ಸಿಎಂ ಪರಿಹಾರ ನಿಧಿಯಿಂದ ಕ್ರೈಸ್ತ ಮಿಷನರಿಗಳಿಗೆ ಲಕ್ಷಾಂತರ ರೂ ತುರ್ತು ಪರಿಹಾರ ಕೊಡುಗೆ ನೀಡಿದ ಮುಖ್ಯಮಂತ್ರಿ

ಸಿಎಂ ಪರಿಹಾರ ನಿಧಿಯಿಂದ ಕ್ರೈಸ್ತ ಮಿಷನರಿಗಳಿಗೆ ಲಕ್ಷಾಂತರ ರೂ ತುರ್ತು ಪರಿಹಾರ ಕೊಡುಗೆ ನೀಡಿದ ಮುಖ್ಯಮಂತ್ರಿ
ಸಿಎಂ ಪರಿಹಾರ ನಿಧಿಯಿಂದ ಕ್ರೈಸ್ತ ಮಿಷನರಿಗಳಿಗೆ ಲಕ್ಷಾಂತರ ರೂ ತುರ್ತು ಪರಿಹಾರ ಕೊಡುಗೆ ನೀಡಿದ ಮುಖ್ಯಮಂತ್ರಿ

ಈ ಬಗ್ಗೆ ಕಳೆದ ವರ್ಷಾಂತ್ಯ ರಾಜ್ಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದ ಸಿಎಂ ನವೀನ್​ ಪಟ್ನಾಯಿಕ್ ರಾಜ್ಯದಲ್ಲಿ ಯಾವುದೇ ಕ್ರೈಸ್ತರ ಮಿಷನರಿ ಸಂಸ್ಥೆಗಳು ಹಣಕಾಸಿನ ಮುಗ್ಗಟ್ಟು ಎದುರಿಸಬಾರದು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದರು.

TV9kannada Web Team

| Edited By: sadhu srinath

Jan 06, 2022 | 11:30 AM

ಒರಿಸ್ಸಾದ ಮುಖ್ಯಮಂತ್ರಿ ನವೀನ್​ ಪಟ್ನಾಯಿಕ್ ಅವರು (Odisha CM Naveen Patnaik) ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ (Chief Minister Relief Fund -CMRF) ಅಂದಾಜು 80 ಲಕ್ಷ ರೂಪಾಯಿಯನ್ನು ಕ್ರೈಸ್ತರ ಮಿಷನರೀಸ್​ ಆಫ್​ ಚಾರಿಟೀಸ್​ಗೆ (Missionaries of Charity -MoC) ತುರ್ತು ಪರಿಹಾರ ಕೊಡುಗೆ ನೀಡಿದ್ದಾರೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಗೆ (Foreign Contribution Regulation Act -FCRA) ಅನುಸಾರವಾಗಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಒಡಿಶಾ ರಾಜ್ಯದಲ್ಲಿ ನೆಲೆಸಿರುವ ಕ್ರೈಸ್ತ ಮಿಷನರಿಗಳಿಗೆ (MoC) ತಮ್ಮ ನೋಂದಣಿಯನ್ನು (FCRA registration) ನವೀಕರಣಗೊಳಿಸಲು ನಿರಾಕರಿಸಲಾಗಿತ್ತು. ಹೀಗಾಗಿ ಒಡಿಶಾದ ಕ್ರೈಸ್ತ ಮಿಷನರಿಗಳಿಗೆ ಹಣಕಾಸಿನ ಮುಗ್ಗಟ್ಟು ತಲೆದೋರಿತ್ತು. ಈ ಹಂತದಲ್ಲಿ ನೆರವಿನ ಹಸ್ತ ಚಾಚಿದ ರಾಜ್ಯದ ಮುಖ್ಯಮಂತ್ರಿ ನವೀನ್​ ಪಟ್ನಾಯಿಕ್ ಅವರು ತಕ್ಷಣಕ್ಕೆ 78.76 ಲಕ್ಷ ರೂಪಾಯಿಗಳನ್ನು ತಮ್ಮ ಸಿಎಂ ಫಂಡ್​ನಿಂದ ಬಿಡುಗಡೆ ಮಾಡಿದ್ದಾರೆ.

ಗಮನಾರ್ಹವೆಂದರೆ ಪಶ್ಚಿಮ ಬಂಗಾಳದಲ್ಲಿಯೂ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಇದೇ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರದ ವಿರುದ್ಧ ಕಿಡಿಕಾರಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಗೃಹ ಖಾತೆ ಯಾವುದೇ ಮಿಷನರಿಗಳ ಖಾತೆಗಳನ್ನು ಸ್ಥಗಿತಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದರೆ ಒಡಿಶಾದಲ್ಲಿಯೂ ಕ್ರೈಸ್ತರ ಹಣಕಾಸು ಪರಿಸ್ಥಿತಿ ಸರಿಯಿಲ್ಲವೆಂದು ಮುಖ್ಯಮಂತ್ರಿ ನವೀನ್​ ಪಟ್ನಾಯಿಕ್ ಅವರು ತಮ್ಮ ಪರಿಹಾರ ನಿಧಿಯಿಂದ 78.76 ಲಕ್ಷ ರೂಪಾಯಿಗಳನ್ನು ತುರ್ತಾಗಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ ಎಂದು ಒಡಿಶಾ Chief Minister Office -CMO) ತಿಳಿಸಿದೆ. ರಾಜ್ಯದ 8 ಜಿಲ್ಲೆಗಳಲ್ಲಿರುವ 11 ಕ್ರೈಸ್ತರ ಮಿಷನರಿ ಸಂಸ್ಥೆಗಳಿಗೆ ಈ ಹಣ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಇದರಿಂದ 900 ಅನಾಥಾಶ್ರಮಗಳು ಪ್ರಯೋಜನ ಪಡೆಯಲಿವೆ ಎಂದು ಹೇಳಲಾಗಿದೆ.

ಈ ಬಗ್ಗೆ ಕಳೆದ ವರ್ಷಾಂತ್ಯ ರಾಜ್ಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದ ಸಿಎಂ ನವೀನ್​ ಪಟ್ನಾಯಿಕ್ ರಾಜ್ಯದಲ್ಲಿ ಯಾವುದೇ ಕ್ರೈಸ್ತರ ಮಿಷನರಿ ಸಂಸ್ಥೆಗಳು ಹಣಕಾಸಿನ ಮುಗ್ಗಟ್ಟು ಎದುರಿಸಬಾರದು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದರು.

ಆದರೆ ಒಡಿಶಾದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಸಿಎಂ ನವೀನ್​ ಪಟ್ನಾಯಿಕ್ ಅವರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಕ್ರೈಸ್ತ ಮಿಷನರಿ ಸಂಸ್ಥೆಗಳು ಗುಪ್ತವಾಗಿ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಮಾನವೀಯ ಚಟುವಟಿಕೆಗಳ ಹೆಸರಿನಲ್ಲಿ Missionaries of Charity -MoC ಧರ್ಮಾಂತರ ಕಾರ್ಯದಲ್ಲಿ (Religious conversion) ತೊಡಗಿರುವುದು ಬಹಿರಂಗ ಸತ್ಯವಾಗಿದೆ ಎಂದು ಬಿಜೆಪಿ (Bharatiya Janata Party) ನಾಯಕ ಸಜ್ಜನ್​ ಶರ್ಮಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Follow us on

Most Read Stories

Click on your DTH Provider to Add TV9 Kannada