Mohan Charan Majhi: ಸ್ಪೀಕರ್ ಮೇಲೆ ದಾಲ್ ಎರಚಿದ್ದ ಮೋಹನ್ ಮಾಝಿ ಅವರನ್ನೇ ಒಡಿಶಾದ ಸಿಎಂ ಆಗಿ ಬಿಜೆಪಿ ಆಯ್ಕೆ ಮಾಡಿದ್ದೇಕೆ?

ಒಡಿಶಾದ ನೂತನ ಹಾಗೂ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಬಿಜೆಪಿ ಹೈಕಮಾಂಡ್ ಮೋಹನ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಹಾಗಾದರೆ, ಈ ಮೋಹನ್ ಚರಣ್ ಮಾಝಿ ಯಾರು? ಎಂಬ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

Mohan Charan Majhi: ಸ್ಪೀಕರ್ ಮೇಲೆ ದಾಲ್ ಎರಚಿದ್ದ ಮೋಹನ್ ಮಾಝಿ ಅವರನ್ನೇ ಒಡಿಶಾದ ಸಿಎಂ ಆಗಿ ಬಿಜೆಪಿ ಆಯ್ಕೆ ಮಾಡಿದ್ದೇಕೆ?
ಮೋಹನ್ ಚರಣ್ ಮಾಝಿ
Follow us
ಸುಷ್ಮಾ ಚಕ್ರೆ
|

Updated on: Jun 11, 2024 | 8:36 PM

ನವದೆಹಲಿ: ಸಾಕಷ್ಟು ಚರ್ಚೆಗಳ ನಂತರ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ (Mohan Charan Majhi) ಅವರನ್ನು ಆಯ್ಕೆ ಮಾಡಿದೆ. ನವೀನ್ ಪಟ್ನಾಯಕ್ (Naveen Patnaik) ನೇತೃತ್ವದ ಬಿಜು ಜನತಾ ದಳದ 24 ವರ್ಷಗಳ ಸುಧೀರ್ಘ ಆಡಳಿತ ಅಂತ್ಯಗೊಳ್ಳುತ್ತಿದ್ದಂತೆ 53 ವರ್ಷದ ಬುಡಕಟ್ಟು ನಾಯಕರಾದ ಮೋಹನ್ ಮಾಝಿ ಒಡಿಶಾ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಲಿದ್ದಾರೆ. ಇದಕ್ಕೂ ಮುನ್ನ ಭುವನೇಶ್ವರದಲ್ಲಿ ಒಡಿಶಾದ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೇಂದ್ರ ಸಚಿವರು ಮತ್ತು ಬಿಜೆಪಿ ಕೇಂದ್ರ ವೀಕ್ಷಕರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದರ್ ಯಾದವ್ ಉಪಸ್ಥಿತರಿದ್ದರು.

ಮೋಹನ್ ಚರಣ್ ಮಾಝಿ ಅವರು ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಇಂದು ಆಯ್ಕೆಯಾಗಿದ್ದಾರೆ. 4 ಬಾರಿ ಶಾಸಕರಾಗಿರುವ ಮಾಝಿ ಫೈರ್‌ಬ್ರಾಂಡ್ ಬುಡಕಟ್ಟು ನಾಯಕ. 2019ರಿಂದ ಕಿಯೋಂಜಾರ್ ವಿಧಾನಸಭಾ ಸ್ಥಾನವನ್ನು ಹೊಂದಿರುವ ಮೋಹನ್ ಮಾಝಿ 2024ರ ವಿಧಾನಸಭಾ ಚುನಾವಣೆಯಲ್ಲಿ 11,000 ಮತಗಳ ಅಂತರದಿಂದ ಗೆದ್ದಿದ್ದಾರೆ.

ಮೋಹನ್ ಚರಣ್ ಮಾಝಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನಡೆಸಲ್ಪಡುವ ಸರಸ್ವತಿ ಶಿಶು ವಿದ್ಯಾ ಮಂದಿರದಲ್ಲಿ ಗುರೂಜಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 52 ವರ್ಷದ ಈ ನಾಯಕ ಗ್ರಾಮ ಸಭೆಯ ಮುಖ್ಯಸ್ಥ (ಸರಪಂಚ್) ಆಗುವ ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಚುನಾವಣೆಗಳಲ್ಲಿ ಕಳಪೆ ಸಾಧನೆ, ನೈತಿಕ ಹೊಣೆಹೊತ್ತು ಒಡಿಶಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ​ ದಾಸ್ ರಾಜೀನಾಮೆ

ಮೋಹನ್ ಚರಣ್ ಮಾಝಿ ಅವರು ಖನಿಜಯುಕ್ತ ಕೆಂಡುಜಾರ್ ಜಿಲ್ಲೆಯ ಪ್ರಬಲ ಮತ್ತು ಫೈರ್‌ಬ್ರಾಂಡ್ ಬುಡಕಟ್ಟು ನಾಯಕರಾಗಿದ್ದಾರೆ. ವಿವಾದಾತ್ಮಕ ವ್ಯಕ್ತಿಯಾಗಿರುವ ಮೋಹನ್ ಮಾಝಿ ಅವರು ಬಿಜೆಪಿಯ ನಿಷ್ಠಾವಂತ ಸದಸ್ಯ ಮತ್ತು ಪ್ರಬಲ ಸಂಘಟನಾ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಬಲವಾದ ಆರ್‌ಎಸ್‌ಎಸ್ ಸಂಪರ್ಕ ಹೊಂದಿರುವ ಮಾಝಿ, ಬಿಜೆಪಿಯ ಒಡಿಶಾ ರಾಜ್ಯ ಘಟಕದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

ಮಾಝಿ ಅವರು ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರೂ ಆಗಿದ್ದು, ಪಕ್ಷದ ಚುನಾವಣಾ ಕಾರ್ಯತಂತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಜನಸಾಮಾನ್ಯರೊಂದಿಗೆ, ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕ ಸಾಧಿಸುವ ಅವರ ಸಾಮರ್ಥ್ಯವು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆ. ಆರ್​ಎಸ್​ಎಸ್​ ಹಿನ್ನೆಲೆ ಮತ್ತು ಬಿಜೆಪಿಯಲ್ಲಿ ಎರಡೂವರೆ ದಶಕಗಳಿಂದ ಸಕ್ರಿಯರಾಗಿರುವ ಹಿರಿಯ ನಾಯಕರಾದ್ದರಿಂದ ಮೋಹನ್ ಮಾಝಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಸ್ಪೀಕರ್ ಮೇಲೆ ದಾಲ್ ಎಸೆದಿದ್ದ ಮೋಹನ್ ಮಾಝಿ:

ಮೋಹನ್ ಚರಣ್ ಮಾಝಿ ಕೆಲವು ವಿವಾದಾತ್ಮಕ ಘಟನೆಗಳಿಂದಲೂ ಜನಪ್ರಿಯರಾದವರು. 2023ರಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಭಟನೆ ವೇಳೆ ಸ್ಪೀಕರ್ ಮೇಲೆ ಮೋಹನ್ ಚರಣ್ ಮಾಝಿ ಬೇಯಿಸದ ದಾಲ್ ಎರಚಿದ್ದರು. ಈ ಕಾರಣಕ್ಕಾಗಿ ಅವರನ್ನು ಅಸೆಂಬ್ಲಿಯಿಂದ ಅಮಾನತುಗೊಳಿಸಲಾಗಿತ್ತು. ಮಾಝಿ ಮತ್ತು ಅವರ ಶಾಸಕ ಸಹೋದ್ಯೋಗಿ ಮುಖೇಶ್ ಮಹಾಲಿಂಗ್ ಅವರು ದಾಲ್ (ಬೇಳೆಕಾಳು) ಎಸೆದಿರುವುದನ್ನು ನಿರಾಕರಿಸಿದ್ದರು.

ಇದನ್ನೂ ಓದಿ: Mohan Charan Majhi: ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಆಯ್ಕೆ

ಮಧ್ಯಾಹ್ನದ ಊಟ ಯೋಜನೆಗಾಗಿ ಬೇಳೆಕಾಳುಗಳ ಖರೀದಿಯಲ್ಲಿ 700 ಕೋಟಿ ರೂ.ಗಳ ಹಗರಣವನ್ನು ಎತ್ತಿ ತೋರಿಸಲು ಮೋಹನ್ ಮಾಝಿ ಮತ್ತು ಮಹಾಲಿಂಗ್ ಅವರು ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ನಡೆಸಿದ್ದರು. ಈ ವೇಳೆ ಸ್ಪೀಕರ್ ಮೇಲೆ ಬೇಳುಕಾಳುಗಳನ್ನು ಎಸೆದಿದ್ದರು.

ಜೂನ್ 12ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ:

ಒಡಿಶಾದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜೂನ್ 12ರಂದು ನಿಗದಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭುವನೇಶ್ವರದ ಜನತಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಡಿ ಅಧ್ಯಕ್ಷ ಹಾಗೂ ನಿರ್ಗಮಿತ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಕೂಡ ಬಿಜೆಪಿ ಆಹ್ವಾನಿಸಿದೆ. ಈ ಸಮಾರಂಭದ ಮೊದಲ ಆಮಂತ್ರಣ ಪತ್ರವನ್ನು ಪುರಿಯಲ್ಲಿ ಜಗನ್ನಾಥನಿಗೆ ನೀಡಲಾಯಿತು. ಅದನ್ನು 12ನೇ ಶತಮಾನದ ಪುರಿ ಜಗನ್ನಾಥ ದೇವಾಲಯದಲ್ಲಿ ಹೊಸದಾಗಿ ಚುನಾಯಿತರಾದ ಕೆಲವು ಶಾಸಕರು ವಿತರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ