ಈ ಪ್ರದರ್ಶನದ ನಂತರ, ಗಿಲ್ ಅವರ ಕ್ರಿಕೆಟ್ ವೃತ್ತಿಜೀವನವು ಹೊಸ ದಿಕ್ಕನ್ನು ಪಡೆದುಕೊಂಡಿತು. ಐಪಿಎಲ್ನಲ್ಲಿ ಹಲವು ತಂಡಗಳು ಶುಭ್ಮನ್ ಅವರನ್ನು ತೆಗೆದುಕೊಳ್ಳಲು ಉತ್ಸುಕವಾಗಿದ್ದವು. ಅಂತಿಮವಾಗಿ, ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಈ ಅವಕಾಶವನ್ನು ಬಳಸಿಕೊಂಡು ಶುಭ್ಮನ್ ಅವರನ್ನು ಕೊಂಡುಕೊಂಡರು. ಶುಭ್ಮನ್ ಐಪಿಎಲ್ ಗೆದ್ದ ನಂತರ ಹ್ಯಾಮಿಲ್ಟನ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜನವರಿ 31, 2019 ರಂದು ಭಾರತೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.