ರಾಹುಲ್ ಗಾಂಧಿ ರಿಯಲ್ ಲೈಫ್ ದೇವದಾಸ್​: ಬಿಹಾರ ಬಿಜೆಪಿ ಕಚೇರಿ ಎದುರು ಹೀಗೊಂದು ಪೋಸ್ಟರ್

ಪಾಟ್ನಾದ ಬೀದಿಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಪೋಸ್ಟರ್​ಗಳು ರಾರಾಜಿಸುತ್ತಿವೆ. ಈ ಪೋಸ್ಟರ್​ಗಳನ್ನು ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಕಿದ್ದಾರೆ.

ರಾಹುಲ್ ಗಾಂಧಿ ರಿಯಲ್ ಲೈಫ್ ದೇವದಾಸ್​: ಬಿಹಾರ ಬಿಜೆಪಿ ಕಚೇರಿ ಎದುರು ಹೀಗೊಂದು ಪೋಸ್ಟರ್
ರಾಹುಲ್ ಗಾಂಧಿ ಪೋಸ್ಟರ್

Updated on: Jun 23, 2023 | 10:29 AM

ಪಾಟ್ನಾದ ಬೀದಿಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಪೋಸ್ಟರ್​ಗಳು ರಾರಾಜಿಸುತ್ತಿವೆ. ಈ ಪೋಸ್ಟರ್​ಗಳನ್ನು ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಕಿದ್ದಾರೆ. ಈ ಪೋಸ್ಟರ್​ಗಳ ಮೂಲಕವೇ ಪರಸ್ಪರ ಟಾರ್ಗೆಟ್ ಮಾಡುತ್ತಿದ್ದಾರೆ.
ಬಿಹಾರದ ಬಿಜೆಪಿ ಕಚೇರಿಯ ಹೊರಗೆ ಹಾಕಲಾದ ಪೋಸ್ಟರ್​ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ(Rahul Gandhi)ಯನ್ನು ದೇವದಾಸ್​ನಂತೆ ತೋರಿಸಲಾಗಿದೆ.

ಪೋಸ್ಟರ್​ನ ಮೇಲ್ಭಾಗದಲ್ಲಿ ಶಾರೂಖ್ ಖಾನ್ ಚಿತ್ರ ಇರಿಸಲಾಗಿದ್ದು, ಕೆಳಭಾಗದಲ್ಲಿ ರಾಹುಲ್ ಗಾಂಧಿ ಚಿತ್ರ ಇದೆ. ರೀಲ್ ಲೈಫ್ ದೇವದಾಸ್ ಶಾರೂಖ್ ಖಾನ್ , ರಿಯಲ್ ಲೈಫ್ ದೇವದಾಸ್ ರಾಹುಲ್ ಗಾಂಧಿ ಎಂದು ಬರೆಯಲಾಗಿದೆ.

ಮಮತಾ ಬ್ಯಾನರ್ಜಿ ಬಂಗಾಳವನ್ನು ತೊರೆಯಿರಿ ಎಂದು ಹೇಳಿದರು, ಕೇಜ್ರಿವಾಲ್ ದೆಹಲಿ ಹಾಗೂ ಪಂಜಾಬ್ ಬಿಡಿ ಎಂದು ಹೇಳಿದರು, ಲಾಲು, ನಿತೀಶ್​ ಬಿಹಾರವನ್ನು ಬಿಡಿ ಎಂದು ಹೇಳಿದರು, ಅಖಿಲೇಶ್ ಉತ್ತರ ಪ್ರದೇಶವನ್ನು ಬಿಡಿ ಎಂದರು, ಸ್ಟಾಲಿನ್ ತಮಿಳುನಾಡು ಬಿಡಿ ಎಂದರು ಎಲ್ಲರೂ ಒಟ್ಟಾಗಿ ಕಾಂಗ್ರೆಸ್​ ಹಾಗೂ ರಾಜಕೀಯ ಎರಡನ್ನೂ ಬಿಡಿ ಎಂದು ಹೇಳುವ ಸಮಯ ಸನ್ನಿಹಿತವಾಗಿದೆ ಎಂದು ಬರೆಯಲಾಗಿದೆ.

ಮತ್ತಷ್ಟು ಓದಿ: Rahul Gandhi: ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ

ಆರ್​ಜೆಡಿ ಬಿಜೆಪಿ ಪೋಸ್ಟರ್ ವಿರುದ್ಧ ವಾಗ್ದಾಳಿ ನಡೆಸಿದೆ, ಆರ್​ಜೆಡಿ ಕಚೇರಿಯ ಹೊರಗೆ ವಿಷ್ಣುವಿನ ಪೋಸ್ಟರ್ ಹಾಕಲಾಗಿದೆ. ವಿಷ್ಣುವಿನ ಚಿತ್ರದ ಸುತ್ತ 18 ನಾಯಕರ ಚಿತ್ರವನ್ನು ಇರಿಸಲಾಗಿದೆ.

ಆ ಪೋಸ್ಟರ್​ನಲ್ಲಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜುನ ಖರ್ಗೆ, ದೀಪಾಂಕರ್ ಭಟ್ಟಾಚಾರ್ಯ, ಸೀತಾರಾಮ್ ಯೆಚೂರಿ, ಶರದ್ ಪವಾರ್ ಅವರ ಜೊತೆ ವಿಷ್ಣು ಅವರ ಚಿತ್ರ ಹಾಕಲಾಗಿದ್ದು, ಇನ್ನೊಂದು ಕಡೆ ವಿಷ್ಣು ಅವರ ಪಕ್ಕದಲ್ಲಿ ರಾಹುಲ್ ಗಾಂಧಿ, ನಂತರ ತೇಜಸ್ವಿ ಯಾದವ್, ಅಖಿಲೇಶ್ ಅವರ ಚಿತ್ರ ಹಾಕಲಾಗಿದೆ. ಯಾದವ್, ಮಮತಾ ಬ್ಯಾನರ್ಜಿ, ಸ್ಟಾಲಿನ್, ಹೇಮಂತ್ ಸೊರೆನ್, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಹಾಕಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ