ದೆಹಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾಗುತ್ತದೆ ಎಂಬುದೊಂದು ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಆದರೆ ಅದಿನ್ನೂ ಅಧಿಕೃತವಾಗಿಲ್ಲ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾಂಗ್ರೆಸ್ನ ಹಿರಿಯ ನಾಯಕರ ಜತೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಸೇರುವ ಬಗ್ಗೆ ಸೋನಿಯಾ ಗಾಂಧಿಯವರದ್ದೇ ಅಂತಿಮ ನಿರ್ಧಾರವೆಂದೂ ಹೇಳಲಾಗಿದೆ.
ಪ್ರಶಾಂತ್ ಕಿಶೋರ್ ಸಾಮಾನ್ಯ ವ್ಯಕ್ತಿಯೇನಲ್ಲ. ಹೈಪ್ರೊಫೈಲ್ ಇರುವ ಚುನಾವಣಾ ತಂತ್ರಗಾರ. ಹಾಗಂದ ಮೇಲೆ ಅವರು ಒಂದು ಸಣ್ಣ ಹುದ್ದೆಗೆಲ್ಲ ಬರುವುದಿಲ್ಲ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಶುರುವಾಗಿದೆ. ಈ ಮಧ್ಯೆ, ಪ್ರಶಾಂತ್ ಕಿಶೋರ್ ತಮ್ಮ ಆಗಮನಕ್ಕೆ ಪೂರ್ವವೇ ಕಾಂಗ್ರೆಸ್ನಲ್ಲೊಂದು ಹುದ್ದೆ ಸೃಷ್ಟಿಸಲು ಮನವಿ ಮಾಡಿದ್ದಾರೆ ಎಂದೂ ಮೂಲಗಳಿಂದ ತಿಳಿದುಬಂದಿದೆ. ಅಂದರೆ ಚುನಾವಣೆಗೆ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲು, ಕಾರ್ಯತಂತ್ರ ಹೆಣೆಯಲು ಎಐಸಿಸಿಯ ವಿಶೇಷ ಸಮಿತಿಯಿಂದ ಒಂದು ಸಶಕ್ತ ಗುಂಪನ್ನು ರಚಿಸುವಂತೆ ಕಾಂಗ್ರೆಸ್ ಎದುರು ಬೇಡಿಕೆ ಇಟ್ಟಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಾಗೇ ಪ್ರಶಾಂತ್ ಕಿಶೋರ್ ಕೂಡ ಈ ಸಮಿತಿಯ ಸದಸ್ಯನಾಗಿಯೋ..ಮುಖ್ಯಸ್ಥನಾಗಿಯೂ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂಬ ಬಹುದೊಡ್ಡ ಗುರಿ ಹೊಂದಿದೆ. ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ಗೆ ಕೂಡ ಪಕ್ಷದಿಂದ ಟಿಕೆಟ್ ಸಿಗಬಹುದು. ಆದರೆ ಈಗಿನಿಂದಲೇ ಒಂದು ಹುದ್ದೆ ಸೃಷ್ಟಿಸಿಕೊಡಬೇಕಿದೆ. ಇನ್ನು ಬರುವ ವರ್ಷ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್ , ಉತ್ತರಾಖಂಡ್, ಗೋವಾ ಮತ್ತು ಮಣಿಪುರ ವಿಧಾನ ಸಭಾ ಚುನಾವಣೆಯ ಹೊಣೆ ಕೂಡ ಪ್ರಶಾಂತ್ ಕಿಶೋರ್ ಹೆಗಲಿಗೆ ಏರುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಕುರುಡುಮಲೆ ಸಾಲಿಗ್ರಾಮ ಗಣೇಶನ ದೇವಸ್ಥಾನಕ್ಕೆ ಪೌರಾಣಿಕ ಐತಿಹ್ಯವಿದೆ; ರಾಮ, ಕೃಷ್ಣ ಸಹ ಇಲ್ಲಿ ಪೂಜೆ ಸಲ್ಲಿಸಿದ್ದಾರೆ!
iPhone13: ಐಫೋನ್ 13 ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಬಾರಿ ಕಡಿಮೆ ಬೆಲೆಗೆ ಲಭ್ಯ