AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi Cabinet 3.0: ನರೇಂದ್ರ ಮೋದಿ ಹೊಸ ಕ್ಯಾಬಿನೆಟ್; ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಸಚಿವರ ಪಟ್ಟಿ ಇಲ್ಲಿದೆ

ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 71 ಸಚಿವರೊಂದಿಗೆ ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಪ್ರಮಾಣವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಲ್ಲಿದೆ.

Modi Cabinet 3.0: ನರೇಂದ್ರ ಮೋದಿ ಹೊಸ ಕ್ಯಾಬಿನೆಟ್; ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಸಚಿವರ ಪಟ್ಟಿ ಇಲ್ಲಿದೆ
ನರೇಂದ್ರ ಮೋದಿ ಪ್ರಮಾಣವಚನ
ಸುಷ್ಮಾ ಚಕ್ರೆ
|

Updated on:Jun 09, 2024 | 10:08 PM

Share

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಇತರ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. 73 ವರ್ಷದ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರು ನಂತರ ಸತತ ಮೂರನೇ ಅವಧಿಗೆ ಅಧಿಕಾರ ನಡೆಸಿದ ಎರಡನೇ ಪ್ರಧಾನಿಯಾಗಿದ್ದಾರೆ. ಮೋದಿಯವರ ಸಚಿವ ಸಂಪುಟ 30 ಕ್ಯಾಬಿನೆಟ್ ಮಂತ್ರಿಗಳು, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ರಾಜ್ಯ ಮಂತ್ರಿಗಳನ್ನು ಒಳಗೊಂಡಿದೆ.

ಇದು ದೇಶದ ಎಲ್ಲಾ ಮೂಲೆಗಳಿಂದ ಮತ್ತು ಸಾಮಾಜಿಕ ಗುಂಪುಗಳ ಪ್ರಾತಿನಿಧ್ಯವನ್ನು ಒಳಗೊಂಡಿದೆ. ಇದು ಇತರೆ ಹಿಂದುಳಿದ ವರ್ಗಗಳಿಂದ 27, ಪರಿಶಿಷ್ಟ ಜಾತಿಯಿಂದ 10, ಪರಿಶಿಷ್ಟ ಪಂಗಡದಿಂದ 5 ಮತ್ತು ಅಲ್ಪಸಂಖ್ಯಾತರಿಂದ 5 ಸಚಿವರನ್ನು ಹೊಂದಿದೆ. ದಾಖಲೆಯ 18 ಹಿರಿಯ ಸಚಿವರು ಸಚಿವಾಲಯಗಳ ಮುಖ್ಯಸ್ಥರಾಗಿರುತ್ತಾರೆ.

ಇದನ್ನೂ ಓದಿ: Modi 3.0 Cabinet: 72 ಸಚಿವರು, 11 ಮಿತ್ರರಾಷ್ಟ್ರಗಳು, 24 ರಾಜ್ಯಗಳು; ಪ್ರಮಾಣ ವಚನ ಸ್ವೀಕರಿಸಿದ ಮೋದಿಯ ಹೊಸ ಟೀಂ

ನೂತನ ಕೇಂದ್ರ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ:

(1.) ನರೇಂದ್ರ ಮೋದಿ (ಬಿಜೆಪಿ)

(2.) ರಾಜನಾಥ್ ಸಿಂಗ್ (ಬಿಜೆಪಿ)

(3.) ಅಮಿತ್ ಶಾ (ಬಿಜೆಪಿ)

(4.) ನಿತಿನ್ ಗಡ್ಕರಿ (ಬಿಜೆಪಿ)

(5.) ಜೆ.ಪಿ ನಡ್ಡಾ (ಬಿಜೆಪಿ)

(6.) ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)

(7.) ನಿರ್ಮಲಾ ಸೀತಾರಾಮನ್ (ಬಿಜೆಪಿ)

(8.) ಎಸ್. ಜೈಶಂಕರ್ (ಬಿಜೆಪಿ)

(9.) ಮನೋಹರ್ ಲಾಲ್ ಖಟ್ಟರ್ (ಬಿಜೆಪಿ)

(10.) ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್)

(11.) ಪಿಯೂಷ್ ಗೋಯಲ್ (ಬಿಜೆಪಿ)

(12.) ಧರ್ಮೇಂದ್ರ ಪ್ರಧಾನ್ (ಬಿಜೆಪಿ)

(13.) ಜಿತನ್ ರಾಮ್ ಮಾಂಝಿ (HAM)

(14.) ರಾಜೀವ್ ರಂಜನ್ ಸಿಂಗ್ (ಜೆಡಿಯು)

(15.) ಸರ್ಬಾನಂದ್ ಸೋನೋವಾಲ್ (ಬಿಜೆಪಿ)

(16.) ಡಾ. ವೀರೇಂದ್ರ ಕುಮಾರ್ (ಬಿಜೆಪಿ)

(17.) ರಾಮ್ ಮೋಹನ್ ನಾಯ್ಡು (ಟಿಡಿಪಿ)

(18.) ಪ್ರಲ್ಹಾದ್ ಜೋಶಿ (ಬಿಜೆಪಿ)

(19.) ಜುಯಲ್ ಓರಮ್ (ಬಿಜೆಪಿ)

(20.) ಗಿರಿರಾಜ್ ಸಿಂಗ್ (ಬಿಜೆಪಿ)

(21.) ಅಶ್ವಿನಿ ವೈಷ್ಣವ್ (ಬಿಜೆಪಿ)

(22.) ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)

(23.) ಭೂಪೇಂದರ್ ಯಾದವ್ (ಬಿಜೆಪಿ)

(24.) ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)

(25.) ಅನ್ನಪೂರ್ಣ ದೇವಿ (ಬಿಜೆಪಿ)

(26.) ಕಿರಣ್ ರಿಜಿಜು (ಬಿಜೆಪಿ)

(27.) ಹರ್ದೀಪ್ ಸಿಂಗ್ ಪುರಿ (ಬಿಜೆಪಿ)

(28.) ಮನ್ಸುಖ್ ಮಾಂಡವಿಯಾ (ಬಿಜೆಪಿ)

(29.) ಜಿ. ಕಿಶನ್ ರೆಡ್ಡಿ (ಬಿಜೆಪಿ)

(30.) ಚಿರಾಗ್ ಪಾಸ್ವಾನ್ (LJP-ರಾಮ್ ವಿಲಾಸ್)

(31.) ಸಿ.ಆರ್ ಪಾಟೀಲ್ (ಬಿಜೆಪಿ)

(32.) ರಾವ್ ಇಂದರ್‌ಜಿತ್ ಸಿಂಗ್ (ಬಿಜೆಪಿ)

(33.) ಡಾ. ಜಿತೇಂದ್ರ ಸಿಂಗ್ (ಬಿಜೆಪಿ)

(34.) ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)

(35.) ಪ್ರತಾಪ್ ಜಾಧವ್ (ಶಿವಸೇನೆ)

(36.) ಜಯಂತ್ ಚೌಧರಿ (RLD)

(37.) ಜಿತಿನ್ ಪ್ರಸಾದ (ಬಿಜೆಪಿ)

38.) ಶ್ರೀಪಾದ್ ನಾಯಕ್ (ಬಿಜೆಪಿ)

(39.) ಕಿಶನ್ ಪಾಲ್ ಗುರ್ಜರ್ (ಬಿಜೆಪಿ)

(40.) ಪಂಕಜ್ ಚೌಧರಿ (ಬಿಜೆಪಿ)

(41.) ರಾಮದಾಸ್ ಅಠಾವಳೆ (RPI)

(42.) ರಾಮನಾಥ್ ಠಾಕೂರ್ (ಜೆಡಿಯು)

(43.) ನಿತ್ಯಾನಂದ ರೈ (ಬಿಜೆಪಿ)

(44.) ಅನುಪ್ರಿಯಾ ಪಟೇಲ್ (ಅಪ್ನಾ ದಳ)

(45.) ವಿ ಸೋಮಣ್ಣ (ಬಿಜೆಪಿ)

(46.) ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)

(47.) ಎಸ್ಪಿ ಸಿಂಗ್ ಬಘೇಲ್ (ಬಿಜೆಪಿ)

(48.) ಶೋಭಾ ಕರಂದ್ಲಾಜೆ (ಬಿಜೆಪಿ)

(49.) ಕೀರ್ತಿ ವರ್ಧನ್ ಸಿಂಗ್ (ಬಿಜೆಪಿ)

(50.) ಬಿಎಲ್ ವರ್ಮಾ (ಬಿಜೆಪಿ)

(51.) ಶಾಂತನು ಠಾಕೂರ್ (ಬಿಜೆಪಿ)

(52.) ಸುರೇಶ್ ಗೋಪಿ (ಬಿಜೆಪಿ)

(53.) ಎಲ್ ಮುರುಗನ್ (ಬಿಜೆಪಿ)

(54.) ಬಂಡಿ ಸಂಜಯ್ ಕುಮಾರ್ (ಬಿಜೆಪಿ)

(55.) ಅಜಯ್ ತಮ್ತಾ (ಬಿಜೆಪಿ)

(56.) ಭಗೀರಥ ಚೌಧರಿ (ಬಿಜೆಪಿ)

(57.) ಕಮಲೇಶ್ ಪಾಸ್ವಾನ್ (ಬಿಜೆಪಿ)

(58.) ಸತೀಶ್ ಚಂದ್ರ ದುಬೆ (ಬಿಜೆಪಿ)

(59.) ಸಂಜಯ್ ಸೇಠ್ (ಬಿಜೆಪಿ)

(60.) ರವನೀತ್ ಸಿಂಗ್ ಬಿಟ್ಟು (ಬಿಜೆಪಿ)

(61.) ದುರ್ಗಾ ದಾಸ್ ಯುಕೆ (ಬಿಜೆಪಿ)

(62.) ರಕ್ಷಾ ಖಡ್ಸೆ (ಬಿಜೆಪಿ)

(63.) ಸುಕಾಂತ ಮಜುಂದಾರ್ (ಬಿಜೆಪಿ)

(64.) ಸಾವಿತ್ರಿ ಠಾಕೂರ್ (ಬಿಜೆಪಿ)

(65.) ತೋಖಾನ್ ಸಾಹು (ಬಿಜೆಪಿ)

(66.) ರಾಜ್ ಭೂಷಣ್ ಚೌಧರಿ (ಬಿಜೆಪಿ)

(67.) ಭೂಪತಿ ರಾಜು ಶ್ರೀನಿವಾಸ ವರ್ಮ (ಬಿಜೆಪಿ)

(68.) ಹರ್ಷ್ ಮಲ್ಹೋತ್ರಾ (ಬಿಜೆಪಿ)

(69.) ನಿಮುಬೆನ್ ಬಂಭನಿಯಾ (ಬಿಜೆಪಿ)

(70.) ಮುರಳೀಧರ್ ಮೊಹೋಲ್ (ಬಿಜೆಪಿ)

(71.) ಜಾರ್ಜ್ ಕುರಿಯನ್ (ಬಿಜೆಪಿ)

(72.) ಪಬಿತ್ರಾ ಮಾರ್ಗರಿಟಾ (ಬಿಜೆಪಿ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Sun, 9 June 24