ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಡೆತ್​ನೋಟ್ ಪತ್ತೆ, ಕಾಮುಕನ ವಿಕೃತ ಮುಖ ಬಯಲು

ಪತ್ನಿ ನಿಧನದ ಬಳಿಕ ಇತರೆ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿ ಅವರ ಹೆಸರು ಹಾಳು ಮಾಡಿ ಕೆಟ್ಟ ದೃಷ್ಟಿಬೀರುತ್ತಿದ್ದ ಕಾಮುಕನಿಂದಾಗಿ ಚಾಮರಾಜನಗರದಲ್ಲಿ ಕುಟುಂಬವೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ನಾಲ್ವರ ಪೈಕಿ ಓರ್ವರು ಮೃತಪಟ್ಟಿದ್ದು ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ಕಾಮುಕನ ಕಿರುಕುಳದ ಬಗ್ಗೆ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು ಕಾಮುಕನ ವಿಕೃತಿ ಮನಸ್ಸು ಬಯಲಾಗಿದೆ.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಡೆತ್​ನೋಟ್ ಪತ್ತೆ, ಕಾಮುಕನ ವಿಕೃತ ಮುಖ ಬಯಲು
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಡೆತ್​ನೋಟ್ ಪತ್ತೆ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಆಯೇಷಾ ಬಾನು

Updated on: Jun 10, 2024 | 12:19 PM

ಚಾಮರಾಜನಗರ, ಜೂನ್.10: ತಾಳ ಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಓರ್ವನ ಸಾವು (Death) ಮೂವರ ಪರಿಸ್ಥಿತಿ ಗಂಭೀರ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಯತ್ನಕ್ಕೂ ಮುನ್ನ ಬಾಲಕಿ ಬರೆದಿಟ್ಟಿದ್ದ ಡೆತ್​ನೋಟ್ (Death Note) ಪತ್ತೆಯಾಗಿದೆ. ಕಾಮ ಕ್ರಿಮಿ ಲೋಕೇಶ್ ಕಿರುಕುಳಕ್ಕೆ ಬೇಸತ್ತು ಈ ಕುಟುಂಬ ಕ್ರಿಮಿನಾಶಕ ಸೇವಿಸಿತ್ತು. ಸದ್ಯ ಕಿರುಕುಳ ಕೊಟ್ಟಿರುವ ಕುರಿತು ಅಪ್ರಾಪ್ತೆ ಎಳೆ ಎಳೆಯಾಗಿ ಬರೆದಿಟ್ಟಿರುವ ಡೆತ್​ನೋಟ್ ಪತ್ತೆಯಾಗಿದೆ. ಇನ್ನು ಮತ್ತೊಂದೆಡೆ ದೂರು ಸ್ವೀಕರಿಸದ ಕೆ.ಆರ್ ನಗರದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬಾಲಕಿ ಬರೆದಿಟ್ಟಿದ್ದ ಡೆತ್​ನೋಟ್ ಹೀಗಿದೆ

ಲೋಕೇಶ್ ಎಲ್ಲಾ ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ. ನನ್ನನ್ನು ಸಹ ಲೋಕೇಶ್ ಕೆಟ್ಟ ದೃಷ್ಟಿಯಿಂದ ನೋಡಿದ್ದ. ನಮ್ಮ ಕುಟುಂಬದ ಮಾನ ಮರ್ಯಾದೆ ಕಳೆದು ಹಾಕಿದ್ದಾನೆ. ಲೋಕೇಶ್​ನನ್ನ ಸುಮ್ಮನೆ ಬಿಡಬೇಡಿ, ಆತನನ್ನ ಸುಮ್ಮನೆ ಬಿಟ್ಟರೆ ನನ್ನಂತ ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗುತ್ತೆ ಎಂದು ಡೆತ್​ನೋಟ್​ನಲ್ಲಿ ತನಗಾದ ಅಪಮಾನ ಹಾಗೂ ಮಾನಸಿಕ ಹಿಂಸೆಯ ಕುರಿತು ಅಪ್ರಾಪ್ತೆ ಬರೆದಿಟ್ಟಿದ್ದಾರೆ. ಇನ್ನು ಐಸಿಯೂನಲ್ಲಿ ಅಪ್ರಾಪ್ತೆ ಸೇರಿ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಅಪ್ರಾಪ್ತೆಯ ತಾಯಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದೂರು ಸ್ವೀಕರಿಸದ ಕೆ.ಆರ್ ನಗರ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಇನ್ಸ್ಪೆಕ್ಟರ್ ಸಂತೋಷ್, ಎ.ಎಸ್.ಐ ಗಿರೀಶ್, ಪೊಲೀಸ್ ಕಾನ್ಸ್ಟೇಬಲ್ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಪೋಕ್ಸೋ​ ಕೇಸ್​ ದಾಖಲು

ಸದ್ಯ ಈ ಘಟನೆ ಸಂಬಂಧ ಮಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು ಐಪಿಸಿ 306 509 ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ ಈಗ ಕಾಮ ಕ್ರಿಮಿಯ ಹಿಂದೆ ಬಿದ್ದಿದ್ದು. ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಆರೋಪಿ ಲೋಕೇಶ್ ಈಗ ತಲೆ ಮರೆಸಿ ಕೊಂಡಿದ್ದು ಆರೋಪಿಗಾಗಿ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಈಗ ತಲಾಶ್ ನಡೆಸುತ್ತಿದ್ದಾರೆ.

ನಿನ್ನೆ ಮೃತ ಮಹದೇವನಾಯ್ಕರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾತರಿಸಲಾಗಿದೆ. ಮೃತ ದೇಹವನ್ನ ಕೆ.ಆರ್ ನಗರದ ಕಡೆ ಕೊಂಡೊಯ್ಯದಂತೆ ಪೊಲೀಸರು ತಡೆದಿದ್ದು ಈ ವೇಳೆ ಮೈಸೂರಿನ ಇಲವಾಲ ಬಳಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಪೊಲೀಸರ ಕ್ರಮಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರ ನಡೆ ಏಕ ಪಕ್ಷೀಯವಾಗಿದೆ ಎಂದು ಆರೋಪ ಮಾಡಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ