ದಕ್ಷಿಣ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ರಸಗೊಬ್ಬರ ನಿರ್ವಹಣಾ ವೆಚ್ಚ; ಆತಂಕದಲ್ಲಿ ರೈತರು

ಕರ್ನಾಟಕದಲ್ಲಿ 2008ರಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ​ ಭತ್ತದ ಬೆಳೆಗೆ ಅಗತ್ಯವಿದ್ದ ರಸಗೊಬ್ಬರದ ಕಾರ್ಯಕಾರಿ ವೆಚ್ಚ 4,000 ರೂಪಾಯಿಗಿಂತ ಕಡಿಮೆಯಿತ್ತು. ಆದರೆ ಅದು 2018ರ ವೇಳೆಗೆ ಬಹುತೇಕ 10,000 ರೂಪಾಯಿ ಗಡಿಯತ್ತ ನುಸುಳಿದೆ.

ದಕ್ಷಿಣ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ರಸಗೊಬ್ಬರ ನಿರ್ವಹಣಾ ವೆಚ್ಚ; ಆತಂಕದಲ್ಲಿ ರೈತರು
ದಕ್ಷಿಣ ಭಾರತದಲ್ಲಿ ಭಾರೀ ಹೆಚ್ಚಳವಾಗುತ್ತಿದೆ ರಸಗೊಬ್ಬರ ನಿರ್ವಹಣಾ ವೆಚ್ಚ; ಆತಂಕದಲ್ಲಿ ರೈತರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 08, 2022 | 11:58 AM

ಬೆಂಗಳೂರು: ಬೆಲೆ ಏರಿಕೆ ಪರಿಣಾಮ ಜನಸಾಮಾನ್ಯರಿಗೆ ದೈನಂದಿನ ಬದುಕು ದೂಡುವುದು ದುಸ್ತರವೆನಿಸಿಸುತ್ತಿದ್ದರೆ ರೈತರಿಗೆ ತಮ್ಮ ಕೃಷಿ ಬಳಕೆ ಸರಕುಗಳ ಬೆಲೆ ಏರಿಕೆಯಾಗಿ ಪಡಿಪಾಟಲು ಅನುಭವಿಸುವಂತಾಗಿದೆ. ಅದರಲ್ಲೂ ಭತ್ತದ ನಾಟಿಗೆ ಬಳಸುವ ರಸಗೊಬ್ಬರದ ದರಗಳು (fertilizer cost for paddy) ವಿಪರೀತ ಎನಿಸುವಷ್ಟು ಏರಿಕೆಯಾಗಿದ್ದು, ರೈತರು ಆತಂಕದಲ್ಲಿದ್ದಾರೆ. ರಸಗೊಬ್ಬರ ದರ ಹೆಚ್ಚಳವು ಇತ್ತೀಚೆಗೆ ಕೃಷಿ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭತ್ತದ ಬೆಳೆಗೆ ಬಳಸುವ (paddy cultivation) ರಸಗೊಬ್ಬರ ನಿರ್ವಹಣಾ ದರಗಳು ಹೆಚ್ಚಳವಾಗಿವೆ. ಇದರಿಂದ ಬೆಳೆ ಬೆಲೆ ಅಧಿಕವಾಗುತ್ತಿದೆ.

ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಡೇಟಾ ಪೋರ್ಟಲ್ (India Data Portal) ನಡೆಸಿರುವ ಅಧ್ಯಯನದ ಪ್ರಕಾರ 2008 ಮತ್ತು 2018ರ ನಡುವೆ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಸಗೊಬ್ಬರದ ದರಗಳ ಏರಿಕೆಯಿಂದ ಭತ್ತದ ಬೆಳೆ ವೆಚ್ಚ ಶೇ. 200ರಷ್ಟು ಏರಿಕೆ ಕಂಡಿದೆ.

ಕರ್ನಾಟಕದಲ್ಲಿ 2008ರಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ​ ಭತ್ತದ ಬೆಳೆಗೆ ಅಗತ್ಯವಿದ್ದ ರಸಗೊಬ್ಬರದ ಕಾರ್ಯಕಾರಿ ವೆಚ್ಚ 4,000 ರೂಪಾಯಿಗಿಂತ ಕಡಿಮೆಯಿತ್ತು. ಆದರೆ ಅದು 2018ರ ವೇಳೆಗೆ ಬಹುತೇಕ 10,000 ರೂಪಾಯಿ ಗಡಿಯತ್ತ ನುಸುಳಿದೆ. ಗರಿಷ್ಠ ಪ್ರಮಾಣದಲ್ಲಿ ಶೇ. 203 ರಷ್ಟು ಭತ್ತದ ಬೆಳೆಗೆ ಬಳಸುವ ರಸಗೊಬ್ಬರ ನಿರ್ವಹಣಾ ದರ ಏರಿಕೆಯಾಗಿದೆ.

ಆದರೆ ಆಂಧ್ರಪ್ರದೇಶದ ರೈತರು ಇದಕ್ಕಿಂತ ಸ್ವಲ್ಪಮಟ್ಟಿಗೆ ಕಡಿಮೆ ವೆಚ್ಚ ನಿಭಾಯಿಸಿದ್ದಾರೆ. ಆಂಧ್ರದಲ್ಲಿ ರಸಗೊಬ್ಬರ ನಿರ್ವಹಣಾ ವೆಚ್ಚ 7,786 ರೂಪಾಯಿಯಷ್ಟಾಗಿದೆ. ಅಂದರೆ 2008ಕ್ಕೆ ಹೋಲಿಸಿದಲ್ಲಿ ಶೇ. 166 ಏರಿಕೆ ಕಂಡಿದೆ.

ಇನ್ನ ತಮಿಳುನಾಡಿನಲ್ಲಿ ಭತ್ತದ ರಸಗೊಬ್ಬರ ನಿರ್ವಹಣಾ ದರ ಶೇ. 112 ಏರಿಕೆ ಕಂಡಿದೆ. ಅಂದರೆ 2008ಕ್ಕೆ ಹೋಲಿಸಿದಲ್ಲಿ ಶೇ. 112 ಏರಿಕೆಯೊಂದಿಗೆ ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ​ ಭತ್ತದ ಬೆಳೆಗೆ ಅಗತ್ಯವಿರುವ ರಸಗೊಬ್ಬರದ ಕಾರ್ಯಕಾರಿ ವೆಚ್ಚ 7,000 ರೂಪಾಯಿ ಒಳಗೆಯೆ ಇದೆ ಎಂದು Ministry of Agriculture and Farmers’ Welfare ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Ministry of Agriculture and Farmers’ Welfare ಮೂಲಗಳಿಂದ ಲಭ್ಯ ಮಾಹಿತಿ ಇಲ್ಲಿದೆ:

Southern states see rise in operational cost of fertilizer for paddy