ಗುಜರಾತ್ನ ಲಖ್ಪತ್ ಸಾಹೀಬ್ನಲ್ಲಿ ಇಂದು ಗುರುಪುರಬ್ ಆಚರಣೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತು
ಈ ಗುರುದ್ವಾರ 2001ರ ಭೂಕಂಪದಲ್ಲಿ ಹಾನಿಗೊಳಗಾಗಿತ್ತು. ಆಗ ನರೇಂದ್ರ ಮೋದಿಯವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದರು. ಗುರುದ್ವಾರವನ್ನು ಕೆಲವೇ ದಿನಗಳಲ್ಲಿ, ಅತ್ಯಂತ ಶೀಘ್ರವಾಗಿಯೇ ದುರಸ್ತಿ ಮಾಡಿಸಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುಜರಾತ್ನ ಕಚ್ನಲ್ಲಿರುವ ಗುರುದ್ವಾರ ಲಖ್ಪತ್ ಸಾಹೀಬ್ನಲ್ಲಿ ನಡೆಯಲಿರುವ ಗುರು ನಾನಕ್ ಅವರ ಗುರುಪುರಬ್ ಆಚರಣೆಯಲ್ಲಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಇಂದು ಮಧ್ಯಾಹ್ನ 12.30ರ ಹೊತ್ತಿಗೆ ಪ್ರಧಾನಿ ಮೋದಿ (PM Narendra Modi) ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ ಎಂದು ಪಿಎಂಒ ತಿಳಿಸಿದೆ. ಸಿಖ್ ಧರ್ಮವನ್ನು ಸ್ಥಾಪಿಸಿದ ಗುರುನಾನಕರ ಜನ್ಮದಿನವಾದ ಗುರುಪುರಬ್ನ್ನು ಆಚರಿಸಲು ಪ್ರತಿವರ್ಷವೂ ಡಿ.23-25 ರವರೆಗೆ ಗುಜರಾತ್ನ ಗುರುದ್ವಾರ ಲಖ್ಪತ್ ಸಾಹೀಬ್ನಲ್ಲಿ ಸಿಖ್ಖರು ಸೇರುತ್ತಾರೆ. ಗುರುನಾನಕ್ ದೇವ್ ಅವರು ತಮ್ಮ ಪ್ರಯಾಣದ ಸಂದರ್ಭದಲ್ಲಿ ಇಲ್ಲಿಯೇ ತಂಗಿದ್ದರು ಎಂದು ಹೇಳಲಾಗಿದೆ. ಲಖ್ಪತ್ ಸಾಹೀಬ್ ಎಂಬುದು ಅವರ ಮರದ ಪಾದರಕ್ಷೆಗಳು, ತೊಟ್ಟಿಲು, ಹಸ್ತಪ್ರತಿಗಳು ಮತ್ತು ಗುರುಮುಖಿಯ ಗುರುತು ಲಿಪಿಗಳನ್ನೊಳಗೊಂಡಿದೆ ಎಂದೂ ಪಿಎಂಒ ಮಾಹಿತಿ ನೀಡಿದೆ.
ಈ ಗುರುದ್ವಾರ 2001ರ ಭೂಕಂಪದಲ್ಲಿ ಹಾನಿಗೊಳಗಾಗಿತ್ತು. ಆಗ ನರೇಂದ್ರ ಮೋದಿಯವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದರು. ಗುರುದ್ವಾರವನ್ನು ಕೆಲವೇ ದಿನಗಳಲ್ಲಿ, ಅತ್ಯಂತ ಶೀಘ್ರವಾಗಿಯೇ ದುರಸ್ತಿ ಮಾಡಿಸಿದ್ದರು. ಗುರುನಾನಕ್ ದೇವ್ ಜಿ ಅವರ 550ನೇ ಪ್ರಕಾಶ ಪುರಬ್, ಗುರು ಗೋವಿಂದ್ ಸಿಂಗ್ ಜಿ ಅವರ 350ನೇ ಪ್ರಕಾಶ ಪುರಬ್ ಮತ್ತು ಗುರು ತೇಗ್ ಬಹದ್ದೂರ್ ಅವರ 400ನೇ ಪ್ರಕಾಶ ಪುರಬ್ ಆಚರಣೆ ಅವರು ಕ್ರಮ ಕೈಗೊಂಡಿದ್ದಾರೆ. ಇದೆಲ್ಲ ಪ್ರಧಾನಿ ಮೋದಿಯವರು ಸಿಖ್ ಧರ್ಮದ ಮೇಲೆ ಇಟ್ಟ ಅಪಾರ ಗೌರವವನ್ನು ಸೂಚಿಸುತ್ತದೆ ಎಂದೂ ಪಿಎಂಒ ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಮೊದಲು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ನಿಮಿತ್ತ, ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ. ಇಡೀ ದೇಶದ ಅಭಿವೃದ್ಧಿಗೆ ತಮ್ಮಿಡೀ ಜೀವನವನ್ನು ಮುಡಿಪಾಗಿಟ್ಟ ಅಟಲ್ ಜೀ ಅವರಿಗೆ ಕೋಟಿ ಕೋಟಿ ನಮನಗಳು ಎಂದು ಹೇಳಿದ್ದಾರೆ. ಹಾಗೇ, ಸಮಾಜ ಸುಧಾರಕ ಮದನ್ ಮೋಹನ್ ಮಾಳವಿಯಾ ಜನ್ಮದಿನಕ್ಕೂ ಶುಭಾಶಯ ಕೋರಿದ್ದಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಜನ್ಮದಿನದಂದು ಗೌರವಪೂರ್ವಕ ಶುಭಾಶಯಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಹಾಗೇ, ಕ್ರಿಸ್ಮಸ್ ಸಂಭ್ರಮದಲ್ಲಿರುವ ಕ್ರಿಶ್ಚಿಯನ್ ಸಮುದಾಯಕ್ಕೂ ಕೂಡ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಅಲ್ಲ; ಆಕೆಯ ಗಂಡನ ಕಾರುಬಾರು – ಮಿಡಿಗೇಶಿ ಗ್ರಾಮಸ್ಥರಿಂದ ಪ್ರತಿಭಟನೆ