ಈ ಬಾರಿ ಆ್ಯಪಲ್ ಕಂಪೆನಿ ನಾಲ್ಕು ಮಾಡೆಲ್ಗಳನ್ನು ಪರಿಚಯಿಸಲಿದ್ದು, ಅದರಂತೆ iPhone 13, iPhone 13 Pro, iPhone 13 Mini ಮತ್ತು iPhone 13 Pro Max ಸ್ಮಾರ್ಟ್ಫೋನ್ಗಳು ಖರೀದಿಗೆ ಲಭ್ಯವಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್-13 ಫೋಟೋಗಳು ಹರಿದಾಡುತ್ತಿದ್ದು, ಹೊಸ ಸ್ಮಾರ್ಟ್ಫೋನ್ ಬಗ್ಗೆ ಮೊಬೈಲ್ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.