ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಅಂದರೆ ಶುಕ್ರವಾರ (ಡಿಸೆಂಬರ್ 17) ಅಖಿಲ ಭಾರತ ಮೇಯರ್‌ಗಳ ಸಮ್ಮೇಳನವನ್ನು (All India Mayors Conference) ಉದ್ಘಾಟಿಸಿ ಮಾತನಾಡಲಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿ (PMO) ನೀಡಿರುವ ಮಾಹಿತಿಯ ಪ್ರಕಾರ ಪ್ರಕಾರ, ಉತ್ತರ ಪ್ರದೇಶದ ನಗರಾಭಿವೃದ್ಧಿ ಇಲಾಖೆಯು ವಾರಣಾಸಿಯಲ್ಲಿ (Varanasi) ಸಮ್ಮೇಳನವನ್ನು ಆಯೋಜಿಸುತ್ತಿದೆ. ಈ ವರ್ಚುವಲ್ ಸಭೆಯ ಉದ್ಘಾಟನೆ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಸಮ್ಮೇಳನಕ್ಕೆ ‘ನ್ಯೂ ಅರ್ಬನ್ ಇಂಡಿಯಾ’ (New Urban India) ಎಂಬ ಶೀರ್ಷಿಕೆ ಇಡಲಾಗಿದೆ. ‘ನಗರ ಪ್ರದೇಶಗಳಲ್ಲಿ ವಾಸಿಸಲು ಅನುಕೂಲವಾಗುವಂತೆ ಮಾಡುವುದು ಪ್ರಧಾನ ಮಂತ್ರಿಗಳ ನಿರಂತರ ಪ್ರಯತ್ನವಾಗಿದೆ. ಶಿಥಿಲಗೊಂಡ ನಗರದ ಮೂಲಸೌಕರ್ಯಗಳ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಅನೇಕ ಯೋಜನೆಗಳು ಮತ್ತು ಉಪಕ್ರಮಗಳನ್ನು ಪ್ರಾರಂಭಿಸಿದೆ. ಈ ಪ್ರಯತ್ನಗಳ ವಿಶೇಷ ಮಾದರಿ ಉತ್ತರ ಪ್ರದೇಶ ರಾಜ್ಯವಾಗಿದ್ದು, ಕಳೆದ ಐದು ವರ್ಷಗಳಲ್ಲಿ ನಗರವು ಉತ್ತಮ ಪ್ರಗತಿ ಮತ್ತು ಪರಿವರ್ತನೆಗೆ ಸಾಕ್ಷಿಯಾಗಿದೆ’ ಎಂದು ಪಿಎಂಒ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
At 10:30 AM tomorrow, 17th December, will inaugurate the All India Mayors’ Conference. This forum brings together Mayors from across India with the aim of sharing best practices in civic administration for the benefit of our citizens. https://t.co/5JDK8ds2bo
— Narendra Modi (@narendramodi) December 16, 2021
ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಪುರಿ (Hardeep Puri) ಸಹ ಭಾಗವಹಿಸಲಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿಯ ಮುಖ್ಯಮಂತ್ರಿಗಳು, ಸಚಿವರು ಮತ್ತು ಇತರ ನಾಯಕರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ.
ಶುಕ್ರವಾರ, ಅವರು ಉತ್ತರ ಪ್ರದೇಶದ ಸುಮಾರು 40 ಸಂಸದರನ್ನು ಭೇಟಿಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಮತ್ತೊಂದು ಸಭೆಯಲ್ಲಿ ರಾಜ್ಯದ ಉಳಿದ ಸಂಸದರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ. ಸಭೆಯ ಕಾರ್ಯಸೂಚಿಯ ಬಗ್ಗೆ ಇಲ್ಲಿಯವರೆಗೆ ಏನೂ ದೃಢಪಟ್ಟಿಲ್ಲ. ಆದರೆ ಇತರ ಸಭೆಗಳಲ್ಲಿ, ರಾಜಕೀಯ ಚಟುವಟಿಕೆಗಳನ್ನು ಮೀರಿ ಜನರೊಂದಿಗೆ ಹೆಚ್ಚು ತೊಡಗಿಸಿಕೊಳ್ಳಲು ಮತ್ತು ವಿಐಪಿ ಸಂಸ್ಕೃತಿಯನ್ನು ದೂರವಿಡಲು ಪಕ್ಷದ ಸಂಸದರಿಗೆ ಪ್ರಧಾನಿ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
Virat Kohli: ವಿವಾದದ ಸುಳಿಗೆ ಸಿಲುಕಿಕೊಂಡ ವಿರಾಟ್ ಕೊಹ್ಲಿ: ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದ ಕಪಿಲ್ ದೇವ್
ನಮ್ಮನ್ನು ನಾವು ಪ್ರೀತಿಸಿಕೊಳ್ಳದಿದ್ದರೆ, ಆತ್ಮವಿಶ್ವಾಸ ಕಮ್ಮಿಯಾಗಿ ಒಂಟಿತನ ಕಾಡಲಾರಂಭಿಸುತ್ತದೆ: ಡಾ ಸೌಜನ್ಯ ವಶಿಷ್ಠ