ಬೆಂಗಳೂರು: ಭಾನುವಾರ ಟ್ವಿಟರ್ನಲ್ಲಿ #Rise of Tamil Nationalism ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ತಮಿಳು ಭಾಷೆಯೇ ಅತೀ ಪುರಾತನವಾದುದು ಎಂದು ವಾದಿಸಿದ ನೆಟ್ಟಿಗರು ಒಂದೆಡೆಯಾದರೆ ಇನ್ನು ಕೆಲವರು ತಮಿಳರಾ? ದ್ರಾವಿಡರಾ? ಎಂಬ ವಿಚಾರ ಸಂಕಿರಣದ ಫೋಸ್ಟ್ ಶೇರ್ ಮಾಡಿ ತಮಿಳರೆಲ್ಲರೂ ಒಂದಾಗಬೇಕು ಎಂಬ ಕರೆ ನೀಡಿದ್ದಾರೆ.
ಏನಿದು ವಿಷಯ?
ತಮಿಳುನಾಡಿನ ನಾಮ್ ತಮಿಳರ್ ಕಟ್ಚಿ (Naam Tamilar Katchi) ಪಕ್ಷ ಭಾನುವಾರ ತಮಿಳಾರಾ ? ದ್ರಾವಿಡರಾ? ಎಂಬ ರಾಜಕೀಯ ಸೆಮಿನಾರ್ ಆಯೋಜಿಸಿತ್ತು. ‘ಸಂಗಮ್ ಅವಧಿಯಿಂದ ಇಂದಿನವರೆಗೆ .. ತಮಿಳರಾ? ದ್ರಾವಿಡರ ..? ಎಂಬ ವಿಷಯದಲ್ಲಿ ನಾವು ತಮಿಳ್ ಪಕ್ಷದ ಪರವಾಗಿ ಜನಾಂಗೀಯ ವಿಮೋಚನೆಯ ರಾಜಕೀಯ ಸೆಮಿನಾರ್ ನಡೆಸುತ್ತಿದ್ದೇವೆ. ಇತಿಹಾಸದ ಉದ್ದಕ್ಕೂ ಪ್ರಪಂಚದ ಅತ್ಯಂತ ಹಳೆಯ ನಿವಾಸಿ ತಮಿಳು ರಾಷ್ಟ್ರೀಯ ಜನಾಂಗದ ವಿಶಿಷ್ಟ ಗುರುತುಗಳನ್ನು ತೊಡೆದುಹಾಕಲು ಮತ್ತು ರಾಷ್ಟ್ರೀಯ ಜನಾಂಗವನ್ನು ಅದರ ಹೊರಗೆ ತಮಿಳರು ಎಂದು ಅವಹೇಳನ ಮಾಡಲು ಪ್ರಯತ್ನಿಸಲಾಗಿದೆ. ನಿಜವಾದ ಇತಿಹಾಸ ಸಂಗಮ್ ಯುಗದಿಂದಲೂ ತಮಿಳರ ಸ್ಥಳೀಯ ಜನಾಂಗದ ಜನರು ಯಾರನ್ನು ಗುರುತಿಸಿದ್ದಾರೆ ಎಂಬೆಲ್ಲ ವಿಷಯದ ಬಗ್ಗೆ ಆ ಸಂಕಿರಣದಲ್ಲಿ ವಿಚಾರ ವಿನಿಮಯ ನಡೆಯಲಿದೆ ಎಂದು ಎನ್ ಟಿಕೆ ಪಕ್ಷ ಪ್ರಕಟಣೆಯಲ್ಲಿ ತಿಳಿಸಿತ್ತು.
#Rise of Tamil Nationalism ಹ್ಯಾಷ್ ಟ್ಯಾಗ್ ಟ್ರೆಂಡ್
ಈ ವಿಚಾರ ಸಂಕಿರಣ ಆರಂಭವಾಗುತ್ತಿದ್ದಂತೆ ನೆಟ್ಟಿಗರು #Rise of Tamil Nationalism ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದಾರೆ . ಅವುಗಳಲ್ಲಿ ಕೆಲವು ಹೀಗಿವೆ
Dravidam is more focused on opposing Brahmins clearing the route for other upper and intermediate castes
They didn’t really care about oppressed ppl(Lower Caste ppl) and they themselves continue oppressing them by keeping the Casteism alive.#RiseOfTamilNationalism pic.twitter.com/lohz9ZLsXS— ராஜா திருத்துறைப்பூண்டி திருவாரூர் மாவட்டம் (@Rajattptvr) September 12, 2021
ಬ್ರಾಹ್ಮಣರು ಇತರ ಮೇಲ್ವರ್ಗ ಮತ್ತು ಮಧ್ಯಂತರ ಜಾತಿಗಳಿಗೆ ಮಾರ್ಗವನ್ನು ತೆರವುಗೊಳಿಸುವುದನ್ನು ವಿರೋಧಿಸುವುದರ ಮೇಲೆ ದ್ರಾವಿಡಂ ಹೆಚ್ಚು ಗಮನಹರಿಸಿದೆ ಅವರು ನಿಜವಾಗಿಯೂ ತುಳಿತಕ್ಕೊಳಗಾದ ಪಿಪಿಎಲ್ (ಕೆಳಜಾತಿ ಪಿಪಿಎಲ್) ಬಗ್ಗೆ ಕಾಳಜಿ ವಹಿಸಲಿಲ್ಲ ಮತ್ತು ಅವರೇ ಜಾತಿವಾದವನ್ನು ಜೀವಂತವಾಗಿಟ್ಟುಕೊಂಡು ಅವರನ್ನು ದಮನಿಸುವುದನ್ನು ಮುಂದುವರಿಸಿದರು ಎಂದು ರಜತ್ ಎಂಬ ಟ್ವೀಟಿಗರು ಟ್ವೀಟ್ ಮಾಡಿದ್ದಾರೆ.
We have our own identity! We are TAMILS! We reject any form of pseudo identity imposed on us in the name of Dravidian or Indian.
— Beef Fry ? (@ntk4tn) September 12, 2021
ನಮಗೆ ನಮ್ಮದೇ ಗುರುತು ಇದೆ. ನಾವು ತಮಿಳರು. ದ್ರಾವಿಡ ಅಥವಾ ಭಾರತೀಯರ ಹೆಸರಿನಲ್ಲಿ ನಮ್ಮ ಮೇಲೆ ಹೇರಲಾದ ಯಾವುದೇ ರೀತಿಯ ಹುಸಿ ಗುರುತನ್ನು ನಾವು ತಿರಸ್ಕರಿಸುತ್ತೇವೆ ಎಂದು @ntk4tn ಎಂಬ ಟ್ವೀಟಿಗರು ಹೇಳಿದ್ದಾರೆ.
For worldwide Tamil people unity. we need two things
1. Tamil Nationalism party alone unites Tamil people without any discrimination and landscape.
2. we should boycott parties like Hindi parties(BJP & Congress) and Dravidian parties(AIADMK & DMK). #RiseOfTamilNationalism pic.twitter.com/KAznKWBrgO
— பெருஞ்சித்திரனார் (@PythonTamil) September 12, 2021
ವಿಶ್ವಾದ್ಯಂತ ತಮಿಳು ಜನರ ಏಕತೆಗಾಗಿ. ನಮಗೆ ಎರಡು ವಸ್ತುಗಳು ಬೇಕು.ತಮಿಳು ರಾಷ್ಟ್ರೀಯತೆ ಪಕ್ಷ ಮಾತ್ರ ಯಾವುದೇ ತಾರತಮ್ಯ ಮತ್ತು ಭೂದೃಶ್ಯವಿಲ್ಲದೆ ತಮಿಳು ಜನರನ್ನು ಒಂದುಗೂಡಿಸುತ್ತದೆ. ನಾವು ಹಿಂದಿ ಪಕ್ಷಗಳು (ಬಿಜೆಪಿ ಮತ್ತು ಕಾಂಗ್ರೆಸ್) ಮತ್ತು ದ್ರಾವಿಡ ಪಕ್ಷಗಳನ್ನು (ಎಐಎಡಿಎಂಕೆ ಮತ್ತು ಡಿಎಂಕೆ) ಬಹಿಷ್ಕರಿಸಬೇಕು ಎಂದು @PythonTamil ಟ್ವೀಟ್ ಮಾಡಿದ್ದಾರೆ.
(Political Seminar on Tamil or Dravid in TamilNadu twitterati trends Rise Of Tamil Nationalism)