ಪಿಎಂಒ ಪ್ರೊಫೈಲ್ ಚಿತ್ರ ಬದಲಾವಣೆ; ಕವರ್ ಫೋಟೊ ಮೂಲಕ ಸಂವಿಧಾನವೇ ಶ್ರೇಷ್ಠ ಎಂದು ಸಂದೇಶ ರವಾನಿಸಿದ ಮೋದಿ

|

Updated on: Jun 11, 2024 | 8:55 PM

ಭಾನುವಾರ ಮೋದಿ ಮೂರನೇ ಬಾರಿ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಿನ್ನೆ(ಸೋಮವಾರ) ಪ್ರಧಾನಿ ಕಚೇರಿಯ ಸಿಬ್ಬಂದಿಗಳನ್ನುದ್ದೇಶಿ ಮಾತನಾಡಿದ ಮೋದಿ, ಪ್ರಧಾನಿ ಕಚೇರಿ ಮೋದಿಯವರದ್ದು ಅಲ್ಲ, ಜನರ ಪಿಎಂಒ ಆಗಿರಬೇಕು ಎಂದು ಹೇಳಿದ್ದಾರೆ. 10 ವರ್ಷಗಳ ಹಿಂದೆ ನಮ್ಮ ದೇಶದ ಚಿತ್ರಣವೆಂದರೆ ಪಿಎಂಒ ಶಕ್ತಿ ಕೇಂದ್ರ, ಅತ್ಯಂತ ದೊಡ್ಡ ಶಕ್ತಿ ಕೇಂದ್ರ ಎಂದು ಹೇಳಿದ್ದಾರೆ.

ಪಿಎಂಒ ಪ್ರೊಫೈಲ್ ಚಿತ್ರ ಬದಲಾವಣೆ; ಕವರ್ ಫೋಟೊ ಮೂಲಕ ಸಂವಿಧಾನವೇ ಶ್ರೇಷ್ಠ ಎಂದು ಸಂದೇಶ ರವಾನಿಸಿದ ಮೋದಿ
ಪಿಎಂಒ ಕವರ್ ಫೋಟೊ
Follow us on

ದೆಹಲಿ ಜೂನ್ 11: ಪ್ರಧಾನಿ ನರೇಂದ್ರ ಮೋದಿಯವರ  ಕಚೇರಿಯ (PMO) ಸಾಮಾಜಿಕ ಮಾಧ್ಯಮ ಎಕ್ಸ್ ಹ್ಯಾಂಡಲ್​​ನ ಪ್ರೊಫೈಲ್ ಚಿತ್ರ ಮತ್ತು ಕವರ್ ಫೋಟೊ ಬದಲಾಗಿದೆ. ಪ್ರೊಫೈಲ್ ಫೋಟೊದಲ್ಲಿ ಮೋದಿಯವರ ಫೋಟೊ ಮತ್ತು ಕವರ್ ಫೋಟೊದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂವಿಧಾನಕ್ಕೆ (constitution of India) ಶಿರಬಾಗಿ ನಮಸ್ಕರಿಸುತ್ತಿರುವ ಫೋಟೊ ಅಪ್ಡೇಟ್ ಮಾಡಲಾಗಿದೆ. ಭಾರತದಲ್ಲ್ಲಿ ಸಂವಿಧಾನವೇ ಶ್ರೇಷ್ಠ ಎಂಬ ಸಂದೇಶವನ್ನು ಅವರು ಈ ಮೂಲಕ ದೇಶದ ಜನರಿಗೆ ರವಾನಿಸಿದ್ದಾರೆ.

ಭಾನುವಾರ ಮೋದಿ ಮೂರನೇ ಬಾರಿ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಿನ್ನೆ(ಸೋಮವಾರ) ಪ್ರಧಾನಿ ಕಚೇರಿಯ ಸಿಬ್ಬಂದಿಗಳನ್ನುದ್ದೇಶಿ ಮಾತನಾಡಿದ ಮೋದಿ, ಪ್ರಧಾನಿ ಕಚೇರಿ ಮೋದಿಯವರದ್ದು ಅಲ್ಲ, ಜನರ ಪಿಎಂಒ ಆಗಿರಬೇಕು ಎಂದು ಹೇಳಿದ್ದಾರೆ. 10 ವರ್ಷಗಳ ಹಿಂದೆ ನಮ್ಮ ದೇಶದ ಚಿತ್ರಣವೆಂದರೆ ಪಿಎಂಒ ಶಕ್ತಿ ಕೇಂದ್ರ, ಅತ್ಯಂತ ದೊಡ್ಡ ಶಕ್ತಿ ಕೇಂದ್ರ. ನಾನು ಅಧಿಕಾರಕ್ಕಾಗಿ ಹುಟ್ಟಿಲ್ಲ, 2014 ರಿಂದ ನಾವು ತೆಗೆದುಕೊಂಡ ಕ್ರಮಗಳಿಂದಾಗಿ ಪಿಎಂಒ ಅನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದೇವೆ. ಈ ಚುನಾವಣೆ ಮೋದಿಯವರ ಭಾಷಣಗಳಿಗೆ ಸಮ್ಮತಿಯಲ್ಲ, ಕಳೆದ 10 ವರ್ಷಗಳಿಂದ ಪ್ರತಿಯೊಬ್ಬ ಸರ್ಕಾರಿ ನೌಕರರ ಶ್ರಮಕ್ಕೆ ಸಂದ ಮನ್ನಣೆ ಇದು. ಆದ್ದರಿಂದ, ಈ ಗೆಲುವಿಗೆ ಅರ್ಹರು ಯಾರಾದರೂ ಇದ್ದರೆ, ಅದು ನೀವೇ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ ‘ಮೋದಿ ಕಾ ಪರಿವಾರ್’ ತೆಗೆದುಹಾಕಿ

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಚುನಾವಣಾ ಗೆಲುವಿನ ಮೂಲಕ ಉದ್ದೇಶಿಸಲಾದ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜೂನ್ 11 ರಂದು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ “ಮೋದಿ ಕಾ ಪರಿವಾರ್” ಪ್ರತ್ಯಯವನ್ನು ತೆಗೆದುಹಾಕುವಂತೆ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದ್ದಾರೆ.
ಅವರಿಗೆ ಸ್ವಂತ ಕುಟುಂಬವಿಲ್ಲ ಎಂದು ವಿರೋಧ ಪಕ್ಷದ ನಾಯಕ ಲಾಲು ಪ್ರಸಾದ್ ಯಾದವ್ ಮಾರ್ಚ್‌ನಲ್ಲಿ ಮೋದಿ ಅವರನ್ನು ಟೀಕಿಸಿದ್ದಕ್ಕೆ ಭಾರತದ ಜನರೇ ನನ್ನ ಕುಟುಂಬ ಎಂದು ಪ್ರಧಾನಿ ತಿರುಗೇಟು ನೀಡಿದ್ದರು. ಇದಾದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋದಿ ಬೆಂಬಲಿಗರು ತಮ್ಮನ್ನು “ಮೋದಿ ಕಾ ಪರಿವಾರ್” (ಮೋದಿ ಅವರ ಕುಟುಂಬ) ಎಂದು ಗುರುತಿಸಿಕೊಂಡಿದ್ದರು.

ಮೋದಿ ಟ್ವೀಟ್


ಇಂದು ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, “ಚುನಾವಣಾ ಪ್ರಚಾರದ ಮೂಲಕ, ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ‘ಮೋದಿ ಕಾ ಪರಿವಾರ್’ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸೇರಿಸಿಕೊಂಡಿದ್ದಾರೆ, ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದುಕೊಂಡಿದ್ದೇನೆ. ಭಾರತದ ಜನರು ಸತತ ಮೂರನೇ ಬಾರಿಗೆ ಎನ್‌ಡಿಎಗೆ ಬಹುಮತವನ್ನು ನೀಡಿದ್ದಾರೆ. ಇದು ಒಂದು ರೀತಿಯ ದಾಖಲೆಯಾಗಿದೆ. ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡಲು ನಮಗೆ ಜನಾದೇಶವನ್ನು ನೀಡಿದ್ದಾರೆ. ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಲಾಗಿದೆ, ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ. ಈಗ ನಿಮ್ಮ ಸಾಮಾಜಿಕ ಮಾಧ್ಯಮದಿಂದ ‘ಮೋದಿ ಕಾ ಪರಿವಾರ್’ ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ. ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಒಂದು ಪರಿವಾರವಾಗಿ ನಮ್ಮ ಬಂಧವು ಗಟ್ಟಿಯಾಗಿ ಉಳಿಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರ ಅಥವಾ ಹುದ್ದೆಗಾಗಿ ಇಲ್ಲಿ ಇರುವುದು ನನ್ನ ಅಜೆಂಡಾ ಅಲ್ಲ: ಪಿಎಂ ನರೇಂದ್ರ ಮೋದಿ

ಅದೇ ವೇಳೆ ಮೋದಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ತಮ್ಮ ಪ್ರೊಫೈಲ್ ಮತ್ತು ಕವರ್ ಫೋಟೋಗಳನ್ನು ಸಹ ಬದಲಾಯಿಸಿದ್ದಾರೆ. ಪ್ರೊಫೈಲ್ ಫೋಟೊದಲ್ಲಿ ಅವರ ಅಧಿಕಾರದ ಮೊದಲ ದಿನದ ಫೋಟೊ ಮತ್ತು ಕವರ್ ಫೋಟೊ ಆಗಿ ಅವರ ಸರ್ಕಾರದ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಫೋಟೊ ಅಪ್ಡೇಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:55 pm, Tue, 11 June 24