AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ನರೇಂದ್ರ ಮೋದಿ‌‌ಗಾಗಿ 13 ಕಿಮೀ ದೀಡ ನಮಸ್ಕಾರ ಹಾಕಿದ ಅಭಿಮಾನಿ

ಪ್ರಧಾನಿ ನರೇಂದ್ರ ಮೋದಿ‌‌ಗಾಗಿ 13 ಕಿಮೀ ದೀಡ ನಮಸ್ಕಾರ ಹಾಕಿದ ಅಭಿಮಾನಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ವಿವೇಕ ಬಿರಾದಾರ|

Updated on: Jun 14, 2024 | 2:45 PM

Share

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾದ ಸಂತಸದಲ್ಲಿ ಮಲ್ಲಿಕಾರ್ಜುನ ಎಂಬುವರು 13 ಕಿಮೀ ದೀಡ ನಮಸ್ಕಾರ ಹಾಕಿದ್ದಾರೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರ (BJP Government) ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಜೂನ್​ 09 ರಂದು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀರಿಸಿದ್ದಾರೆ. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾದ ಸಂತಸದಲ್ಲಿ ವಿಜಯನಗರ (Vijayanagar) ಜಿಲ್ಲೆಯ ಹರಪನಹಳ್ಳಿ (Harappanhalli) ತಾಲೂಕಿನ ಹಿರೇಮೆಗಳಗೆರೆ ಗ್ರಾಮದ ಬಿ. ಮಲ್ಲಿಕಾರ್ಜುನ ಎಂಬುವರು 13 ಕಿಮೀ ದೀಡ ನಮಸ್ಕಾರ ಹಾಕಿದ್ದಾರೆ. “ನರೇಂದ್ರ ಮೋದಿ‌‌ ಅವರು ಮತ್ತೆ ಪ್ರಧಾನಿಯಾಗಲಿ” ಎಂದು ಬಿ.‌ಮಲ್ಲಿಕಾರ್ಜುನ ದೇವಿ ಉಚ್ಚಂಗೆಮ್ಮಳ ಬಳಿ ಬೇಡಿಕೊಂಡಿಕೊಂಡು, ಹರಕೆ‌ ಕಟ್ಟಿಕೊಂಡಿದ್ದರು.

ಇದೀಗ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿದ್ದು, ಮಲ್ಲಿಕಾರ್ಜುನ ಅವರು ಹರಕೆಯಂತೆ ಹರೇಮೆಗಳಗೆರೆಯಿಂದ ಉಚ್ಚಂಗಿದುರ್ಗದ ಗುಡ್ಡದ ಐತಿಹಾಸಿಕ ಪುಣ್ಯಕ್ಷೇತ್ರ ಉಚ್ಚಂಗೆಮ್ಮದ ದೇವಸ್ಥಾನಕ್ಕೆ ಸುಮಾರು 13 ಕಿಮೀ ದೀಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ. ಮಲ್ಲಿಕಾರ್ಜುನ ಅವರ ಹರಕೆಗೆ ಗ್ರಾಮಸ್ಥರು ಸಾಥ್ ನೀಡಿದರು.

ಇದನ್ನೂ ಓದಿ: ಜಮೀರ್ ಅಹ್ಮದ್ ಸಂಧಾನಕ್ಕೂ ಬಗ್ಗದ ರೌಡಿಗಳು: ಫೇಸ್​ಬುಕ್​ನಲ್ಲಿ ಬೆದರಿಕೆ ಹಾಕಿದ್ದವನಿಂದ ನಡೆಯಿತು ಭೀಕರ ಕೊಲೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More