PM Modi Birthday: ಪ್ರಧಾನಿ ಮೋದಿಯವರ 73ನೇ ಹುಟ್ಟುಹಬ್ಬ: ದೇಶದಾದ್ಯಂತ ಸೇವಾ ಪಾಕ್ಷಿಕ ಆಯೋಜಿಸಲಿದೆ ಬಿಜೆಪಿ

Seva Pakhwara: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್, ವಿನೋದ್ ತಾವ್ಡೆ, ಸುನೀಲ್ ಬನ್ಸಾಲ್, ಸಂಜಯ್ ಬಂದಿ ಮತ್ತು ಕೈಲಾಶ್ ವಿಜಯವರ್ಗಿಯಾ ಅವರು ಪ್ರಧಾನಿಯವರ ಜನ್ಮದಿನದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ತಿಳಿಸಿದೆ

PM Modi Birthday: ಪ್ರಧಾನಿ ಮೋದಿಯವರ 73ನೇ ಹುಟ್ಟುಹಬ್ಬ: ದೇಶದಾದ್ಯಂತ ಸೇವಾ ಪಾಕ್ಷಿಕ ಆಯೋಜಿಸಲಿದೆ ಬಿಜೆಪಿ
ನರೇಂದ್ರ ಮೋದಿ

Updated on: Aug 30, 2023 | 12:47 PM

ದೆಹಲಿ ಆಗಸ್ಟ್ 30: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 73 ನೇ ಹುಟ್ಟುಹಬ್ಬದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (BJP) ದೇಶಾದ್ಯಂತ ‘ಸೇವಾ ಪಖ್ವಾರ (ಸೇವಾ ಪಾಕ್ಷಿಕ) (Seva Pakhwara) ಆಯೋಜಿಸಲಿದೆ. ಬಿಜೆಪಿ 16 ದಿನಗಳ ‘ಸೇವಾ ಹೀ ಸಂಘಟನೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ. ‘ಸೇವಾ ಪಖ್ವಾರ’ದ ಭಾಗವಾಗಿ ಸೆಪ್ಟೆಂಬರ್ 17 ರಂದು ಪ್ರಧಾನಿಯವರ ಜನ್ಮದಿನದಿಂದ ಅಕ್ಟೋಬರ್ 2 ರ ಗಾಂಧಿ ಜಯಂತಿಯವರೆಗೆ ಇದು ನಡೆಯಲಿದೆ ಎಂದು ಪ್ರಮುಖ ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್, ವಿನೋದ್ ತಾವ್ಡೆ, ಸುನೀಲ್ ಬನ್ಸಾಲ್, ಸಂಜಯ್ ಬಂದಿ ಮತ್ತು ಕೈಲಾಶ್ ವಿಜಯವರ್ಗಿಯಾ ಅವರು ಪ್ರಧಾನಿಯವರ ಜನ್ಮದಿನದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ತಿಳಿಸಿದೆ. ಈಸಭೆಯು “ಮೇರಿ ಮಾಟಿ ಮೇರಾ ದೇಶ್” ಮತ್ತು ಪಕ್ಷದ ಇತರ ಭವಿಷ್ಯದ ಕಾರ್ಯಕ್ರಮಗಳ ಕುರಿತು ಚರ್ಚೆಗಳನ್ನು ನಡೆಸಿತು.

ಕಳೆದ ವರ್ಷವೂ ಪಕ್ಷವು ಪ್ರಧಾನಿಯವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಮಹಾತ್ಮ ಗಾಂಧಿಯವರ ಜನ್ಮದಿನದ ಅಕ್ಟೋಬರ್ 2 ರವರೆಗೆ ‘ಸೇವಾ ಪಖ್ವಾರ’ವನ್ನು ಆಯೋಜಿಸಿತ್ತು. ‘ಸೇವಾ ಪಖ್ವಾರ’ ಅಡಿಯಲ್ಲಿ ಪಕ್ಷವು ನರೇಂದ್ರ ಮೋದಿಯವರ ಕುರಿತು ಜಿಲ್ಲಾ ಮಟ್ಟದಲ್ಲಿ ಪ್ರದರ್ಶನಗಳನ್ನೂ ಆಯೋಜಿಸಿತ್ತುಯ

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ

ಇದಲ್ಲದೆ, ದೀನದಯಾಳ್ ಉಪಾಧ್ಯಾಯ ಅವರ ಜಯಂತಿ (ಸೆಪ್ಟೆಂಬರ್ 25) ಮತ್ತು ಅಕ್ಟೋಬರ್ 2 ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಸಹ ‘ಸೇವಾ ಪಖ್ವಾರ’ ಅಡಿಯಲ್ಲಿ ಆಚರಿಸಲಾಗುತ್ತದೆ.  ಮೋದಿ ಸೆಪ್ಟೆಂಬರ್ 17, 1950 ರಂದು ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಗುಜರಾತ್‌ನ ವಡ್‌ನಗರದಲ್ಲಿ ಜನಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ