ಸಂಘರ್ಷ ಪೀಡಿತ ಸುಡಾನ್‌ನಿಂದ ತಾಯ್ನಾಡಿಗೆ ಬಂದಿಳಿದಾಗ ಮೋದಿಜಿ ಜಿಂದಾಬಾದ್ ಘೋಷಣೆ ಕೂಗಿದ ಭಾರತೀಯರು

ನಮ್ಮನ್ನು ದೇಶಕ್ಕೆ ಕರೆತಂದಿದ್ದಕ್ಕಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಅಲ್ಲಿ (ಸುಡಾನ್‌ನಲ್ಲಿ) ಪರಿಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ ಎಂದು ಬಲರಾಮ್ ಎಂಬ ವ್ಯಕ್ತಿ ಹೇಳಿದ್ದಾರೆ. 

ಸಂಘರ್ಷ ಪೀಡಿತ ಸುಡಾನ್‌ನಿಂದ ತಾಯ್ನಾಡಿಗೆ ಬಂದಿಳಿದಾಗ ಮೋದಿಜಿ ಜಿಂದಾಬಾದ್ ಘೋಷಣೆ ಕೂಗಿದ ಭಾರತೀಯರು
ಆಪರೇಷನ್ ಕಾವೇರಿ ಅಡಿಯಲ್ಲಿ ದೆಹಲಿ ತಲುಪಿದ ಭಾರತೀಯರು

Updated on: Apr 28, 2023 | 7:58 PM

ಯುದ್ಧ ಪೀಡಿತ ಸುಡಾನ್‌ನ (Sudan) ನಗರ ಮತ್ತು ಗಡಿ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ತನ್ನ ಪ್ರಯತ್ನಗಳನ್ನು ಹೆಚ್ಚಿಸುತ್ತಿದೆ. ಜಿದ್ದಾದಿಂದ (Jeddah) ವಿಮಾನ ಹತ್ತಿದ 362 ಭಾರತೀಯ ಸ್ಥಳಾಂತರಿಸುವವರ ಮತ್ತೊಂದು ಬ್ಯಾಚ್ ಶುಕ್ರವಾರ ನವದೆಹಲಿಗೆ (New Delhi) ಬಂದಿಳಿದಿದೆ. ಸುರಕ್ಷಿತ ಸ್ಥಳಕ್ಕೆ ಬಂದ ನಂತರ ವ್ಯಕ್ತಿಯೊಬ್ಬರು ಅಲ್ಲಿ ಸ್ಥಳಾಂತರ ಪ್ರಕ್ರಿಯೆ ಹೇಗೆ ನಡೆಯಿತು ಎಂಬುದನ್ನು ವಿವರಿಸುವಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದ “ಸುಗಮ” ಪ್ರಯತ್ನಗಳನ್ನು ಶ್ಲಾಘಿಸಿದ್ದು ‘ಭಾರತ್ ಮಾತಾ ಕಿ ಜೈ’, ‘ಪಿಎಂ ನರೇಂದ್ರ ಮೋದಿ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ನಮ್ಮನ್ನು ದೇಶಕ್ಕೆ ಕರೆತಂದಿದ್ದಕ್ಕಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಅಲ್ಲಿ (ಸುಡಾನ್‌ನಲ್ಲಿ) ಪರಿಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ ಎಂದು ಬಲರಾಮ್ ಎಂಬ ವ್ಯಕ್ತಿ ಹೇಳಿದ್ದಾರೆ.

ಭಾರತದ ‘ಆಪರೇಷನ್ ಕಾವೇರಿ’ ಅಡಿಯಲ್ಲಿ ಸುಡಾನ್‌ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಮರಳಿ ತಾಯ್ನಾಡಿಗೆ ಕರೆ ತರಲಾಗುತ್ತದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಸುಡಾನ್‌ನಿಂದ ಒಟ್ಟು 362 ಭಾರತೀಯರು ಜಿದ್ದಾದಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ನಡೆಸಿದ್ದಾರೆ.

ಇದಕ್ಕೂ ಮೊದಲು, ಸುಡಾನ್‌ನಿಂದ 326 ಭಾರತೀಯ ಸ್ಥಳಾಂತರಿಸುವವರ ಹತ್ತನೇ ಬ್ಯಾಚ್ ಐಎನ್‌ಎಸ್ ತರ್ಕಾಶ್ ಮೂಲಕ ಜಿದ್ದಾವನ್ನು ತಲುಪಿತು. ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ವೆಬ್‌ಸೈಟ್ ಪ್ರಕಾರ, ಸುಡಾನ್‌ನಲ್ಲಿ ಸುಮಾರು 2,800 ಭಾರತೀಯ ಪ್ರಜೆಗಳಿದ್ದರು. ಇದರೊಂದಿಗೆ, ಸುಮಾರು 1,200 ಜನರ ನೆಲೆಸಿದ ಭಾರತೀಯ ಸಮುದಾಯವೂ ಇತ್ತು.

ಇದನ್ನೂ ಓದಿ: ಆಪರೇಷನ್ ಕಾವೇರಿ: ಸುಡಾನ್​ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ 362 ಕನ್ನಡಿಗರು

ಸಂಘರ್ಷ ಪೀಡಿತ ಪ್ರದೇಶದಿಂದ ಎಲ್ಲಾ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸಶಸ್ತ್ರ ಪಡೆಗಳು ಅವಿರತವಾಗಿ ಶ್ರಮಿಸುತ್ತಿವೆ.
ಸುಡಾನ್ ಸೇನೆಯ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅವರ ಉಪ, ಅರೆಸೇನಾ ಕ್ಷಿಪ್ರ ಬೆಂಬಲ ಸೈನಿಕರ (RSF) ಕಮಾಂಡರ್ ಮೊಹಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಸೈನಿಕರ ನಡುವೆ ಸುಡಾನ್ ನಲ್ಲಿ ಸಂಘರ್ಷ ನಡೆಯುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ