Crime News: ಇನ್‌ಸ್ಟಾಗ್ರಾಂನಲ್ಲಿ ಯುವಕರೊಂದಿಗೆ ಹೆಂಡತಿ ಚಾಟ್; ಗಂಡ ವಿರೋಧಿಸಿದ್ದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ

ಉತ್ತರ ಪ್ರದೇಶದ ನೊಯ್ಡಾದಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೂ ಕೂಡ ಇನ್​ಸ್ಟಾಗ್ರಾಂ ಬಳಸಿದ್ದಕ್ಕೆ ಪತಿ ಛೀಮಾರಿ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ವಿಚಾರವಾಗಿ ಗಂಡ-ಹೆಂಡತಿ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Crime News: ಇನ್‌ಸ್ಟಾಗ್ರಾಂನಲ್ಲಿ ಯುವಕರೊಂದಿಗೆ ಹೆಂಡತಿ ಚಾಟ್; ಗಂಡ ವಿರೋಧಿಸಿದ್ದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ
ಇನ್​ಸ್ಟಾಗ್ರಾಂ ಚಾಟ್
Follow us
|

Updated on: Jun 11, 2024 | 10:09 PM

ನೊಯ್ಡಾ: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್‌ಗಳ (Instagram) ಕ್ರೇಜ್ ಜನರಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಕೆಲವರು ಇವೆಲ್ಲವುಗಳಿಂದ ಹೊರಬರಲಾರದಷ್ಟು ಚಟಕ್ಕೆ ಬೀಳುತ್ತಾರೆ. ಇವೆಲ್ಲವುಗಳಿಂದ ಜನರು ಆತ್ಮಹತ್ಯೆ ಮಾಡಿಕೊಂಡಿರುವ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇಂಥದೊಂದು ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಿಂದ ಬೆಳಕಿಗೆ ಬಂದಿದೆ. ಇಲ್ಲಿ ನೆಲೆಸಿರುವ ವಿವಾಹಿತ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂ ಬಳಕೆಗೆ ತುಂಬ ಅಡಿಕ್ಟ್ ಆಗಿದ್ದರಿಂದ ಆಕೆಯ ಪತಿ ಆಕೆಗೆ ಆಗಾಗ ವಿರೋಧ ಮಾಡುತ್ತಿದ್ದರು. ಇದರಿಂದ ಹೆಂಡತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಪ್ರಕರಣವು ಸೆಕ್ಟರ್ -39 ಪ್ರದೇಶದ ಸದರ್‌ಪುರ ಗ್ರಾಮದಲ್ಲಿದೆ. ಹೆಂಡತಿಗೆ ಪತಿ ಇನ್‌ಸ್ಟಾಗ್ರಾಮ್ ಬಳಸಲು ನಿರಾಕರಿಸಿದಾಗ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ನಿಯ ಶವ ನೋಡಿ ಪತಿ ಬೆಚ್ಚಿಬಿದ್ದಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತನ ಬಳಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಇತರೆ ಕಾರಣಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣು

ಸೆಕ್ಟರ್-45 ಸದರ್‌ಪುರ ಕಾಲೋನಿಯ ಲೇನ್ ಸಂಖ್ಯೆ-10 ರ ಓಂವೀರ್ 9 ವರ್ಷಗಳ ಹಿಂದೆ ವಿಶಾಖಾ ಅವರನ್ನು ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವೃತ್ತಿಯಲ್ಲಿ ಓಲಾ ಬೈಕ್ ಸವಾರನಾಗಿರುವ ಓಂವೀರ್ ಇಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಓಂವೀರ್‌ಗೂ ಇಬ್ಬರು ಮಕ್ಕಳಿದ್ದಾರೆ. ಸೋಮವಾರ ಬೆಳಗ್ಗೆ ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ವಿಶಾಖಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ವಿಧಿವಿಜ್ಞಾನ ತಂಡದ ನೇತೃತ್ವದಲ್ಲಿ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆಯಾದ ಶೆಡ್​ಗೆ ಬಂದಿತ್ತು ದರ್ಶನ್​ ಕಾರು; ಸಿಸಿಟಿವಿ ದೃಶ್ಯ ಲಭ್ಯ

ಪೊಲೀಸ್ ವಿಚಾರಣೆ ವೇಳೆ ಓಂವೀರ್ ತನ್ನ ಹೆಂಡತಿ ವಿಶಾಖಾ ಆಗಾಗ ತನ್ನ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ಬಳಸುತ್ತಿದ್ದಳು. ಅಷ್ಟೇ ಅಲ್ಲ ಇನ್‌ಸ್ಟಾಗ್ರಾಂನಲ್ಲಿ ಹಲವು ಹುಡುಗರೊಂದಿಗೆ ಚಾಟ್ ಮಾಡುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನುಮುಂದೆ ಇನ್​ಸ್ಟಾಗ್ರಾಂ ಬಳಸಬಾರದು ಎಂದು ಹೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಸೋಮವಾರ ಬೆಳಿಗ್ಗೆ ಅವಳು ಎದ್ದಕೂಡಲೆ ಇನ್​ಸ್ಟಾಗ್ರಾಂ ಓಪನ್ ಮಾಡಿಕೊಂಡು ಚಾಟ್ ಮಾಡಲು ಪ್ರಾರಂಭಿಸಿದಳು. ಆಗಲೂ ಗಂಡ ಗದರಿಸಿದ್ದ. ಬಳಿಕ ಅವನು ಕೆಲವು ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದನು. ಅವನು ಮನೆಗೆ ಹಿಂದಿರುಗಿದಾಗ ಅವಳ ದೇಹವು ನೇಣು ಕುಣಿಕೆಯಲ್ಲಿ ನೇತಾಡುತ್ತಿರುವುದನ್ನು ನೋಡಿದನು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತನ ತಾಯಿಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಈ ವಿಚಾರದಲ್ಲಿ ಇದುವರೆಗೆ ಯಾರೂ ದೂರು ದಾಖಲಿಸಿಲ್ಲ. ದೂರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್-ಪವಿತ್ರಾ ಗೌಡ ಅವರನ್ನು ನ್ಯಾಯಾಲಯಕ್ಕೆ ಕರೆತಂದ ವಿಡಿಯೋ
ದರ್ಶನ್-ಪವಿತ್ರಾ ಗೌಡ ಅವರನ್ನು ನ್ಯಾಯಾಲಯಕ್ಕೆ ಕರೆತಂದ ವಿಡಿಯೋ
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ