ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್(Mann Ki Baat)ನ 100ನೇ ಸಂಚಿಕೆ ಏಪ್ರಿಲ್ 30 ರಂದು ಪ್ರಸಾರವಾಗಲಿದೆ. ಪ್ರಧಾನಿ ಮೋದಿಯವರು 3 ಅಕ್ಟೋಬರ್ 2014 ರಂದು ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಾರ್ವಜನಿಕರೊಂದಿಗೆ ಪ್ರಧಾನಿಯವರ ನೇರ ಸಂವಾದದ ಈ ವಿಶೇಷ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಪ್ರಸಾರ ಭಾರತಿ ಇಂದು ಮನ್ ಕಿ ಬಾತ್ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ.
ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿರ್ದಿಷ್ಟವಾಗಿ ಚರ್ಚಿಸಿದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಈ ವಿಶೇಷ ಸಂದರ್ಭದಲ್ಲಿ 100 ರೂ. ವಿಶೇಷ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮವೂ ಕೂಡ ಇದೆ.
ಸಮಾವೇಶದಲ್ಲಿ ಜಗದೀಪ್ ಧನ್ಕರ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ.
ಈ ಸೆಲೆಬ್ರಿಟಿಗಳಲ್ಲಿ ಆಮೀರ್ ಖಾನ್, ನಟಿ ರವೀನಾ ಟಂಡನ್, ಕ್ರೀಡಾಪಟು ನಿಖತ್ ಜರೀನ್ ಮತ್ತು ದೀಪಾ ಮಲಿಕ್ ಕೂಡ ಇರಲಿದ್ದಾರೆ.
ಮತ್ತಷ್ಟು ಓದಿ: PM Narendra Modi: ಪ್ರಧಾನಿ ಮೋದಿ ಮನ್ ಕಿ ಬಾತ್ ಸಮಾಜದ ಮೇಲೆ ಬೀರಿದ ಪ್ರಭಾವ ಕುರಿತ ಪುಸ್ತಕ ಹೊರಬರಲಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮವನ್ನು ಅಕ್ಟೋಬರ್ 3 2014ರಂದು ವಿಜಯದಶಮಿಯ ಸಂದರ್ಭದಲ್ಲಿ ಪ್ರಾರಂಭಿಸಿದರು.
ಈ ಕಾರ್ಯಕ್ರಮವು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ಇದುವರೆಗೆ 99 ಸಂಚಿಕೆಗಳನ್ನು ಪೂರೈಸಿದೆ, ಇದರ 100ನೇ ಸಂಚಿಕೆಯು ಏಪ್ರಿಲ್ 30ರ ಭಾನುವಾರದಂದು ಪ್ರಸಾರವಾಗಲಿದೆ, ಈ ನಿಟ್ಟಿನಲ್ಲಿ ಇಂದು ಪ್ರಸಾರ ಭಾರತಿಯು ರಾಷ್ಟ್ರೀಯ ಸಮಾವೇಶ ಹಮ್ಮಿಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Wed, 26 April 23