ನೇತಾಜಿ ಜಯಂತಿ ಪ್ರಯುಕ್ತ ಮಕ್ಕಳ ಜೊತೆ ಮೋದಿ ಸಂವಾದ; ಭಾರತದ ಭವಿಷ್ಯದ ಬಗ್ಗೆ ಚರ್ಚೆ

|

Updated on: Jan 23, 2025 | 5:48 PM

Parakram Diwas 2025: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ನೇತಾಜಿ ಜಯಂತಿಯನ್ನು ಪರಾಕ್ರಮ ದಿವಸ್ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಭಾಶ್ ಚಂದ್ರ ಬೋಸ್​ ಅವರಿಗೆ ಗೌರವ ಸಲ್ಲಿಸಿದರು ಮತ್ತು ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನೇತಾಜಿ ಜಯಂತಿ ಪ್ರಯುಕ್ತ ಮಕ್ಕಳ ಜೊತೆ ಮೋದಿ ಸಂವಾದ; ಭಾರತದ ಭವಿಷ್ಯದ ಬಗ್ಗೆ ಚರ್ಚೆ
Modi With Students
Follow us on

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ವಾರ್ಷಿಕೋತ್ಸವದ ದಿನವಾದ ಇಂದು ಪರಾಕ್ರಮ ದಿವಸ್ ಎಂದು ಆಚರಿಸಲಾಯಿತು. ಈ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತಾಜಿಗೆ ಗೌರವ ಸಲ್ಲಿಸಿದರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಭಾರತದ ಭವಿಷ್ಯ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಹಾಗೇ, ಮಕ್ಕಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಅನೇಕ ಮಾಹಿತಿಯನ್ನೂ ಮೋದಿ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ ಪ್ರಧಾನಿ ಮೋದಿ ಅವರು ನೇತಾಜಿಯವರ ದೇಶಭಕ್ತಿಯ ಮನೋಭಾವವನ್ನು ಪ್ರತಿಧ್ವನಿಸುವ ಮೂಲಕ ಮಕ್ಕಳೊಂದಿಗೆ “ಜೈ ಹಿಂದ್” ಎಂಬ ಘೋಷಣೆಯನ್ನು ಕೂಗಿದರು. ನಂತರ ಪ್ರಧಾನಿ ಒಬ್ಬ ವಿದ್ಯಾರ್ಥಿಯ ಬಳಿ “2047ರ ವೇಳೆಗೆ ನಾವು ಯಾವ ಗುರಿಯನ್ನು ಸಾಧಿಸಬೇಕು?” ಎಂದು ಕೇಳಿದರು. ಅದಕ್ಕೆ ಆ ವಿದ್ಯಾರ್ಥಿ “ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಬೇಕು” ಎಂದು ಉತ್ತರಿಸಿದನು.

ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಜನರು ಒಗ್ಗಟ್ಟಾಗಿರಬೇಕು ಎಂದು ಮಕ್ಕಳಿಗೆ ಕರೆ ನೀಡಿದರು. ದೇಶವನ್ನು ದುರ್ಬಲಗೊಳಿಸಲು ಮತ್ತು ನಮ್ಮ ಏಕತೆಯನ್ನು ಮುರಿಯಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂದು ಅವರು ಸೂಚಿಸಿದರು.

ಇದನ್ನೂ ಓದಿ: ರಾಷ್ಟ್ರೀಯ ಆರೋಗ್ಯ ಮಿಷನ್ 5 ವರ್ಷಕ್ಕೆ ವಿಸ್ತರಣೆ; ಮೋದಿ ಸಂಪುಟ ನಿರ್ಧಾರ

ಪ್ರಧಾನಿ ಮೋದಿ ಅವರು 2047ರ ಮಹತ್ವದ ಬಗ್ಗೆ ವಿಚಾರಿಸಿದಾಗ, ವಿದ್ಯಾರ್ಥಿಗಳು ಆ ವೇಳೆ ನಮಗೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುತ್ತದೆ. ಅಷ್ಟರಲ್ಲಿ ನಮ್ಮ ಪೀಳಿಗೆ ಬೆಳೆದು ದೇಶದ ಪ್ರಗತಿಗೆ ಗಣನೀಯವಾಗಿ ಕೊಡುಗೆ ನೀಡುವ ಸಮಯ ಬಂದಿರುತ್ತದೆ ಎಂದು ಹೇಳಿದರು. ಈ ವೇಳೆ ನೇತಾಜಿಯವರ ಪರಂಪರೆಯ ಬಗ್ಗೆ ಚರ್ಚಿಸುತ್ತಾ, ಪ್ರಧಾನಿ ಮೋದಿ ನೇತಾಜಿಯವರ ಜನ್ಮಸ್ಥಳವಾದ ಒಡಿಶಾದ ಕಟಕ್‌ನಲ್ಲಿ ಅವರ ಜೀವನ ಪ್ರಯಾಣವನ್ನು ಪ್ರದರ್ಶಿಸುವ ದೊಡ್ಡ ಪ್ರದರ್ಶನವನ್ನು ನಡೆಸುವುದಾಗಿ ಹೇಳಿದರು. ಅರ್ಥಪೂರ್ಣ ಗೌರವವನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನಿ ಮೋದಿ ಒಡಿಶಾದ ಜನರು ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.


ನೇತಾಜಿಯಿಂದ ಮಕ್ಕಳು ಯಾವ ರೀತಿಯ ಸ್ಫೂರ್ತಿಯನ್ನು ಪಡೆಯುತ್ತಾರೆ ಎಂಬ ಬಗ್ಗೆ ಕೇಳಿದಾಗ, ವಿದ್ಯಾರ್ಥಿಗಳು ನೇತಾಜಿಯ ಜೀವನವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸಲು ಮತ್ತು ಭಾರತದ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು. ಈ ವೇಳೆ ಪ್ರಧಾನಿ ಮೋದಿ ಈಗಾಗಲೇ ದೆಹಲಿಯಲ್ಲಿ 1,200 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಾಗಿದೆ ಎಂದು ಉಲ್ಲೇಖಿಸಿದರು.


ಸೌರಶಕ್ತಿಯನ್ನು ಬಳಸುವ ಮನೆಗಳಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಬಗ್ಗೆಯೂ ವಿದ್ಯಾರ್ಥಿಗಳೊಂದಿಗೆ ಮೋದಿ ಮಾತನಾಡಿದರು. ಇದು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಗಮನಾರ್ಹವಾಗಿ ಕೊಡುಗೆ ನೀಡಿದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: ಯಲ್ಲಾಪುರದ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ; ಕೇಂದ್ರದಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಆರಾಮದಾಯಕ ಜೀವನವನ್ನು ತ್ಯಜಿಸುವ ನೇತಾಜಿಯವರ ನಿರ್ಧಾರದ ಬಗ್ಗೆ ಮಕ್ಕಳಿಗೆ ತಿಳಿಸಿದ ಮೋದಿ, ಸುಭಾಷ್ ಚಂದ್ರ ಬೋಸ್ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡುವ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಅದೇ ರೀತಿ, ವಿಕಸಿತ್ ಭಾರತದ ನಿರ್ಣಯವನ್ನು ಪೂರೈಸಲು ನಾವು ನಮ್ಮ ಸೌಕರ್ಯ ವಲಯಗಳಿಂದ ಹೊರಬರಬೇಕು, ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.


ಅಂಡಮಾನ್ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಭೂಮಿ. ನೇತಾಜಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಇಲ್ಲಿಯೇ ಎಂದು ಪ್ರಧಾನಿ ಮೋದಿ ಹೇಳಿದರು. ಅಂಡಮಾನ್ ದ್ವೀಪಗಳಿಗೆ ಬೋಸ್ ಅವರ ಹೆಸರಿಡುವುದು, ಇಂಡಿಯಾ ಗೇಟ್‌ನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವುದು ಮತ್ತು ಅವರ ಜನ್ಮ ದಿನಾಚರಣೆಯನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸುವುದರ ಮೂಲಕ ನೇತಾಜಿಗೆ ನಮ್ಮ ಸರ್ಕಾರ ಗೌರವ ಸಲ್ಲಿಸುತ್ತದೆ ಎಂದು ಮೋದಿ ಹೇಳಿದರು.

ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ದೇಶಾದ್ಯಂತ ಪರಾಕ್ರಮ್ ದಿವಸ್ ಎಂದೂ ಕರೆಯಲಾಗುತ್ತದೆ. ಭಾರತದ ಸ್ವಾತಂತ್ರ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಪರಂಪರೆಯನ್ನು ಆಚರಿಸಲು ಇದನ್ನು ಆಚರಿಸಲಾಗುತ್ತದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯಂದು ಇಡೀ ದೇಶವು ಅವರನ್ನು ಗೌರವದಿಂದ ಸ್ಮರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ