PM Narendra Modi Speech: ದೇಶದಲ್ಲಿ ಲಾಕ್​ಡೌನ್​ ಇಲ್ಲ; ಮೋದಿ ಸ್ಪಷ್ಟನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2021 | 9:16 PM

Narendra Modi Address The Nation LIVE: 7.30ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಸೋಂಕು ನಿಯಂತ್ರಣಕ್ಕೆ ಹೊಸ ಕ್ರಮಗಳನ್ನು ಘೋಷಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.. 

PM Narendra Modi Speech: ದೇಶದಲ್ಲಿ ಲಾಕ್​ಡೌನ್​ ಇಲ್ಲ; ಮೋದಿ ಸ್ಪಷ್ಟನೆ
ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ದಿನೇದಿನೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ವಿವಿಧ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿ, ಮುಖ್ಯಮಂತ್ರಿಗಳ ಅಭಿಪ್ರಾಯ ತಿಳಿದುಕೊಂಡಿದ್ದಾರೆ. ಸಭೆಯ ನಂತರ, ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ಲಾಕ್​ಡೌನ್​ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. 

LIVE NEWS & UPDATES

The liveblog has ended.
  • 08 Apr 2021 08:38 PM (IST)

    ಮೋದಿ ಮಾತು ಮುಕ್ತಾಯ

    ನಾವು ಮೊದಲಿನಂತೆ ಈ ಸಲವೂ ಕೊರೊನಾ ಮಣಿಸುತ್ತೇವೆ. ನಿಮ್ಮ ಗಮನ ಟೆಸ್ಟಿಂಗ್ ಕಡೆಗೆ ಇರಲಿ. ಟೀಕಾ ಉತ್ಸವದ ಹೊತ್ತಿಗೆ ಎಲ್ಲವೂ ಒಂದು ಹಂತಕ್ಕೆ ಬರುತ್ತದೆ ಎನ್ನುವುದು ನನ್ನ ವಿಶ್ವಾಸ.

  • 08 Apr 2021 08:36 PM (IST)

    ಈ ವಿಚಾರದಲ್ಲಿ ದಯವಿಟ್ಟು ರಾಜಕಾರಣ ಬೇಡ- ಮೋದಿ

    ಅಸಿಂಪ್ಟಮೆಟಿಕ್ ವ್ಯಕ್ತಿಗಳ ವಿಚಾರದಲ್ಲಿ ಎಚ್ಚರವಿರಬೇಕು. ಟೆಸ್ಟಿಂಗ್​ ಹೆಚ್ಚಾಗಬೇಕು. ನಾವು ಮೊದಲು ಒಂದು ಲ್ಯಾಬ್ ಮೂಲಕ ಆರಂಭಿಸಿದೆವು. ಆದರೆ ಈಗ ಜಿಲ್ಲೆಗೊಂದು ಲ್ಯಾಬ್​ಗಳಿವೆ. ಈ ವಿಚಾರದಲ್ಲಿ ದಯವಿಟ್ಟು ರಾಜಕಾರಣ ಬೇಡ. ಇದು ನಮಗೆ ದೇವರು ವಹಿಸಿರುವ ಕರ್ತವ್ಯ. ನಮ್ಮ ಎಲ್ಲ ಮುಖ್ಯಮಂತ್ರಿಗಳೂ ತಮ್ಮ ರಾಜ್ಯಗಳ ಎಲ್ಲ ಪಕ್ಷಗಳ ನಾಯಕರನ್ನು ಜೊತೆಗೂಡಿಸಿಕೊಂಡು ಕೊರೊನಾ ಮಣಿಸಲು ಮುಂದೆ ಬರಬೇಕು.


  • 08 Apr 2021 08:32 PM (IST)

    ಗೆದ್ದೇಗೆಲ್ಲುತ್ತೇವೆ. ನೀವೆಲ್ಲರೂ ಸಹಕಾರ ನೀಡಬೇಕು- ಮೋದಿ

    ನಿಮ್ಮ ರಾಜ್ಯದ ಎಲ್ಲ ಚುನಾಯಿತ ಪ್ರತಿನಿಧಿಗಳ ಜೊತೆಗೆ ವರ್ಚುವಲ್​ ಮೀಟಿಂಗ್ ನಡೆಸಿ ಸಂವಾದ ನಡೆಸಿ. ಶಾಸಕಾಂಗ ಸಭೆಯ ನಾಯಕರು ಸೇರಿದಂತೆ ಎಲ್ಲರೂ ಮಾತನಾಡಿ. ಇದರಲ್ಲಿ ರಾಜಕಾರಣ ಬೇಡ. ಎಲ್ಲರೂ ಸೇರಿ ಕೊರೊನಾ ಮಣಿಸೋಣ ಎಂಬ ಸಂದೇಶ ರವಾನಿಸಿ. ರಾಜ್ಯಪಾಲರು ದೊಡ್ಡದೊಡ್ಡ ನಗರಗಳಲ್ಲಿ ಸಭೆಗಳನ್ನು ನಡೆಸಲಿ. ಧಾರ್ಮಿಕ ಮುಖಂಡರನ್ನು ಸೇರಿಸಿ. ವರ್ಚುವಲ್ ಆಗಿ ಇತರರನ್ನು ಸೇರಿಸಿಕೊಳ್ಳಿ. ಸೆಲೆಬ್ರಿಟಿಗಳು ಪ್ರಭಾವಿಗಳನ್ನೂ ಸೇರಿಸಿಕೊಳ್ಳಿ. ಜನರಲ್ಲಿ ಜಾಗೃತಿ ಮೂಡಿಸುವುದು ಮಾತ್ರ ನಮ್ಮೆದುರು ಇರುವ ಪರಿಹಾರ. ಲಸಿಕೆ ಇಲ್ಲದ ಸಂದರ್ಭದಲ್ಲಿಯೇ ನಾವು ಕೊರೊನಾ ಯುದ್ಧ ಗೆದ್ದಿದ್ದೆವು. ಈಗ ನಮ್ಮ ಬಳಿ ಲಸಿಕೆ ಎಂಬ ಅಸ್ತ್ರವಿದೆ. ನಾವು ಗೆದ್ದೇಗೆಲ್ಲುತ್ತೇವೆ. ನೀವೆಲ್ಲರೂ ಸಹಕಾರ ನೀಡಬೇಕು.

  • 08 Apr 2021 08:31 PM (IST)

    ಲಸಿಕೆ ಹಾಕಿಸಿಕೊಳ್ಳಲು ಜನರಿಗೆ ಸಹಾಯ ಮಾಡಿ, ಇದು ಪುಣ್ಯದ ಕೆಲಸ- ಮೋದಿ

    ಸರ್ಕಾರವು ಒಂದು ಅತ್ಯುತ್ತಮ ಡಿಜಿಟಲ್ ವ್ಯವಸ್ಥೆ ಮಾಡಿದೆ. ನಿಮ್ಮ ಕುಟುಂಬ ಅಥವಾ ಸುತ್ತಮುತ್ತ ಯಾರಿಗಾದರೂ ಈ ವ್ಯವಸ್ಥೆಯ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ ದಯವಿಟ್ಟು ನೀವು ಅಂದ್ರೆ ಯುವಜನರು ಅವರಿಗೆ ನೆರವಾಗಿ. ನಮ್ಮ ಎನ್​ಸಿಸಿ ಕೆಡೆಟ್​ಗಳು ನೆರವು ನೀಡಲು ಮುಂದೆ ಬರಬೇಕು. ಲಸಿಕೆ ಹಾಕಿಸಿಕೊಳ್ಳಲು ಜನರಿಗೆ ಸಹಾಯ ಮಾಡಿ. ಇದು ಪುಣ್ಯದ ಕೆಲಸ.

  • 08 Apr 2021 08:29 PM (IST)

    ಏಪ್ರಿಲ್ ತಿಂಗಳಲ್ಲಿ ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತು ನೀಡೋಣ- ಮೋದಿ

    ಲಸಿಕೆ ಬಳಕೆ ವಿಚಾರದಲ್ಲಿ ನಾವು ಶೂನ್ಯ ವ್ಯರ್ಥದ ಗುರಿ ಸಾಧಿಸಬೇಕು. ಏಪ್ರಿಲ್ ತಿಂಗಳಲ್ಲಿ ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತು ನೀಡೋಣ. ನಾವು ಏನಾದರೂ ಸಾಧಿಸಿದೆವು ಎಂಬ ತೃಪ್ತಿ ಬರುವಂತೆ ಕೆಲಸ ಮಾಡೋಣ. ಭಾರತ ಸರ್ಕಾರವು ಹೆಚ್ಚು ಲಸಿಕೆ ತಲುಪಿಸಲು ಎಲ್ಲ ಪ್ರಯತ್ನ ಮಾಡುತ್ತಿದೆ. ನಿಮ್ಮ ಸುತ್ತಮುತ್ತಲೂ ಇರುವ ಎಲ್ಲ 45 ವರ್ಷ ದಾಟಿದವರೂ ಲಸಿಕೆ ಹಾಕಿಸಿಕೊಳ್ಳಲು ಸಹಾಯ ಮಾಡಿ, ನಿಮಗೆ 45 ವರ್ಷ ಆಗಿದ್ದರೆ ತಕ್ಷಣ ನೀವೂ ಹಾಕಿಸಿಕೊಳ್ಳಿ.

  • 08 Apr 2021 08:27 PM (IST)

    ಲಸಿಕೆ ಅಭಿವೃದ್ಧಿಯ ಜೊತೆಗೆ ಲಸಿಕೆ ವ್ಯರ್ಥವಾಗುವ ಬಗ್ಗೆಯೂ ಚರ್ಚೆಯಾಗಿದೆ- ಮೋದಿ

    ಲಸಿಕೆ ಅಭಿವೃದ್ಧಿಯ ಜೊತೆಗೆ ಲಸಿಕೆ ವ್ಯರ್ಥವಾಗುವ ಬಗ್ಗೆಯೂ ಚರ್ಚೆಯಾಗಿದೆ. ನಮ್ಮ ಬಳಿ ಇರುವುದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಲಸಿಕೆಗಳನ್ನು ಇಡೀ ದೇಶವನ್ನು ಗಮನದಲ್ಲಿರಿಸಿಕೊಂಡು ಬಳಸಬೇಕು. ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಲು ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು. ಹೆಚ್ಚು ಅಪಾಯದ ಗುಂಪುಗಳಿಗೆ ಸಂಪೂರ್ಣವಾಗಿ ಲಸಿಕೆ ಹಾಕಬೇಕು.

  • 08 Apr 2021 08:25 PM (IST)

    ಜನರ ಜೀವ ಉಳಿಸುವುದು ನಮ್ಮ ಆದ್ಯತೆಯಾಗಲಿ- ಮೋದಿ

    ಮೃತರ ವಿಚಾರದಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿ. ಯಾವಾಗ ಸೋಂಕು ಲಕ್ಷಣ ಕಾಣಿಸಿಕೊಂಡಿತು? ಹೇಗೆ ಚಿಕಿತ್ಸೆ ನೀಡಲಾಯಿತು? ಇತ್ಯಾದಿ ವಿಚಾರಗಳನ್ನು ಮರೆಯದೇ ದಾಖಲಿಸಿ. ಆಂಬುಲೆನ್ಸ್, ಆಕ್ಸಿಜನ್, ವೆಂಟಿಲೇಟರ್​ಗಳ ಅಗತ್ಯದ ಬಗ್ಗೆ ಆಗಾಗ ಸಮೀಕ್ಷೆ ಮಾಡಿ. ಜನರ ಜೀವ ಉಳಿಸುವುದು ನಮ್ಮ ಆದ್ಯತೆಯಾಗಲಿ. ಲಸಿಕೆ ವಿಚಾರದಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ವಿಶ್ವದ ಸಮೃದ್ಧ ದೇಶ ನಮ್ಮದು. ಇಲ್ಲಿ ಲಸಿಕೆ ತಯಾರಿಕೆಯ ಕಾರ್ಖಾನೆಗಳಿವೆ. ಹೊಸ ಲಸಿಕೆಗಳ ಅಭಿವೃದ್ಧಿಯ ಕೆಲಸಗಳೂ ನಡೆಯುತ್ತಿವೆ.

  • 08 Apr 2021 08:21 PM (IST)

    ಟ್ರ್ಯಾಕಿಂಗ್ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಿ- ಮೋದಿ

    ಕೆಲ ರಾಜ್ಯಗಳಲ್ಲಿ ಈ ವಿಚಾರವಾಗಿ ಮೂಲಸೌಕರ್ಯ ಹೆಚ್ಚಿಸಬೇಕಿದೆ. ಇದನ್ನು ಎಷ್ಟು ಬೇಗ ಮಾಡಿದ್ರೆ ಅಷ್ಟು ಒಳ್ಳೇದು. ಕಂಟೇನ್​ಮೆಂಟ್​ ವಲಯಗಳಲ್ಲಿ ಟೆಸ್ಟಿಂಗ್​ ಮಾಡಿಸಲೇಬೇಕು. ಅಲ್ಲಿರುವ ಎಲ್ಲರನ್ನೂ ಟೆಸ್ಟ್ ಮಾಡಿ. ಟ್ರ್ಯಾಕಿಂಗ್ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಿ. 72 ಗಂಟೆಗಳಲ್ಲಿ 30 ಕಾಂಟ್ಯಾಕ್ಟ್​ ಟ್ರೇಸಿಂಗ್ ಮಾಡೋಣ. ಇದು ನಮ್ಮ ಟಾರ್ಗೆಟ್ ಆಗಿರಲಿ. ಕಂಟೇನ್​ಮೆಂಟ್​ ಗಡಿಯನ್ನು ಸರಿಯಾಗಿ ನಿರ್ಧರಿಸಿ. ಇಡೀ ಬಡಾವಣೆ, ಹಳ್ಳಿಗಳನ್ನು ಕಂಟೇನ್​ಮೆಂಟ್​​ ಎಂದು ಘೋಷಿಸಬೇಡಿ.

  • 08 Apr 2021 08:18 PM (IST)

    ಪಾಸಿಟಿವ್ ಪ್ರಕರಣಗಳು ಹೆಚ್ಚಾದರೂ ಪರವಾಗಿಲ್ಲ-ಮೋದಿ

    ಸಂಖ್ಯೆ ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಟೆಸ್ಟಿಂಗ್​ ಕಡಿಮೆ ಮಾಡಬೇಕು. ಸಂಖ್ಯೆ ಹೆಚ್ಚಾದರೂ ಪರವಾಗಿಲ್ಲ. ಅದರ ಬಗ್ಗೆ ಚಿಂತಿಸಬೇಡಿ. ಟೆಸ್ಟಿಂಗ್​ ಮಾತ್ರ ನಮ್ಮನ್ನು ಈ ಸ್ಥಿತಿಯಿಂದ ಮೇಲೆತ್ತಬಲ್ಲದು. ಒಂದು ರಾಜ್ಯವನ್ನು ಮತ್ತೊಂದು ರಾಜ್ಯದೊಂದಿಗೆ ಹೋಲಿಸುವುದು ಬೇಡ. ಪಾಸಿಟಿವ್ ಪ್ರಕರಣಗಳು ಹೆಚ್ಚಾದರೂ ಪರವಾಗಿಲ್ಲ. ನಾವು ಶೇ 70ರಷ್ಟು ಆರ್​ಟಿಪಿಸಿಆರ್​ ಟೆಸ್ಟ್ ಮಾಡಬೇಕು. ಕೆಲವರು ತುಂಬಾ ಕೆಟ್ಟದಾಗಿ ಸ್ಯಾಂಪಲ್ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸರಿಯಾದ ಫಲಿತಾಂಶ ಸಿಗುತ್ತಿಲ್ಲ.

  • 08 Apr 2021 08:17 PM (IST)

    ಕೆಲ ರಾಜ್ಯಗಳು ಟೆಸ್ಟಿಂಗ್​ ಕಡಿಮೆ ಮಾಡಿ ಪ್ರಕರಣಗಳು ಕಡಿಮೆ ಎನ್ನುತ್ತಿವೆ- ಮೋದಿ

    ಒಬ್ಬರಿಗೆ ಬಂದಾಗ ಯಾಮಾರಿದರೆ ಇಡೀ ಕುಟುಂಬ ಸಮಸ್ಯೆಯಲ್ಲಿ ಸಿಲುಕುತ್ತದೆ. ಶುರುವಿನಲ್ಲಿ ಅಸಿಂಪ್ಟಮೆಟಿಕ್ ಪ್ರಕರಣಗಳನ್ನು ಕಂಡುಹಿಡಿಯುವುದು ಕಷ್ಟ. ಇದಕ್ಕಿರುವ ಒಂದೇ ಪರಿಹಾರವೆಂದರೆ ನಾವು ಟೆಸ್ಟಿಂಗ್ ಹೆಚ್ಚಿಸಬೇಕು. ನೀವು ಮನೆಗೆ ಆಮಂತ್ರಿಸುವವರೆಗೆ ಕೊರೊನಾ ಬರುವುದಿಲ್ಲ. ನೀವು ನಿಯಮಗಳನ್ನು ಪಾಲಿಸಿ. ಕೊರೊನಾ ನಿಯಂತ್ರಣಕ್ಕೆ ಬರುತ್ತೆ. ಟೆಸ್ಟಿಂಗ್ ವಿಚಾರದಲ್ಲಿ ಯಾಮಾರಬೇಡಿ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಿ. ಕೆಲ ರಾಜ್ಯಗಳು ಟೆಸ್ಟಿಂಗ್​ ಕಡಿಮೆ ಮಾಡಿ ಪ್ರಕರಣಗಳು ಕಡಿಮೆ ಎನ್ನುತ್ತಿವೆ. ಇದು ತಪ್ಪು.

  • 08 Apr 2021 08:15 PM (IST)

    ಜನರಲ್ಲಿ ಮೊದಲಿನಂತೆ ಭಯವಿಲ್ಲ- ಮೋದಿ

    ಟೆಸ್ಟ್, ಟ್ರ್ಯಾಕ್, ಟ್ರೀಟ್, ಕೋವಿಡ್ ಮ್ಯಾನೇಜ್​ಮೆಂಟ್​ ಕಡೆಗೆ ನಾವು ಹೆಚ್ಚು ಗಮನ ಕೊಡೋಣ. ನಾನು ಎಲ್ಲ ಮುಖ್ಯಮಂತ್ರಿಗಳನ್ನೂ ವಿನಂತಿಸುತ್ತೇನೆ. ನೀವು ನಿಮ್ಮ ರಾಜ್ಯಗಳಲ್ಲಿ ಸಮೀಕ್ಷೆ ಮಾಡಿಸಿ. ಕೊರೊನಾದ ಆರಂಭದ ದಿನಗಳಲ್ಲಿ ತುಸು ಲಕ್ಷಣವಿದ್ದರೂ ಜನರು ಹೆದರಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಅಸಿಂಪ್ಟಮೆಟಿಕ್ ಜಾಸ್ತಿಯಿದ್ದಾರೆ. ಜನರಲ್ಲಿಯೂ ಮೊದಲಿನಂತೆ ಭಯವಿಲ್ಲ.

  • 08 Apr 2021 08:14 PM (IST)

    ಮೈಕ್ರೊ ಕಂಟೇನ್​ಮೆಂಟ್​ ವಲಯಗಳನ್ನು ಗುರುತಿಸಿ. ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ- ಮೋದಿ

    ನಾನು ಮತ್ತೊಮ್ಮೆ ಹೇಳ್ತೀನಿ, ಮೈಕ್ರೊ ಕಂಟೇನ್​ಮೆಂಟ್​ ವಲಯಗಳನ್ನು ಗುರುತಿಸಿ. ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಫಲಿತಾಂಶ ಖಂಡಿತ ಉತ್ತಮಗೊಳ್ಳುತ್ತೆ. ಕೋವಿಡ್​ನ ಸಕ್ರಿಯ ಪ್ರಕರಣಗಳು ಒಂದು ಕಾಲದಲ್ಲಿ 10 ಲಕ್ಷ ಇತ್ತು. ಆಮೇಲೆ ಅದು ಗಣನೀಯವಾಗಿ ಕಡಿಮೆಯಾಗಲಿಲ್ವೇ? ವಿಶ್ವಾಸವಿಟ್ಟುಕೊಂಡು ಪ್ರಯತ್ನ ಮಾಡೋಣ.

  • 08 Apr 2021 08:12 PM (IST)

    ರಾತ್ರಿ ಕರ್ಫ್ಯೂ ಬಗ್ಗೆ ನರೇಂದ್ರ ಮೋದಿ ಮಾತು

    ನಾವು ಈಗ ಮೈಕ್ರೊ ಕಂಟೇನ್​ಮೆಂಟ್​ಗಳನ್ನು ಮಾಡಬೇಕು. ಅಲ್ಲಿಗೆ ಹೆಚ್ಚು ಗಮನಕೊಡಬೇಕು. ರಾತ್ರಿ ಕರ್ಫ್ಯೂ ಎಂಬ ಹೆಸರನ್ನು ಕೊರೊನಾ ಕರ್ಫ್ಯೂ ಎಂದು ಕರೆಯೋಣ. ಕೆಲವರು ಕೊರೊನಾ ರಾತ್ರಿ ಮಾತ್ರ ಬರುತ್ತಾ ಅಂತ ವ್ಯಂಗ್ಯವಾಡುತ್ತಾರೆ. ನಾನು ಏನೂ ಹೇಳುವುದಿಲ್ಲ. ಕೊರೊನಾ ಕರ್ಫ್ಯೂ ಎಂದು ಕರೆದಾಗ ಜನರಿಗೆ ಹೆಚ್ಚು ಜಾಗೃತಿ ಮೂಡಿಸಲು ಸಾಧ್ಯವಾಗುತ್ತೆ. ಅಂಥ ಸಂದರ್ಭದಲ್ಲಿ ಜನರಿಗೆ ಪದೇಪದೆ ನಾವು ಏಕೆ ಕರ್ಫ್ಯೂ ಸ್ಥಿತಿ ಎದುರಿಸಬೇಕಾಯಿತು ಎಂಬ ಮನವರಿಕೆ ಆಗುತ್ತೆ.

  • 08 Apr 2021 08:11 PM (IST)

    ಜನರು ಕಾಳಜಿ ವಹಿಸುವುದು ಕಡಿಮೆ ಮಾಡುತ್ತಿದ್ದಾರೆ- ಮೋದಿ

    ಜನರು ಕಾಳಜಿ ವಹಿಸುವುದು ಕಡಿಮೆ ಮಾಡುತ್ತಿದ್ದಾರೆ. ಮೊದಲ ಅಲೆಯನ್ನು ನಾವು ನಿರ್ವಹಿಸಿದ ರೀತಿಯಿಂದ ಗಳಿಸಿದ ಅನುಭವವನ್ನು ನಮ್ಮ ಕೊರೊನಾ ವಾರಿಯರ್ಸ್​ ಸಮರ್ಪಕವಾಗಿ ಬಳಸಿಕೊಳ್ಳಬೇಕು.

  • 08 Apr 2021 08:10 PM (IST)

    ದೇಶವು 1ನೇ ಅಲೆಯನ್ನು ಸರಿಯಾಗಿ ನಿಭಾಯಿಸಿತು- ಮೋದಿ

    ಆದರೂ ನಾವು ಕೆಲ ವಿಷಯಗಳನ್ನು ಗಮನಿಸಲೇ ಬೇಕಿದೆ. ದೇಶವು 1ನೇ ಅಲೆಯನ್ನು ಸರಿಯಾಗಿ ನಿಭಾಯಿಸಿತು. ಆದರೆ ಈ ಬಾರಿ ಸೋಂಕು ಹರಡುವ ವೇಗ ಹೆಚ್ಚಾಗಿದೆ. ಮಹಾರಾಷ್ಟ್ರ, ಛತ್ತೀಸಗಡ ಸೇರಿದಂತೆ ಕೆಲ ರಾಜ್ಯಗಳಲ್ಲಿ 1ನೇ ಅಲೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಮೋದಿ ಹೇಳಿದರು.

  • 08 Apr 2021 08:08 PM (IST)

    ಭಾರತ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ- ಮೋದಿ

    ಭಾರತ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ. ಕೆಲ ರಾಜ್ಯಗಳ ಸ್ಥಿತಿ ಹೆಚ್ಚು ಚಿಂತಾಜನಕವಾಗಿದೆ. ಇಂಥ ಸಂದರ್ಭಗಳಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅತ್ಯಗತ್ಯವಾಗಿದೆ. ಒಂದಿಡೀ ವರ್ಷ ನಾವು ಕೊರೊನಾದ ಎದುರು ಹೋರಾಡಿದ್ದೇವೆ. ಹೀಗಾಗಿ ಮತ್ತೆ ಬಿಗಿಕ್ರಮ ಜರುಗಿಸುವುದು ಕಷ್ಟವಾಗುತ್ತೆ. ಇದೇ ವಿಚಾರ ಎಲ್ಲರೂ ಹೇಳ್ತಿದ್ದಾರೆ.

  • 08 Apr 2021 08:07 PM (IST)

    ಮಾತು ಆರಂಭಿಸಿದ ನರೇಂದ್ರ ಮೋದಿ

    ದೇಶದಲ್ಲಿ ದಿನೇದಿನೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಈಗ ಮೋದಿ ಮಾತು ಆರಂಭಿಸಿದ್ದಾರೆ. 

  • 08 Apr 2021 07:26 PM (IST)

    ಕೆಲವೇ ಕ್ಷಣದಲ್ಲಿ ಪ್ರಧಾನಿ ಮೋದಿ ಮಾತು ಆರಂಭ..

    ದೇಶದಲ್ಲಿ ದಿನೇದಿನೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸುತ್ತಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ವಿವಿಧ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿ, ಮುಖ್ಯಮಂತ್ರಿಗಳ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದಾರೆ. ಸಭೆಯ ನಂತರ, ಅಂದರೆ 7.30ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಸೋಂಕು ನಿಯಂತ್ರಣಕ್ಕೆ ಹೊಸ ಕ್ರಮಗಳನ್ನು ಘೋಷಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ

Published On - 8:38 pm, Thu, 8 April 21

Follow us on