Kerala Gold Smuggling ಪ್ರಕರಣ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಕಚೇರಿ

| Updated By:

Updated on: Jul 08, 2020 | 7:53 PM

ತಿರುವನಂತಪುರಂ: ಕೇರಳದ ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಧಾನಿ ಕಾರ್ಯಾಲಯ ಮಾಹಿತಿ ಪಡೆಯಲು ಮುಂದಾಗಿದೆ. ಇದಲ್ಲದೆ, ಕೇರಳದ ಸಚಿವರೊಬ್ಬರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಸೀಮಾ ಸುಂಕ (Customs) ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಿಗಬೇಕು. ಅದರ ಬಳಿಕ ಉನ್ನತ ತನಿಖೆ ಬಗ್ಗೆ ಕೇಂದ್ರ ನಿರ್ಧಾರ‌ ಕೈಗೊಳ್ಳಲಿದೆ. ಈ ಮಧ್ಯೆ ಎರ್ನಾಕುಲಂನಲ್ಲಿರುವ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಿಬಿಐ ತಂಡವೊಂದು ಸಭೆ ನಡೆಸಿದೆ. ಈ ನಡುವೆ ವಿಪಕ್ಷಗಳು ಸಿಎಂ […]

Kerala Gold Smuggling ಪ್ರಕರಣ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಕಚೇರಿ
Follow us on

ತಿರುವನಂತಪುರಂ: ಕೇರಳದ ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಧಾನಿ ಕಾರ್ಯಾಲಯ ಮಾಹಿತಿ ಪಡೆಯಲು ಮುಂದಾಗಿದೆ. ಇದಲ್ಲದೆ, ಕೇರಳದ ಸಚಿವರೊಬ್ಬರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೊದಲು ಸೀಮಾ ಸುಂಕ (Customs) ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಿಗಬೇಕು. ಅದರ ಬಳಿಕ ಉನ್ನತ ತನಿಖೆ ಬಗ್ಗೆ ಕೇಂದ್ರ ನಿರ್ಧಾರ‌ ಕೈಗೊಳ್ಳಲಿದೆ. ಈ ಮಧ್ಯೆ ಎರ್ನಾಕುಲಂನಲ್ಲಿರುವ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಿಬಿಐ ತಂಡವೊಂದು ಸಭೆ ನಡೆಸಿದೆ.

ಈ ನಡುವೆ ವಿಪಕ್ಷಗಳು ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯಿಸಿವೆ. ವಿರೋಧ ಪಕ್ಷದ ನಾಯಕ ಹಾಗೂ ಹಿರಿಯ ಕಾಂಗ್ರೆಸ್​ ಮುಖಂಡ ರಮೇಶ್​ ಚೆನ್ನಿತ್ತಲ ಪ್ರಕರಣದ ಮುಖ್ಯ ಆರೋಪಿ ಸ್ವಪ್ನಾ ಸುರೇಶ್​ ಗೆ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಉದ್ಯೋಗ ನೀಡಿ ತಿಂಗಳಿಗೆ 1.5 ಲಕ್ಷ ಸಂಬಳ ಸಹ ನಿಗದಿ ಮಾಡಲಾಗಿತ್ತು. ಇಲಾಖೆಯ ನೇರ ಜವಾಬ್ದಾರಿ ಹೊಂದಿರುವ ಸಿಎಂ ವಿಜಯನ್​ ಅರಿವಿಲ್ಲದೆ ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ ಸಿಎಂ ಪಿಣರಾಯಿ ವಿಜಯನ್​ ವಜಾಗೊಂಡಿರುವ ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಶಂಕರ್​ ಮತ್ತು ಸ್ವಪ್ನಾ ಸುರೇಶ್​ರನ್ನ ಬಚಾವ್​ ಮಾಡುವ ಯತ್ನದಲ್ಲಿ ತೊಡಗಿದ್ದಾರೆ. ಅದಕ್ಕಾಗಿ, ಸಿಎಂ ಕಾರ್ಯಾಲಯವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Published On - 4:01 pm, Wed, 8 July 20