AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smriti Van: ಗುಜರಾತ್​ನ ಭುಜ್​ನಲ್ಲಿ ಇಂದು ಸ್ಮೃತಿವನ ಉದ್ಘಾಟಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಇದರ 10 ವೈಶಿಷ್ಟ್ಯಗಳ ಪರಿಚಯ ಇಲ್ಲಿದೆ

PM Narendra Modi: ಭೂಕಂಪದ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ಸ್ಮರಿಸಲೆಂದು ಸ್ಮೃತಿವನವನ್ನು ರೂಪಿಸಲಾಗಿದೆ.

Smriti Van: ಗುಜರಾತ್​ನ ಭುಜ್​ನಲ್ಲಿ ಇಂದು ಸ್ಮೃತಿವನ ಉದ್ಘಾಟಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಇದರ 10 ವೈಶಿಷ್ಟ್ಯಗಳ ಪರಿಚಯ ಇಲ್ಲಿದೆ
ಭುಜ್​ ಸಮೀಪ ನಿರ್ಮಾಣವಾಗಿರುವ ‘ಸ್ಮೃತಿ ವನ’
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 28, 2022 | 10:52 AM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಆಗಸ್ಟ್ 28, ಭಾನುವಾರ) ಗುಜರಾತ್​ನ ಭುಜ್ ಜಿಲ್ಲೆಯಲ್ಲಿ ‘ಸ್ಮೃತಿವನ’ವನ್ನು (Smriti Van) ಲೋಕಾರ್ಪಣೆ ಮಾಡಲಿದ್ದಾರೆ. ಕಛ್ ಪ್ರದೇಶದಲ್ಲಿ 2001ರಲ್ಲಿ ಅನಾಹುತಕಾರಿ ಭೂಕಂಪ (Kutch Earthquake) ಸಂಭವಿಸಿತ್ತು. ಭುಜ್ (Bhuj) ಭೂಕಂಪದ ಕೇಂದ್ರವಾಗಿತ್ತು. ಭೂಕಂಪದ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ಸ್ಮರಿಸಲೆಂದು ಸ್ಮೃತಿವನವನ್ನು ರೂಪಿಸಲಾಗಿದೆ. ‘ಭೂಕಂಪದಲ್ಲಿ ಜೀವ ಕಳೆದುಕೊಂಡವರಿಗೆ ಗೌರವ ಸಲ್ಲಿಸುವುದು ಹಾಗೂ ಭೂಕಂಪದ ಹಾನಿಯನ್ನು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡ ಜನರ ಸ್ಥೈರ್ಯವನ್ನು ಗುರುತಿಸಲೆಂದು ಸ್ಮೃತಿವನವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ’ ಎಂದು ನರೇಂದ್ರ ಮೋದಿ ಟ್ವೀಟ್​ನಲ್ಲಿ ಹೇಳಿದ್ದಾರೆ.

ಸ್ಮೃತಿವನ ಸ್ಮಾರಕದ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ…

  1. 470 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಸ್ಮಾರಕದಲ್ಲಿ ಭೂಕಂಪದಲ್ಲಿ ಜೀವ ಕಳೆದುಕೊಂಡ 13,000 ಜನರ ಹೆಸರುಗಳನ್ನು ಕೆತ್ತಲಾಗಿದೆ.
  2. ಸ್ಮೃತಿವನ ಸ್ಮಾರಕದಲ್ಲಿ ಸ್ಮೃತಿವನ ಭೂಕಂಪ ವಸ್ತುಸಂಗ್ರಹಾಲಯವೂ ಇದೆ. ಏಳು ಹಂತಗಳಲ್ಲಿ (ಬ್ಲಾಕ್) ಹರಡಿಕೊಂಡಿರುವ ವಸ್ತುಸಂಗ್ರಹಾಲಯವು ರಿಬರ್ತ್​ (ಮರುಜನ್ಮ), ಮರು ಹುಡುಕಾಟ (ರಿಡಿಸ್ಕವರ್), ರಿಸ್ಟೋರ್ (ಸರಿಪಡಿಸು), ಮತ್ತೆ ಕಟ್ಟು (ರಿಬಿಲ್ಡ್), ಮತ್ತೆ ಯೋಚಿಸು (ರಿಥಿಂಕ್), ಮತ್ತೆ ಜೀವಿಸು (ರಿಲೀವ್), ಮತ್ತೆ ಹೊಸದಾಗಿ ಬಳಸು (ರಿನ್ಯು) ಎಂಬ ಏಳು ಆಶಯಗಳನ್ನು (ಥೀಂ) ಹೊಂದಿದೆ.
  3. ಮೊದಲ ಹಂತವು ಭೂಮಿಯ ವಿಕಸನ ಮತ್ತು ಪ್ರತಿ ಸವಾಲನ್ನೂ ಅದು ಗೆದ್ದ ಬಗೆಯನ್ನು ವಿವರಿಸಿದೆ.
  4. ಎರಡನೇ ಹಂತವು ‘ಮರು ಹುಡುಕಾಟ’ದ ಆಶಯ ಹೊಂದಿದೆ. ಗುಜರಾತ್​ನ ಭೌಗೋಳಿಕ ಮೇಲ್ಮೈ ಮತ್ತು ರಾಜ್ಯಕ್ಕಿರುವ ನೈಸರ್ಗಿಕ ಸವಾಲುಗಳನ್ನು ವಿವರಿಸುತ್ತದೆ.
  5. 3ನೇ ಹಂತವು ಭೂಕಂಪದ ನಂತರ ತಕ್ಷಣಕ್ಕೆ ಏನಾಯಿತು ಎನ್ನುವುದನ್ನು ಕಟ್ಟಿಕೊಡುತ್ತದೆ. ನೂರಾರು ವ್ಯಕ್ತಿಗಳು, ಸಂಘ ಸಂಸ್ಥೆಗಳಿಂದ ಸಂಗ್ರಹಿಸಿರುವ ಛಾಯಾಚಿತ್ರಗಳನ್ನು ಒಪ್ಪಗೊಳಿಸಿ ಪ್ರದರ್ಶಿಸಲಾಗಿದೆ.
  6. 4ನೇ ಹಂತವು 2001ರ ಭೂಕಂಪದ ನಂತರ ನಡೆದ ಗುಜರಾತ್​ನ ಮರುನಿರ್ಮಾಣ ಪ್ರಕ್ರಿಯೆಯನ್ನು ವಿವರಿಸುತ್ತದೆ.
  7. 5ನೇ ಹಂತವು ಮರು ನಿರ್ಮಾಣ ಚಟುವಟಿಕೆಗಳ ಬಗ್ಗೆ ಗಮನ ಸೆಳೆಯುತ್ತದೆ. ವಿವಿಧ ರೀತಿಯ ನೈಸರ್ಗಿಕ ದುರಂತಗಳು ಮತ್ತು ಭವಿಷ್ಯಕ್ಕಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ಗಮನ ಸೆಳೆಯುತ್ತದೆ. ನೈಸರ್ಗಿಕ ದುರಂತಗಳಿಂದ ಆಗುವ ಅನಾಹುತಗಳನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಜೀವಹಾನಿ ತಪ್ಪಿಸಲು ಏನೆಲ್ಲಾ ಮಾಡಬಹುದು ಎನ್ನುವ ಬಗ್ಗೆ ಈ ಬ್ಲಾಕ್​ನಲ್ಲಿ ಮಾಹಿತಿಯಿದೆ.
  8. 6ನೇ ಬ್ಲಾಕ್​ನಲ್ಲಿ 5ಡಿ ಸಿಮ್ಯುಲೇಟರ್ ಇದ್ದು, ಇಲ್ಲಿಗೆ ಭೇಟಿ ಕೊಡುವವರು ಭೂಕಂಪದ ಆಘಾತ ಮತ್ತು ಅನಾಹುಗಳ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.
  9. 7ನೇ ಬ್ಲಾಕ್​ನಲ್ಲಿ ಜನರು ಭೂಕಂಪದಲ್ಲಿ ಮೃತಪಟ್ಟವರನ್ನು ಮತ್ತೆ ನೆನಪಿಸಿಕೊಂಡು, ಶ್ರದ್ಧಾಂಜಲಿ ಸಲ್ಲಿಸಲು ಅವಕಾಶವಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ