ನವದೆಹಲಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ (Himachal Pradesh) ಕೊನೆಯ ಸುತ್ತಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಭಾರತದ ಎಲ್ಲಾ ಪ್ರಭಾವಿ ನಾಯಕರು ಮುಂದಿನ 2 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೂಡ ಇಂದು (ಬುಧವಾರ) ಹಿಮಾಚಲ ಪ್ರದೇಶದಲ್ಲಿ 2 ಚುನಾವಣಾ ರ್ಯಾಲಿಗಳನ್ನು ನಡೆಸಲಿದ್ದಾರೆ. ಕಾಂಗ್ರಾ ಜಿಲ್ಲೆಯ ಶಾಹಪುರ್‌ನಲ್ಲಿರುವ ಚಂಬಿ ಮೈದಾನದಲ್ಲಿ ಒಂದು ರ್ಯಾಲಿ ನಡೆಯಲಿದೆ. 2ನೇ ರ್ಯಾಲಿ ಹಮೀರ್‌ಪುರ ಜಿಲ್ಲೆಯ ಸುಜನ್‌ಪುರದಲ್ಲಿ ನಡೆಯಲಿದೆ.
ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 10.30ಕ್ಕೆ ಸುಜನ್‌ಪುರದ ಐತಿಹಾಸಿಕ ಚೌಗನ್‌ಗೆ ಆಗಮಿಸಲಿದ್ದಾರೆ. ಮೋದಿ ಕಳೆದ 8 ವರ್ಷಗಳಲ್ಲಿ ಎರಡನೇ ಬಾರಿಗೆ ಸುಜನ್ಪುರಕ್ಕೆ ಬರುತ್ತಿದ್ದಾರೆ. ಇದಕ್ಕೂ ಮುನ್ನ ಅವರು 2014ರ ಫೆಬ್ರವರಿ 16ರಂದು ಸುಜನ್ಪುರಕ್ಕೆ ಬಂದಿದ್ದರು. ಇದೀಗ ಪ್ರಧಾನಿ ಸಮಾವೇಶಕ್ಕೆ ಜಿಲ್ಲಾಡಳಿತ ಹಾಗೂ ಬಿಜೆಪಿ ಹೈಕಮಾಂಡ್ ಸಿದ್ಧತೆ ಮಾಡಿಕೊಂಡಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಈ ಚುನಾವಣೆಯ ಸಾರ್ವಜನಿಕ ಸಭೆ ನಡೆಯಲಿದೆ.
ಇದನ್ನೂ ಓದಿ: Himachal Pradesh Elections: ಇಂದು ಶಿಮ್ಲಾದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಬಿಜೆಪಿ
ಸುಜನ್‌ಪುರದಲ್ಲಿ ಕಾಂಗ್ರೆಸ್ ತನ್ನ ಕಾರ್ಯಾಧ್ಯಕ್ಷ ರಾಜೇಂದ್ರ ರಾಣಾ ಅವರನ್ನು ನಾಮನಿರ್ದೇಶನ ಮಾಡಿರುವುದರಿಂದ ಈ ರ್ಯಾಲಿ ಮಹತ್ವದ್ದಾಗಿದೆ. ಬಿಜೆಪಿ ಧುಮಾಲ್ ಕುಟುಂಬವನ್ನು ಹೊರತುಪಡಿಸಿ ಈ ಕ್ಷೇತ್ರದಲ್ಲಿ ಬೇರೆಯವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕಳೆದ ಬಾರಿ ಬಿಜೆಪಿಯಿಂದ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಇದರ ಹೊರತಾಗಿಯೂ ಅವರು ಸುಜನ್‌ಪುರದ ರಾಜೇಂದ್ರ ರಾಣಾ ಅವರ ಎದುರು ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ, ಬಿಜೆಪಿ ಈ ಬಾರಿ ಈ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಿದೆ. ಪ್ರಧಾನಿ ರ್ಯಾಲಿ ಬಳಿಕ ಬಿಜೆಪಿ ಪರ ರಾಜಕೀಯ ವಾತಾವರಣ ನಿರ್ಮಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
I will again be in Himachal Pradesh tomorrow, 9th November. Will be addressing rallies in Chambi and Sujanpur. The people of Himachal Pradesh, particularly the women and youth of the state, are blessing @BJP4Himachal in large numbers.
— Narendra Modi (@narendramodi) November 8, 2022
ಹಿಮಾಚಲ ಪ್ರದೇಶದ ಅತಿ ದೊಡ್ಡ ಜಿಲ್ಲೆ ಕಾಂಗ್ರಾದಲ್ಲಿ ಕೊನೆಯ ಹಂತದ ಚುನಾವಣೆಯ ರ್ಯಾಲಿ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷ ಸಕಲ ಪ್ರಯತ್ನ ನಡೆಸಲಿದೆ. ಪ್ರಧಾನಿ ಮೋದಿಯವರ ರ್ಯಾಲಿಯೊಂದಿಗೆ ಬಿಜೆಪಿ ರಾಜ್ಯದ ಅತಿದೊಡ್ಡ ಜಿಲ್ಲೆ ಕಾಂಗ್ರಾವನ್ನು ತಲುಪಲು ಪ್ರಯತ್ನಿಸುತ್ತಿದೆ. ಬಿಜೆಪಿ ಅಭ್ಯರ್ಥಿ ಸರ್ವೀನ್ ಚೌಧರಿ ಸತತ 3 ಬಾರಿ ಶಹಪುರದಿಂದ ಗೆದ್ದಿದ್ದಾರೆ. ಹೀಗಾಗಿ, ಈ ಬಾರಿಯೂ ಈ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಖಚಿತ ಎನ್ನಲಾಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಪ್ರಚಾರ:
ಇಂದು ಬಿಜೆಪಿಯ ಜೊತೆಗೆ ಕಾಂಗ್ರೆಸ್ ಕೂಡ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ಮಂಗಳವಾರ ಹಿಮಾಚಲಕ್ಕೆ ಬಂದಿದ್ದಾರೆ. ಇಂದು ಅವರು ಶಿಮ್ಲಾ ಗ್ರಾಮಾಂತರದ ಬವುತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಪರ ಚುನಾವಣಾ ರ್ಯಾಲಿ ನಡೆಸಲಿದ್ದಾರೆ. ಇದಾದ ನಂತರ ನಾಲಗಢದಲ್ಲಿ ಚುನಾವಣಾ ರ್ಯಾಲಿ ನಡೆಸಲಿದ್ದಾರೆ.
Published On - 8:35 am, Wed, 9 November 22