ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಫೆ.12) ದೆಹಲಿಯಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ಸೊಹ್ನಾ-ದೌಸಾ ಎಕ್ಸ್ಪ್ರೆಸ್ ವೇಯನ್ನು ಉದ್ಘಾಟಿಸಲಿದ್ದಾರೆ. ದೆಹಲಿ ಮತ್ತು ಜೈಪುರ ಪ್ರಯಾಣ 4 ರಿಂದ 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಈಗ ಎಕ್ಸ್ಪ್ರೆಸ್ ವೇ ಮೂಲಕ 2 ಗಂಟೆಯಲ್ಲೇ ತಲುಪಬಹುದಾಗಿದೆ. ಈ ಎಕ್ಸ್ಪ್ರೆಸ್ ವೇಯನ್ನು “ಭಾರತಮಾಲಾ ಪರಿಯೋಜನಾ” ಮೊದಲ ಹಂತದ ಭಾಗವಾಗಿ ನಿರ್ಮಿಸಲಾಗಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯನ್ನು ಸುಮಾರು 1 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
8 ಪಥಗಳ ಎಕ್ಸ್‌ಪ್ರೆಸ್‌ವೇಯನ್ನು 12 ಪಥಗಳ ಎಕ್ಸ್‌ಪ್ರೆಸ್‌ವೇಯಾಗಿ ವಿಸ್ತರಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳನ್ನು ಸಂಪರ್ಕಿಸುತ್ತದೆ. ದೆಹಲಿ-ಮುಂಬೈ ನಡುವಿನ 1,390 ಕೀಮಿ ದೂರದ ಅತಿ ದೊಡ್ಡ ಎಕ್ಸ್‌ಪ್ರೆಸ್‌ವೇ ಇದಾಗಿದೆ.
Going to be inaugurated by PM Shri @narendramodi Ji on 4th Feb, the Sohna-Dausa stretch of the #Delhi_Mumbai_Expressway will facilitate commuters to reach Jaipur from Delhi in two hours.#PragatiKaHighway #GatiShakti pic.twitter.com/C1u5uoFN81
— Nitin Gadkari (@nitin_gadkari) January 30, 2023
ಇದಲ್ಲದೆ, ಇದು ಆರ್ಥಿಕ ಕೇಂದ್ರಗಳಾದ ದೆಹಲಿ, ಮುಂಬೈ, ಜೈಪುರ, ಕಿಶನ್‌ಗಡ್, ಅಜ್ಮೀರ್, ಕೋಟಾ, ಚಿತ್ತೋರ್‌ಗಢ, ಉದಯಪುರ, ಭೋಪಾಲ್, ಉಜ್ಜೈನ್, ಇಂದೋರ್, ಅಹಮದಾಬಾದ್, ವಡೋದರಾ ಮತ್ತು ಸೂರತ್‌ಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಅನೇಕ ಜನರ ವಾಣಿಜ್ಯ ವ್ಯಾಪಾರಕ್ಕೂ ಅನುಕೂಲವಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದುಲು ಇಲ್ಲಿ ಕ್ಲಿಕ್ ಮಾಡಿ