
ಡೆನ್ಮಾರ್ಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಡೋಲು ಬಾರಿಸುವ ಮೂಲಕ ಗಮನಸೆಳೆದಿದ್ದಾರೆ. ಮೂರು ದಿನಗಳ ಯುರೋಪ್ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನಿನ್ನೆ ಜರ್ಮನಿಯಿಂದ ಡೆನ್ಮಾರ್ಕ್ಗೆ ತೆರಳಿದ್ದಾರೆ. ಅಲ್ಲಿ ಅವರನ್ನು ಭಾರತೀಯ ಮೂಲದವರು ಅದ್ದೂರಿಯಾಗಿ ಸ್ವಾಗತಿಸಿದರು. ಡೋಲು, ಡ್ರಮ್, ತಾಳಗಳ ವಾದನ ಇತ್ತು. ಈ ವೇಳೆ ಬೂದು ಬಣ್ಣದ ಉಡುಪು ತೊಟ್ಟಿದ್ದ ಪ್ರಧಾನಿ ಮೋದಿ ತಾವೂ ಕೂಡ ಒಂದು ಕೈಯಲ್ಲಿ ಡೋಲು ಬಾರಿಸಲು ಪ್ರಯತ್ನಿಸಿದ್ದಾರೆ. ಅದರ ವಿಡಿಯೋಗಳು ವೈರಲ್ ಆಗಿವೆ.
ಪ್ರಧಾನಿ ನರೇಂದ್ರ ಮೋದಿ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮತ್ತು ರಾಣಿ ಮಾರ್ಗರೆಥೆ II ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ಡೆನ್ಮಾರ್ಕ್ನಲ್ಲಿರುವ ಭಾರತೀಯರೊಟ್ಟಿಗೆ ಕೋಪನ್ಹ್ಯಾಗನ್ನಲ್ಲಿ ಸಂವಾದ ನಡೆಸಿದ್ದಾರೆ. ಹಾಗೇ, ಇಲ್ಲಿರುವ ನೀವೆಲ್ಲ ರಾಷ್ಟ್ರದೂತರಂತೆ (ಭಾರತವನ್ನು ಪ್ರತಿನಿಧಿಸುವಂತೆ) ಕೆಲಸ ಮಾಡಬೇಕ ಎಂದು ಭಾರತೀಯ ಮೂಲದವರಿಗೆ ಹೇಳಿದರು. ಡೆನ್ಮಾರ್ಕ್ನಲ್ಲಿರುವ ನಿಮ್ಮ ಸ್ನೇಹಿತರಿಗೆ ಭಾರತಕ್ಕೆ ಭೇಟಿ ಕೊಡುವಂತೆ ಹೇಳಿ ಎಂದರು.
ನಾವೆಲ್ಲರೂ ಒಟ್ಟಾಗಿ ಈ ಭೂಮಿಯ ಮೇಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪರಿಸರಕ್ಕೆ ಪೂರಕವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಬಳಕೆ ಮಾಡಿ-ಹಾಗೇ ಬಿಸಾಡುವ ನಮ್ಮ ಕ್ರಮ ಈ ಭೂಮಿಗೆ ಮಾರಕವಾಗುತ್ತದೆ. ಎಷ್ಟು ಅಗತ್ಯವಿದೆಯೋ ಅಷ್ಟನ್ನೇ ಬಳಸುವ ಕ್ರಮವನ್ನು ರೂಢಿಸಿಕೊಳ್ಳಬೇಕು. ಜೇಬು ದೊಡ್ಡದಿದೆ ಎಂದು ಅನಗತ್ಯವಾಗಿ ತುಂಬಿಸಿಕೊಳ್ಳಬಾರದು ಎಂದು ಹೇಳಿದರು. ಈ ಮೂಲಕ ಏನನ್ನೂ ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. (Source)
Published On - 10:58 am, Wed, 4 May 22