಾನಮಂತ್ರಿಯವರು ಸಭೆಗೆ ಆಗಮಿಸಿದಾಗ ಅವರನ್ನು ಅಭಿನಂದಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ಮೂರನೇ ಬಾರಿಗೆ ಪ್ರಧಾನಿಯಾದ ನಂತರ ಪ್ರಧಾನಿ ಮೋದಿ ಮೊದಲ ಬಾರಿಗೆ ಕಾಶಿಗೆ ಬಂದಿದ್ದಾರೆ. ಪ್ರಧಾನಿ ಆಗಮನದೊಂದಿಗೆ ಇಲ್ಲಿನ ವಾತಾವರಣ ಆಹ್ಲಾದಕರವಾಗಿದೆ .3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುವ ಪ್ರಧಾನಮಂತ್ರಿ ಕಿಸಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 9.26 ಕೋಟಿ ಫಲಾನುಭವಿ ರೈತರಿಗೆ ₹ 20,000 ಕೋಟಿಗಿಂತ ಹೆಚ್ಚಿನ ಮೊತ್ತದ 17 ನೇ ಕಂತನ್ನು ಪ್ರಧಾನ ಮಂತ್ರಿ ನೇರ ಲಾಭ ವರ್ಗಾವಣೆ ಮೂಲಕ ಬಿಡುಗಡೆ ಮಾಡುತ್ತಾರೆ. ಇಲ್ಲಿಯವರೆಗೆ, 11 ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳು ಪಿಎಂ-ಕಿಸಾನ್ ಅಡಿಯಲ್ಲಿ 3.04 ಲಕ್ಷ ಕೋಟಿ.ರೂ.ಗಿಂತ ಹೆಚ್ಚಿನ ಪ್ರಯೋಜನಗಳನ್ನು ಪಡೆದಿವೆ ಎಂದು ಚೌಹಾಣ್ ಹೇಳಿದ್ದಾರೆಯ

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳೆದ 10 ವರ್ಷಗಳಲ್ಲಿ “ಪ್ರಧಾನಿ ಮೋದಿ ನೇತೃತ್ವದಲ್ಲಿ ಜನರು ಕಾಶಿಯ ಅಭಿವೃದ್ಧಿಯನ್ನು ಕಂಡಿದ್ದಾರೆ” ಎಂದು ಹೇಳಿದರು. ಅವರು ಪ್ರಧಾನಿಯನ್ನು “ಗಂಗಾ ಪುತ್ರ” ಎಂದು ಕರೆಯುವ ಮೂಲಕ ಸ್ವಾಗತಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 9.26 ಕೋಟಿ ಫಲಾನುಭವಿ ರೈತರಿಗೆ ₹ 20,000 ಕೋಟಿಗೂ ಹೆಚ್ಚು ಮೊತ್ತದ 17 ನೇ ಕಂತನ್ನು ಮೋದಿಯವರು ನೇರ ಲಾಭ ವರ್ಗಾವಣೆ ಮೂಲಕ ಬಿಡುಗಡೆ ಮಾಡಿದರು. ಇದಾದ ನಂತರ  ಜನರನ್ನುದ್ದೇಶಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಗೆದ್ದ ನಂತರ ನಾನು ವಾರಣಾಸಿಗೆ ಬಂದಿದ್ದೇನೆ. ನಾನು ಕಾಶಿಯ ಜನರಿಗೆ, ಬಾಬಾ ಕಾಶಿ ವಿಶ್ವನಾಥ್ ಮತ್ತು ಮಾ ಗಂಗಾ ಅವರಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.

ಮೋದಿ ಭಾಷಣ

ವಾರಣಾಸಿಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಚುನಾವಣೆಯು ಪ್ರಪಂಚದ ಮುಂದೆ ಭಾರತದ ಶಕ್ತಿಯನ್ನು ಪ್ರಸ್ತುತಪಡಿಸುತ್ತದೆ. ಜಗತ್ತಿನ ಬೇರೆಲ್ಲೂ ಇಷ್ಟು ದೊಡ್ಡ ಚುನಾವಣೆ ನಡೆಯುವುದಿಲ್ಲ. ಈ ಚುನಾವಣೆಯಲ್ಲಿ 64 ಕೋಟಿ ಜನರು ಮತ ಚಲಾಯಿಸಿದ್ದಾರೆ. “ಭಾರತೀಯ ಮತದಾರರು ಇಡೀ ಯುರೋಪಿಯನ್ ಯೂನಿಯನ್ ದೇಶಗಳ ಮತದಾರರಿಗಿಂತ ಎರಡೂವರೆ ಪಟ್ಟು ಹೆಚ್ಚು,  ಪ್ರಜಾಪ್ರಭುತ್ವದ ಈ ಹಬ್ಬವನ್ನು ಯಶಸ್ವಿಗೊಳಿಸಿದ ಕಾಶಿಯ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಮೂರನೇ ಬಾರಿಗೆ ಪ್ರಧಾನಿಯನ್ನು ಆಯ್ಕೆ ಮಾಡಿದ ಕಾಶಿಯ ಜನತೆಗೆ ನಾನು ಕೃತಜ್ಞನಾಗಿದ್ದೇನೆ.

ಕೆಲವೇ ದೇಶಗಳಲ್ಲಿ ಸರ್ಕಾರ ಹ್ಯಾಟ್ರಿಕ್ ಸಾಧಿಸುವುದು ಅಪರೂಪ, ಭಾರತದಲ್ಲಿ 60 ವರ್ಷಗಳ ಹಿಂದೆ ಹೀಗಾಯಿತು, ಆದರೆ ಜನರ ಸೇವೆ ಮಾಡಲು ಸಾರ್ವಜನಿಕರು ಮೂರನೇ ಬಾರಿಗೆ ನಮಗೆ ಆಶೀರ್ವಾದ ಮಾಡಿದ್ದಾರೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾನು ಕಿಸಾನ್, ನೌಜವಾನ್ ಮತ್ತು ಮಹಿಳೆಯರನ್ನು ಸಂಕಲ್ಪದ ಪ್ರಬಲ ಸ್ತಂಭಗಳಾಗಿ ಪರಿಗಣಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

“3 ಕೋಟಿ ಮಹಿಳೆಯರನ್ನು ಲಖ್ ಪತಿ  ದೀದಿಯನ್ನಾಗಿ ಮಾಡಲು ದೊಡ್ಡ ಹೆಜ್ಜೆ ಇಡಲಾಗಿದೆ. ಕೃಷಿ ಸಖಿಯಾಗಿ ಅವರಿಗೆ ಅಧಿಕಾರ ನೀಡಲಾಗುವುದು ಎಂದಿ ಮೋದಿ ಹೇಳಿದ್ದಾರೆ. ಈ ಚುನಾವಣೆಯಲ್ಲಿ 31 ಕೋಟಿಗೂ ಹೆಚ್ಚು ಮಹಿಳಾ ಮತದಾರರು ಭಾಗವಹಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಮತದಾರರು. ಈ ಸಂಖ್ಯೆ ಅಮೆರಿಕದ ಸಂಪೂರ್ಣ ಜನಸಂಖ್ಯೆಗೆ ಹತ್ತಿರವಾಗಿದೆ ಎಂದು ಮೋದಿ ಹೇಳಿದ್ದಾರೆ.

ನಿಮ್ಮ ಈ ನಂಬಿಕೆ ನನ್ನ ದೊಡ್ಡ ಆಸ್ತಿಯಾಗಿದೆ. ನಿಮ್ಮ ಈ ನಂಬಿಕೆಯು ನಿಮ್ಮ ಸೇವೆಗಾಗಿ ಶ್ರಮಿಸಲು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನನಗೆ ಸ್ಫೂರ್ತಿ ನೀಡುತ್ತದೆ.. ನಿಮ್ಮ ಕನಸುಗಳು ಮತ್ತು ನಿಮ್ಮ ಸಂಕಲ್ಪಗಳನ್ನು ಈಡೇರಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ. ನಾನು ರೈತರು, ಯುವಕರು, ಮಹಿಳೆಯರು ಮತ್ತು ಬಡವರನ್ನು ಅಭಿವೃದ್ಧಿ ಹೊಂದಿದ ಭಾರತದ ಭದ್ರ ಸ್ತಂಭಗಳೆಂದು ಪರಿಗಣಿಸಿದ್ದೇನೆ. ಅವರ ಸಬಲೀಕರಣದೊಂದಿಗೆ ನನ್ನ ಮೂರನೇ ಅವಧಿಯನ್ನು ಆರಂಭಿಸಿದ್ದೇನೆ. ಸರ್ಕಾರ ರಚನೆಯಾದ ತಕ್ಷಣ ರೈತರು ಮತ್ತು ಬಡ ಕುಟುಂಬಗಳಿಗೆ ಸಂಬಂಧಿಸಿದಂತೆ ಮೊದಲ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಸಮನ್ವಯದಲ್ಲಿ ಆಯೋಜಿಸಿದೆ. ಹೆಚ್ಚಿನ ಆದಾಯವಿಲ್ಲದ ಭೂಮಿ ಹೊಂದಿರುವ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಪಿಎಂ-ಕಿಸಾನ್ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ 6,000 ಆರ್ಥಿಕ ಲಾಭವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೋಡ್ ಮೂಲಕ ದೇಶಾದ್ಯಂತ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ರಾಜ್ಯದ ಇಬ್ಬರು ಮಹಿಳೆಯರು ಕೃಷಿ ಸಖಿ

ಮೋದಿಯವರು ನೈಸರ್ಗಿಕ ಕೃಷಿ ತರಬೇತಿ ಪಡೆದಿರುವ ಕೃಷಿ ಸಖಿಯರೊಂದಿಗೆ ಸಂವಾದ ನಡೆಸಿದ್ದು ಈ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೃಷಿ ಸಖಿ ಅನುಷಾ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಜಂಬೇಸಾಲ ಗ್ರಾಮದ ಲತಾ ರಾಜೀವ ಹೆಗಡೆ ಭಾಗಿಯಾಗಿದ್ದಾರೆ.

ಈ ಕಾರ್ಯಕ್ರಮದ ನಂತರ ಪ್ರಧಾನಿಯವರು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯನ್ನು ವೀಕ್ಷಿಸಲಿದ್ದಾರೆ ಮತ್ತು ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರಾತ್ರಿ ವಾರಣಾಸಿಯಲ್ಲಿ ತಂಗಲಿದ್ದು, ಬುಧವಾರ ಬೆಳಗ್ಗೆ ಬಿಹಾರಕ್ಕೆ ತೆರಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Tue, 18 June 24

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ