ಟೊಮ್ಯಾಟೋ ಬಳಿಕ ಗಗನಕ್ಕೇರಿದ ದಾಳಿಂಬೆ ಬೆಲೆ; 1 ಕೆಜಿಗೆ ಬರೋಬ್ಬರಿ 800 ರೂ!

|

Updated on: Sep 28, 2023 | 5:09 PM

ದಾಳಿಂಬೆಗೆ ಚಿನ್ನದ ಬೆಲೆ ಬಂದಿದೆ. ಹೀಗಾಗಿ, ಕಳ್ಳಕಾಕರಿಂದ ದಾಳಿಂಬೆ ಬೆಳೆಯನ್ನು ಕಾಪಾಡಿಕೊಳ್ಳುವುದೇ ಸವಾಲಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ 15 ದಿನಗಳಲ್ಲಿ ದಾಳಿಂಬೆ ಬೆಲೆ ಗಗನಕ್ಕೇರಿದ್ದು, ಕೆಲವು ತಳಿಯ ದಾಳಿಂಬೆಗೆ ರೈತರಿಗೆ 1 ಕೆಜಿಗೆ 800 ರೂ. ಸಿಗುತ್ತಿದೆ.

ಟೊಮ್ಯಾಟೋ ಬಳಿಕ ಗಗನಕ್ಕೇರಿದ ದಾಳಿಂಬೆ ಬೆಲೆ; 1 ಕೆಜಿಗೆ ಬರೋಬ್ಬರಿ 800 ರೂ!
ದಾಳಿಂಬೆ
Image Credit source: iStock
Follow us on

ಅಹಮದ್‌ನಗರ: ಇತ್ತೀಚೆಗಷ್ಟೇ ಟೊಮ್ಯಾಟೋ ಬೆಲೆ ಗಗನಕ್ಕೇರಿತ್ತು. ಇದೀಗ ಗೋಡಂಬಿ, ಬಾದಾಮಿ ಹಾಗೂ ದಾಳಿಂಬೆ ಬೆಲೆ ಅತ್ಯಂತ ದುಬಾರಿಯಾಗಿದೆ. 1 ಕೆಜಿ ದಾಳಿಂಬೆಗೆ 800 ರೂ. ಆಗಿದೆ. ಸದ್ಯ ಚಿನ್ನದ ಬೆಲೆ 1 ತೊಲಕ್ಕೆ 59 ಸಾವಿರ ರೂ. ಇದ್ದು, ಇಷ್ಟು ಹಣದಲ್ಲಿ ಕೇವಲ 1 ಕ್ವಿಂಟಾಲ್ ಅಂದರೆ 100 ಕೆಜಿ ದಾಳಿಂಬೆ ಸಿಗುತ್ತಿದೆ. ಕಳೆದ 15 ದಿನಗಳಲ್ಲಿ ದಾಳಿಂಬೆ ಬೆಲೆ ಗಗನಕ್ಕೇರಿದ್ದು, ಇದುವರೆಗಿನ ಗರಿಷ್ಠ ದರ ಇದಾಗಿದೆ ಎಂದು ರೈತರು ಮತ್ತು ವ್ಯಾಪಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಾರಾಯಣಗಾಂವ್‌ನ ಯುವ ರೈತ ರಮೇಶ್ ಗಡೇಕರ್ ತಮ್ಮ ಜಮೀನಿನಲ್ಲಿ ವೈವಿಧ್ಯಮಯ ದಾಳಿಂಬೆ ತೋಟವನ್ನು ನಿರ್ಮಿಸಿದ್ದಾರೆ. ರಹತ ಬಜಾರ್ ಸಮಿತಿಗೆ ಬುಧವಾರ ರಮೇಶ ಗಡೇಕರ್ ಅವರು ದಾಳಿಂಬೆಯನ್ನು ಮಾರಾಟಕ್ಕೆ ತಂದಿದ್ದರು. ಆದರೆ ಅವರಿಗೆ ದಾಳಿಂಬೆಗೆ ನಿರೀಕ್ಷೆಗಿಂತ ಹೆಚ್ಚಿನ ಬೆಲೆ ಸಿಕ್ಕಿದೆ. ಕೇಸರಿ ತಳಿಯ ದಾಳಿಂಬೆ ಕೆಜಿಗೆ ಸರಾಸರಿ 800 ರೂ. ಸಿಕ್ಕಿದೆ. ಇತರೆ ಖರ್ಚು ಕಳೆದು 1 ಕೆಜಿಗೆ 800 ರೂ. ಸಿಕ್ಕಿದೆ. ಹಮಾಲಿ, ತೊಲಾಯಿ ಇತರೆ ತಳಿಯ 26 ಕೆ.ಜಿ ದಾಳಿಂಬೆಗೆ 16 ಸಾವಿರ ರೂ. ಸಿಕ್ಕಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ರಹತ ಬಜಾರ್ ಸಮಿತಿಯಲ್ಲಿ ರೈತನ ದಾಳಿಂಬೆಗೆ ಪ್ರಸ್ತುತ ಅತಿ ಹೆಚ್ಚು ಅಂದರೆ ಕೆಜಿಗೆ 800 ರೂ. ಸಿಕ್ಕಿದೆ.

ಇದನ್ನೂ ಓದಿ: ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ದಾಳಿಂಬೆ ಹಣ್ಣಿನಲ್ಲಿದೆ ಪರಿಹಾರ

ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಜಂಬೂಲ್ ಗ್ರಾಮದ ಅಣ್ಣಾ ಪಾಟೀಲ್ ಜಂಬೂಲ್ ಎಂಬುವವರಿಗೆ 15 ದಿನಗಳ ಹಿಂದೆ 1 ಕೆಜಿ ದಾಳಿಂಬೆಗೆ 170 ರೂ. ಸಿಕ್ಕಿತ್ತು. ಆಗ ಬಾಂಗ್ಲಾದೇಶಕ್ಕೆ ಕಳುಹಿಸಲಾದ ದಾಳಿಂಬೆಗೆ ಈ ಬೆಲೆ ಇತ್ತು. ಅಣ್ಣಾ ಪಾಟೀಲ ಅವರ 1,500 ದಾಳಿಂಬೆ ಮರಗಳಲ್ಲಿ ಸುಮಾರು 40ರಿಂದ 50 ಟನ್ ದಾಳಿಂಬೆ ಇಳುವರಿ ಬಂದಿದೆ. ಈ ದಾಳಿಂಬೆಯನ್ನು ಸೆಪ್ಟೆಂಬರ್ 13ರಂದು ಕೆಜಿಗೆ 170 ರೂ.ಗೆ ಮಾರಾಟ ಮಾಡಲಾಗಿದೆ. ಸದ್ಯ ಈ ದಾಳಿಂಬೆ ಬಾಂಗ್ಲಾದೇಶಕ್ಕೆ ರವಾನೆಯಾಗಿರುವ ಸಾಧ್ಯತೆಯನ್ನು ಜಂಬೂಲ್ ಗ್ರಾಮದ ರೈತ ಅಣ್ಣಾ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಂಪು ಸುಂದರಿ ಟೊಮ್ಯಾಟೋ ಖರೀದಿಗಾಗಿ ಉದ್ದುದ್ದ ಕ್ಯೂ ನಿಂತ ಮಹಿಳೆಯರು! ಎಲ್ಲಿ?

3 ಸಾವಿರ ಮರಗಳ ನಿರ್ವಹಣೆಗೆ ವರ್ಷದಲ್ಲಿ ನಾಲ್ಕೂವರೆ ಲಕ್ಷ ರೂ. ಖರ್ಚು ಮಾಡಿ ಉದ್ಯಾನ ನಿರ್ವಿುಸಲಾಗಿದೆ ಎಂದು ಅಣ್ಣಾ ಪಾಟೀಲ ಹೇಳಿದ್ದಾರೆ. ಕಳೆದ 3 ತಿಂಗಳಿಂದ ಮಳೆ ಇಲ್ಲದ ಕಾರಣ ಸೊಲ್ಲಾಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಸೆಪ್ಟೆಂಬರ್ ಆರಂಭದಲ್ಲಿ ರೈತರು ದಾಳಿಂಬೆ ಮರಗಳನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕಾಗಿತ್ತು. ಬಿಸಿಲಿನ ತಾಪದಿಂದ ದಾಳಿಂಬೆ ತೋಟಗಳನ್ನು ಉಳಿಸಲು ರೈತರು ಹರಸಾಹಸ ಪಡಲಾರಂಭಿಸಿದರು. ಸಂಗೋಳ ತಾಲೂಕಿನ ಹಲವು ರೈತರು ದಾಳಿಂಬೆ ತೋಟಗಳಿಗೆ ಬಟ್ಟೆ ಹೊದಿಸಿ ರಕ್ಷಣೆ ಮಾಡಿಕೊಂಡಿದ್ದಾರೆ.

ಮಳೆಯ ಕೊರತೆಯಿಂದಾಗಿ ನೀರಿನ ಕೊರತೆ ಉಂಟಾಗಿದೆ. ಶಾಖದ ಪ್ರಮಾಣ ಹೆಚ್ಚಾಗಿದೆ. ಹೆಚ್ಚುತ್ತಿರುವ ತಾಪಮಾನವು ದಾಳಿಂಬೆ ಹಣ್ಣುಗಳ ಮೇಲೆ ಕಪ್ಪು ಕಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಮರಗಳಿಗೆ ರೋಗಗಳ ಸಾಧ್ಯತೆ ಹೆಚ್ಚಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ