Meghalaya: ಕೇವಲ 6 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಫುಟ್ಬಾಲ್ ಸ್ಟೇಡಿಯಂ ಕುಸಿತ
ಮೇಘಾಲಯದಲ್ಲಿ ಕೇವಲ 6 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಫುಟ್ಬಾಲ್ ಸ್ಟೇಡಿಯಂ(Foot Ball Stadium)ನ ಒಂದು ಭಾಗ ಕುಸಿದಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಪಿಎ ಸಂಗ್ಮಾ ಫುಟ್ಬಾಲ್ ಸ್ಟೇಡಿಯಂನ್ನು ಉದ್ಘಾಟಿಸಲಾಗಿತ್ತು
ಮೇಘಾಲಯದಲ್ಲಿ ಕೇವಲ 6 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಫುಟ್ಬಾಲ್ ಸ್ಟೇಡಿಯಂ(Foot Ball Stadium)ನ ಒಂದು ಭಾಗ ಕುಸಿದಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಪಿಎ ಸಂಗ್ಮಾ ಫುಟ್ಬಾಲ್ ಸ್ಟೇಡಿಯಂನ್ನು ಉದ್ಘಾಟಿಸಲಾಗಿತ್ತು. ಅದನ್ನು ಮುಖ್ಯಮಂತ್ರಿ ಕೊನ್ರಾಡ್ ಕೆ ಸಂಗ್ಮಾ ಉದ್ಘಾಟಿಸಿದ್ದರು.
ಈ ಸ್ಟೇಡಿಯಂನ್ನು ಸರ್ಕಾರವು 127 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿತ್ತು. ಗುರುವಾರ ಸ್ಟೇಡಿಯಂ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮತ್ತಷ್ಟು ಓದಿ: News9 Plus Corporate Cup 2023: ಫುಟ್ಬಾಲ್ ಲೆಜೆಂಡ್ನ ಭೇಟಿಯಾದ ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್ ವಿಜೇತರು
ತುರಾ ಹಾಗೂ ವೆಸ್ಟ್ ಗಾರೋ ಹಿಲ್ಸ್ ಪ್ರದೇಶದಲ್ಲಿ ಮಳೆಯಿಂದಾಗಿ ಭಾರಿ ಅನಾಹುತ ಸಂಭವಿಸಿದೆ. ತಡೆಗೋಡೆಯ ಕುಸಿತಕ್ಕೆ ಕಾರಣವನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಆರಂಭಿಸಿದ್ದೇವೆ ಎಂದು ಡೆಪ್ಯೂಟಿ ಕಮಿಷನರ್ ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಮೇಘಾಲಯ ವಿಧಾನಸಭೆ ಕಟ್ಟಡದ ಒಂದು ಭಾಗ ಕಳೆದ ವರ್ಷ ಮೇ ತಿಂಗಳಲ್ಲಿ ಕುಸಿದಿತ್ತು. 177.7 ಕೋಟಿ ರೂ ವೆಚ್ಚದ ಕಟ್ಟಡದ 70 ಟನ್ ತೂಕದ ಗುಮ್ಮಟ ಕುಸಿದಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ