ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಭದ್ರತೆಗೆ ಸಂಬಂಧಿಸಿದಂತೆ ಪಂಜಾಬ್ (Punjab) ಸರ್ಕಾರದ ಕಡೆಯಿಂದ ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ ಬಗ್ಗೆ ವಿಚಾರಣೆ ನಡೆಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (PIL) ಸುಪ್ರೀಂಕೋರ್ಟ್ (SupremeCourt) ಶುಕ್ರವಾರ ವಿಚಾರಣೆ ನಡೆಸಲಿದೆ. ಪ್ರತಿಭಟನಾಕಾರರ ರಸ್ತೆ ತಡೆಯಿಂದಾಗಿ ಪ್ರಧಾನಿ ಮೋದಿ ಬುಧವಾರ ಪಂಜಾಬ್ ಭೇಟಿ ವೇಳೆ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಎನ್‌ವಿ ರಮಣ ನೇತೃತ್ವದ ಪೀಠ, ಸುಪ್ರೀಂಕೋರ್ಟ್‌ನಲ್ಲಿ ಪಂಜಾಬ್ ಸರ್ಕಾರದ ಸ್ಥಾಯಿ ವಕೀಲರಿಗೆ ಅರ್ಜಿಯ ಪ್ರತಿಯನ್ನು ಸಲ್ಲಿಸಲು ಅರ್ಜಿದಾರರ ಸಂಘಟನೆಯಾದ ಲಾಯರ್ಸ್ ವಾಯ್ಸ್ ಗೆ ಹೇಳಿದ್ದು ಶುಕ್ರವಾರ ಪಿಐಎಲ್ನ ವಿಚಾರಣೆ ನಡೆಯಲಿದೆ. ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ತುರ್ತು ವಿಚಾರಣೆಯನ್ನು ಕೋರಿ ನ್ಯಾಯಮೂರ್ತಿ ರಮಣ ಅವರ ಮುಂದೆ ವಿಷಯ ಪ್ರಸ್ತಾಪಿಸಿದ ನಂತರ ಸಿಜೆಐ ನಿರ್ದೇಶನ ಬಂದಿದೆ.
“ಒಂದು ದಿನದ ಹಿಂದೆ ಪಂಜಾಬ್‌ನಲ್ಲಿ ಪ್ರಧಾನ ಮಂತ್ರಿಯ ಭದ್ರತೆಯಲ್ಲಿ ಗಂಭೀರ ಲೋಪ ಸಂಬಂಧಿಸಿದ ತುರ್ತು ವಿಷಯವನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ” ಎಂದು ಸಿಂಗ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
ಇದಕ್ಕೆ ಸಿಜೆಐ, “ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ?” ಎಂದು ಸಿಂಗ್ ಅವರನ್ನು ಕೇಳಿದರು.
“ಅವರು (ಮೋದಿ) ಫಿರೋಜ್‌ಪುರಕ್ಕೆ ಭೇಟಿ ನೀಡುತ್ತಿದ್ದರು. ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದು ಅತ್ಯಂತ ಪ್ರಸ್ತುತವಾಗಿದೆ ಮತ್ತು ಈ ಲೋಪದ ಜವಾಬ್ದಾರಿಯನ್ನು ಸರಿಪಡಿಸಬೇಕು. ಬಂದೋಬಸ್ತ್ (ಭದ್ರತಾ ವ್ಯವಸ್ಥೆ) ಕುರಿತು ವೃತ್ತಿಪರ ಮತ್ತು ಪರಿಣಾಮಕಾರಿ ತನಿಖೆಯ ಅಗತ್ಯವಿದೆ.ಭೇಟಿಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರ ಚಲನವಲನ ಮತ್ತು ನಿಯೋಜನೆಯ ಸಂಪೂರ್ಣ ದಾಖಲೆಗಳನ್ನು ಬಟಿಂಡಾದ ಜಿಲ್ಲಾ ನ್ಯಾಯಾಧೀಶರು ಕಸ್ಟಡಿಗೆ ತೆಗೆದುಕೊಂಡು ಈ ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ನಿಮ್ಮ ಮೇಲ್ವಿಚಾರಣೆಯಲ್ಲಿ ಸೂಕ್ತವಾಗಿರುತ್ತದೆ. ” ಎಂದು ಸಿಂಗ್ ಪೀಠವನ್ನು ಒತ್ತಾಯಿಸಿದರು.
ಜಿಲ್ಲಾ ನ್ಯಾಯಾಧೀಶರು ದಾಖಲೆಗಳನ್ನು ಸಲ್ಲಿಸಿದ ನಂತರ, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನ್ಯಾಯಮೂರ್ತಿಗಳು ನಿರ್ಧರಿಸಬಹುದು. ದಯವಿಟ್ಟು ಇಂದೇ ಆದೇಶವನ್ನು ರವಾನಿಸುವುದನ್ನು ಪರಿಗಣಿಸಿ ಎಂದು ಹಿರಿಯ ವಕೀಲರು ಹೇಳಿದ್ದಾರೆ.
ಈ ವೇಳೆ ಸಿಜೆಐ ಅವರು ತಮ್ಮ ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಸಿಂಗ್ ಅವರನ್ನು ಕೇಳಿದರು. “ನೀವು ಇಂದು ಸಲ್ಲಿಕೆ ಮಾಡಿ, ನಾಳೆ ನಿಮ್ಮ ವಿಷಯವನ್ನು ನಾವು ತೆಗೆದುಕೊಳ್ಳುತ್ತೇವೆ” ಎಂದು ನ್ಯಾಯಮೂರ್ತಿ ರಮಣ ಹೇಳಿದರು.
ಈ ಪಿಐಎಲ್ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಕೇಂದ್ರ ಸರ್ಕಾರದ ಕಕ್ಷಿದಾರರನ್ನು ಪ್ರಕರಣಕ್ಕೆ ಒಳಪಡಿಸಿದೆ.
ಬುಧವಾರ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಭೇಟಿಗೆ ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸುವಲ್ಲಿ ರಾಜ್ಯ ಸರ್ಕಾರ, ಅದರ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯ ಕಡೆಯಿಂದ “ಗಂಭೀರ ಮತ್ತು ಉದ್ದೇಶಪೂರ್ವಕ ಲೋಪದ ವಿಚಾರಣೆ ಮಾಡಬೇಕು” ಎಂದು ಲಾಯರ್ಸ್ ವಾಯ್ಸ್ ಸುಪ್ರೀಂ ಕೋರ್ಟ್‌ಗೆ ವಿನಂತಿಸಿದೆ. ಪ್ರತಿವಾದಿ ನಂ. 2 (ಮುಖ್ಯ ಕಾರ್ಯದರ್ಶಿ) ಮತ್ತು ಪ್ರತಿವಾದಿ ನಂ.3 (ಡಿಜಿಪಿ) ರ ಜವಾಬ್ದಾರಿಯವನ್ನು ಸರಿಪಡಿಸವು ಆದೇಶ ಅಥವಾ ನಿರ್ದೇಶನಕ್ಕೆ ಮ್ಯಾಂಡಮಸ್ ರಿಟ್ ಅಥವಾ ಯಾವುದೇ ಇತರ ರಿಟ್ ನೀಡಿ ಅವರನ್ನು ಅಮಾನತುಗೊಳಿಸಿ. ಇದೇ ವಿಷಯದಲ್ಲಿ ಪ್ರತಿವಾದಿ ಸಂಖ್ಯೆ. 4 (ಕೇಂದ್ರ) ಇಲಾಖಾ ಕ್ರಮ ಕೈಗೊಳ್ಳಲಿ ಎಂದು ಅರ್ಜಿಯಲ್ಲಿ ಹೇಳಿದೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪ; ನಾಚಿಕೆಗೇಡಿನ ಸಂಗತಿ ಎಂದು ಇನ್ಸ್ಟಾ ಪೋಸ್ಟ್ ಹಾಕಿದ ಬಾಲಿವುಡ್ ನಟಿ ಕಂಗನಾ
Published On - 12:44 pm, Thu, 6 January 22