AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮನೆಗಳನ್ನು ಕೆಡವ್ತೀರಾ, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ತೀವಿ: ಉಗ್ರರ ಎಚ್ಚರಿಕೆ

ಪಹಲ್ಗಾಮ್(Pahalgan)​ ದಾಳಿಯಲ್ಲಿ ಕೈವಾಡವಿದೆ ಎನ್ನಲಾದ ಶಂಕಿತ ಉಗ್ರರ ಮನೆಗಳನ್ನು ಅಧಿಕಾರಿಗಳು ಕೆವಿದ್ದಾರೆ. ಇದಕ್ಕೆ ಉರಿದುಕೊಂಡಿರುವ ಟಿಆರ್​ಎಫ್​ನ ಉಗ್ರರು ನಮ್ಮ ಮನೆಗಳನ್ನು ನಾಶಮಾಡ್ತೀರಾ, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನಿಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಅವರೆಲ್ಲರೂ ಹಿಂದೂಗಳ ಮೇಲೆ ದಾಳಿ ನಡೆಸಿದ್ದರು. ಮೊದಲು ಟಿಆರ್​ಎಫ್​ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.

ನಮ್ಮ ಮನೆಗಳನ್ನು ಕೆಡವ್ತೀರಾ, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ತೀವಿ: ಉಗ್ರರ ಎಚ್ಚರಿಕೆ
ಉಗ್ರರುImage Credit source: Britannica
ನಯನಾ ರಾಜೀವ್
|

Updated on:Apr 29, 2025 | 10:27 AM

Share

ಶ್ರೀನಗರ, ಏಪ್ರಿಲ್​ 29: ಪಹಲ್ಗಾಮ್(Pahalgan)​ ದಾಳಿಯಲ್ಲಿ ಕೈವಾಡವಿದೆ ಎನ್ನಲಾದ ಶಂಕಿತ ಉಗ್ರರ ಮನೆಗಳನ್ನು ಅಧಿಕಾರಿಗಳು ಕೆವಿದ್ದಾರೆ. ಇದಕ್ಕೆ ಉರಿದುಕೊಂಡಿರುವ ಟಿಆರ್​ಎಫ್​ನ ಉಗ್ರರು ನಮ್ಮ ಮನೆಗಳನ್ನು ನಾಶಮಾಡ್ತೀರಾ, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನಿಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಅವರೆಲ್ಲರೂ ಹಿಂದೂಗಳ ಮೇಲೆ ದಾಳಿ ನಡೆಸಿದ್ದರು. ಮೊದಲು ಟಿಆರ್​ಎಫ್​ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.

ಬಳಿಕ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿ, ಪ್ರಧಾನಿ ಪ್ರಧಾನಿ ಈ ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಂದು ಉಗ್ರನಿಗೂ ಊಹಿಸಲಾಗದ ಶಿಕ್ಷೆ ಕೊಡುವುದಾಗಿ ಘೋಷಿಸಿದ ಬಳಿಕ ಟಿಆರ್​ಎಫ್​ ಉಲ್ಟಾ ಹೊಡೆದಿತ್ತು. ಯಾರೋ ನಮ್ಮ ವೆಬ್​ಸೈಟ್ ಹ್ಯಾಕ್​ ಮಾಡಿದ್ದಾರೆ. ನಮಗೂ ದಾಳಿಗೂ ಸಂಬಂಧವೇ ಇಲ್ಲ ಎಂದು ಹೇಳಿತ್ತು.

ಇದೀಗ ಅದರ ಕಮಾಂಡರ್ ಅಹ್ಮದ್ ಸಲಾರ್ ಅವರ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಇತ್ತೀಚೆಗೆ ಉಗ್ರರ ಮನೆಗಳಲ್ಲಿ ನಡೆದ ಸ್ಫೋಟ ಹಾಗೂ ಭಯೋತ್ಪಾದಕ ಸಂಬಂಧಿಕರ ಹತ್ಯೆ ಬಗ್ಗೆ ಉಲ್ಲೇಖಿಸಲಾಗಿದೆ. ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರಿಂದ ಸೇಡು ತೀರಿಸಿಕೊಳ್ಳುತ್ತೇವೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.

ಇದನ್ನೂ ಓದಿ
Image
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
Image
ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೊಬ್ಬ ಕನ್ನಡಿಗ ಬಲಿ
Image
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
Image
ಪಹಲ್ಗಾಮ್‌ ಉಗ್ರರ ದಾಳಿ, ಕನ್ನಡಿಗರ ನೆರವಿಗೆ ಅಧಿಕಾರಿಗಳನ್ನ ಕಳುಹಿಸಿದ ಸಿಎಂ

ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ ಕುರಿತು ಅಪಹಾಸ್ಯ, ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳಿಗೆ ನಿಷೇಧ

ಪಹಲ್ಗಾಮ್ ದಾಳಿಯಲ್ಲಿ ಟಿಅರ್​ಎಫ್​ ಸಂಘಟನೆಯ ಯಾವ ಸದಸ್ಯನೂ ಭಾಗಿಯಾಗಿಲ್ಲ ಎಂಬುದನ್ನ ನಾವು ಸ್ಪಷ್ಟಪಡಿಸುತ್ತೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಹೊತ್ತುಕೊಂಡಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಸೈಫುಲ್ಲಾ ಖಾಲಿದ್. ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಮತ್ತು ಟಿಆರ್‌ಎಫ್‌ನ ಭಯೋತ್ಪಾದಕ ಚಟುವಟಿಕೆಗಳ ಪ್ರಮುಖ ನಿರ್ವಾಹಕ ಸೈಫುಲ್ಲಾ.

ಸೈಫುಲ್ಲಾ ಖಾಲಿದ್​ನನ್ನು ಸೈಫುಲ್ಲಾ ಕಸೂರಿ ಎಂದೂ ಕರೆಯುತ್ತಾರೆ. ಆತ ಲಷ್ಕರ್ ಎ ತೊಯ್ಬಾ ಉಪ ಮುಖ್ಯಸ್ಥನಾಗಿದ್ದಾನೆ, ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯೀದ್​ಗೆ ಆಪ್ತ ಎಂದು ಪರಿಗಣಿಸಲಾಗಿದೆ. ಸೈಫುಲ್ಲಾಗೆ ಐಷಾರಾಮಿ ಕಾರುಗಳೆಂದರೆ ಇಷ್ಟ, ಆತನಿಗೆ ಭಾರತದ ಪ್ರಧಾನಿಗಿಂತ ಹೆಚ್ಚಿನ ಭದ್ರತೆ ಇದೆಯಂತೆ.

ಸೈಫುಲ್ಲಾ ಖಾಲಿದ್ ಪಾಕಿಸ್ತಾನದಲ್ಲಿ ಎಷ್ಟು ಪ್ರಭಾವ ಹೊಂದಿದ್ದಾನೆಂದರೆ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಆತನ ಮೇಲೆ ಹೂಮಳೆ ಸುರಿಸಿ ಬರಮಾಡಿಕೊಳ್ಳುತ್ತಾರೆ. ಆತ ಪಾಕಿಸ್ತಾನದಲ್ಲಿ ವಿಐಪಿಯಂತೆ ಓಡಾಡುತ್ತಾನೆ. ಸೈಫುಲ್ಲಾ ಎರಡು ತಿಂಗಳ ಹಿಂದೆ ಪಾಕಿಸ್ತಾನ ಆಕ್ರಮಿತ ಪಂಜಾಬ್​ನ ಕಂಗನ್​ಪುರ ಪ್ರದೇಶಕ್ಕೆ ಬಂದಿದ್ದ, ಅಲ್ಲಿ ಒಂದು ಕಾರ್ಯಕ್ರಮವನ್ನು ಪಾಕಿಸ್ತಾನಿ ಸೇನೆಯ ಕರ್ನಲ್ ಜಾಹಿದ್ ಜರೀನ್ ಖಟ್ಟಕ್ ಆಯೋಜಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:02 am, Tue, 29 April 25

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ