Mohan Charan Majhi: ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಆಯ್ಕೆ
Odisha Chief Minister: ಒಡಿಶಾದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಜಿ ಅವರನ್ನು ಬಿಜೆಪಿ ಹೈಕಮಾಂಡ್ ಇಂದು ಆಯ್ಕೆ ಮಾಡಿದೆ. ಫೈರ್‌ಬ್ರಾಂಡ್ ಬುಡಕಟ್ಟು ನಾಯಕರಾಗಿರುವ ಮೋಹನ್ ಚರಣ್ ಮಾಝಿ 2024ರ ವಿಧಾನಸಭಾ ಚುನಾವಣೆಯಲ್ಲಿ 11,000 ಮತಗಳ ಅಂತರದಿಂದ ಗೆದ್ದಿದ್ದರು.
ನವದೆಹಲಿ: ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ (Naveen Patnaik) ಈ ಬಾರಿಯ ಚುನಾವಣೆಯಲ್ಲಿ ಸೋಲನ್ನಪ್ಪಿದ ನಂತರ ಒಡಿಶಾ ರಾಜ್ಯದ ಮುಖ್ಯಮಂತ್ರಿಯಾಗಿ (Odisha Chief Minister) 24 ವರ್ಷಗಳ ಅಧಿಕಾರಾವಧಿಯನ್ನು ಮುಕ್ತಾಯಗೊಳಿಸಿದ್ದಾರೆ. ಎರಡೂವರೆ ದಶಕಗಳ ನಂತರ ಇದೀಗ ಒಡಿಶಾದ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ (Mohan Charan Majhi) ಆಯ್ಕೆಯಾಗಿದ್ದಾರೆ.
ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬಹಿರಂಗಪಡಿಸಿದ್ದಾರೆ.
4 ಬಾರಿ ಬಿಜೆಪಿಯಿಂದ ಶಾಸಕರಾಗಿರುವ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಭಾರತೀಯ ಜನತಾ ಪಕ್ಷ ಮಂಗಳವಾರ ಆಯ್ಕೆ ಮಾಡಿದೆ. ಕೆ.ವಿ. ಸಿಂಗ್‌ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
#WATCH | Mohan Charan Majhi elected as the Leader of BJP Legislative Party in Odisha. He will be the new CM of the state. pic.twitter.com/tDMART1zN7
— ANI (@ANI) June 11, 2024
ಇದನ್ನೂ ಓದಿ: PM Modi: ಆಂಧ್ರಪ್ರದೇಶ, ಒಡಿಶಾ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿ
ಮಾಝಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಮೋಹನ್ ಚರಣ್ ಮಾಝಿ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ಬಿಜು ಜನತಾ ದಳದ ಮಿನಾ ಮಾಝಿ ಅವರನ್ನು 11,577 ಮತಗಳಿಂದ ಸೋಲಿಸಿದರು.
#WATCH | Bhubaneswar | Mohan Charan Majhi to be Chief Minister of Odisha, announces BJP leader Rajnath Singh. pic.twitter.com/5fBKDijVjZ
— ANI (@ANI) June 11, 2024
ಒಡಿಶಾ ವಿಧಾನಸಭೆಯಲ್ಲಿ 147 ಸ್ಥಾನಗಳಲ್ಲಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳವನ್ನು ಸೋಲಿಸಿದ ಕೆಲವು ದಿನಗಳ ನಂತರ ಮೋಹನ್ ಚರಣ್ ಮಾಝಿ ಅವರ ಹೆಸರನ್ನು ಸಿಎಂ ಸ್ಥಾನಕ್ಕೆ ಘೋಷಿಸಲಾಗಿದೆ.
ಒಡಿಶಾದಲ್ಲಿ ತನ್ನ ಚೊಚ್ಚಲ ಸರ್ಕಾರವನ್ನು ರಚಿಸಲು ಬಿಜೆಪಿ ಸಜ್ಜಾಗಿದೆ. ಜೂನ್ 12ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಬಿಜೆಡಿ ಅಧ್ಯಕ್ಷ ಮತ್ತು ನಿರ್ಗಮಿತ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.
#WATCH | Bhubaneswar: BJP MLA Mohan Charan Majhi to be the new CM of Odisha. Kanak Vardhan Singh Deo and Pravati Parida to be the Deputy Chief Ministers.
The three leaders address the media after the announcement of their names. State BJP chief Manmohan Samal also with them. pic.twitter.com/SwBCUwpEI2
— ANI (@ANI) June 11, 2024
ಇದನ್ನೂ ಓದಿ: Amaravati: ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ ಚಂದ್ರಬಾಬು ನಾಯ್ಡು
147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಪಡೆಯುವ ಮೂಲಕ ಅನುಕೂಲಕರ ಬಹುಮತವನ್ನು ಸಾಧಿಸಿತ್ತು. ಬಿಜೆಪಿ ಒಡಿಶಾದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸದೆ ಮೋದಿ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿತ್ತು. ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ 2024ರಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದು 40.07 ಶೇಕಡಾ ಮತಗಳನ್ನು ಗಳಿಸಿತು. ಇಡೀ ರಾಜ್ಯದಲ್ಲಿ ಬಿಜೆಪಿ 1,00,64,827 ಮತಗಳನ್ನು ಪಡೆದಿದೆ. 2019, 2014 ಮತ್ತು 2009ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ 23, 10 ಮತ್ತು 6 ಸ್ಥಾನಗಳನ್ನು ಗೆದ್ದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Tue, 11 June 24