ನೀವು ಯಾಕೆ ಹೆಲ್ಮೆಟ್ ಹಾಕಿಲ್ಲ ಎಂದು ಪ್ರಶ್ನಿಸಿದ ಅಸ್ಸಾಂ ಪತ್ರಕರ್ತನ ಮೇಲೆ ಪೊಲೀಸರ ಹಲ್ಲೆ; ವಿಡಿಯೊ ವೈರಲ್

ಬೈಕ್‌ನಲ್ಲಿ ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸಿರಲಿಲ್ಲ, ನನ್ನ ಒಂದೇ ಒಂದು ತಪ್ಪು ಎಂದರೆ  ನಾನು ಅವರನ್ನು ಪ್ರಶ್ನಿಸಿದ್ದು. ಅವರು ನನ್ನನ್ನು ನಿಂದಿಸಿದರು, ಹಲ್ಲೆ ನಡೆಸಿದರು...

ನೀವು ಯಾಕೆ ಹೆಲ್ಮೆಟ್ ಹಾಕಿಲ್ಲ ಎಂದು  ಪ್ರಶ್ನಿಸಿದ ಅಸ್ಸಾಂ ಪತ್ರಕರ್ತನ ಮೇಲೆ ಪೊಲೀಸರ ಹಲ್ಲೆ; ವಿಡಿಯೊ ವೈರಲ್
ಪತ್ರಕರ್ತ ಜಯಂತ್ ದೇಬನಾಥ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 08, 2022 | 11:43 AM

ಗುವಾಹಟಿ: ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎಂದು ಪ್ರಶ್ನಿಸಿದ ಪತ್ರಕರ್ತರೊಬ್ಬರ ಮೇಲೆ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಅಸ್ಸಾಂನಲ್ಲಿ (Assam) ಹಲ್ಲೆ ನಡೆಸಿದ್ದಾರೆ. ನಿನ್ನೆ ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಪತ್ರಕರ್ತ ಜಯಂತ್ ದೇಬನಾಥ್ (Jayant Debnath) ಅವರನ್ನು ಇಬ್ಬರು ಪೊಲೀಸರು ಥಳಿಸುತ್ತಿರುವುದು ವಿಡಿಯೊದಲ್ಲಿದೆ. ನಂತರ ಅವರು  ದೇಬನಾಥ್ ಅವರನ್ನು ಪೊಲೀಸ್ ಜೀಪಿನಲ್ಲಿ ಬಲವಂತವಾಗಿ ಕೂರಿಸಲು ಹೆಚ್ಚಿನ ಪೊಲೀಸರನ್ನು ಕರೆಯುತ್ತಾರೆ. ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸದೇ ಇರುವುದನ್ನು ನೋಡಿ ಸಾರ್ವಜನಿಕರಿಗೆ ಇದು ಯಾವ ಸಂದೇಶ ನೀಡುತ್ತದೆ ಎಂದು ನಾನು ಪ್ರಶ್ನಿಸಿದ್ದಾರೆ ಎಂದು ಪತ್ರಕರ್ತ ಆರೋಪಿಸಿದ್ದಾರೆ.  ಬೈಕ್‌ನಲ್ಲಿ ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸಿರಲಿಲ್ಲ, ನನ್ನ ಒಂದೇ ಒಂದು ತಪ್ಪು ಎಂದರೆ  ನಾನು ಅವರನ್ನು ಪ್ರಶ್ನಿಸಿದ್ದು. ಅವರು ನನ್ನನ್ನು ನಿಂದಿಸಿದರು, ಹಲ್ಲೆ ನಡೆಸಿದರು ಎಂದು ದೇಬನಾಥ್ ಎಎನ್‌ಐಗೆ ತಿಳಿಸಿದರು.  ನಾನು ಪತ್ರಕರ್ತ ಎಂದು ಹೇಳಿದಾಗ ಪೊಲೀಸರು ಹೆಚ್ಚು ಕೋಪಗೊಂಡರು ಎಂದು ದೇಬನಾಥ್ ಹೇಳಿದ್ದಾರೆ.  ಅಸ್ಸಾಂ ಪೊಲೀಸರು ಜಯಂತ್ ದೇಬನಾಥ್ ದಾಖಲಿಸಿದ ಎಫ್‌ಐಆರ್ ಆಧರಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಕಾನ್‌ಸ್ಟೆಬಲ್‌ಗಳ ವಿರುದ್ಧದ ಎಫ್‌ಐಆರ್ ಆಧರಿಸಿ ನಾವು ಈ ವಿಷಯದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಚಿರಾಂಗ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಲಾಬಾ ಕ್ರ ದೇಕಾ ಹೇಳಿದ್ದಾರೆ.

ದೇಬನಾಥ್ ಅವರು ಅಸ್ಸಾಂ ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರಿ ಸಿಬ್ಬಂದಿಗಳು ಕಾನೂನನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ನೀವು ಕಾನೂನುಗಳನ್ನು ರಚಿಸುತ್ತೀರಿ ಮತ್ತು ನಿಮ್ಮ ಸ್ವಂತ ಜನರು ಅವುಗಳನ್ನು ಮುರಿಯುತ್ತೀರಿ ಎಂದು ನಾನು ಅಸ್ಸಾಂ ಸರ್ಕಾರಕ್ಕೆ ಹೇಳಲು ಬಯಸುತ್ತೇನೆ. ತ್ವರಿತ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ದೇಬನಾಥ್ ಹೇಳಿದರು.

“ಈ ಘಟನೆಯು ರಾತ್ರಿಯಲ್ಲಿ ಸಂಭವಿಸಿದ್ದರೆ, ಅವರು ಬಹುಶಃ ನನ್ನನ್ನು ಗುಂಡಿಕ್ಕಿ ಕೊಲ್ಲುತ್ತಿದ್ದರು. ಅವರ ನಡವಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Gold Smuggling Case ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮತ್ತು ಇತರರಿಗೆ ಕೇರಳ ಹೈಕೋರ್ಟ್ ಜಾಮೀನು

Published On - 11:41 am, Tue, 8 February 22