Facebook: ಹೊಸ ಸ್ಮಾರ್ಟ್​ ಗ್ಲಾಸ್ ಪರಿಚಯಿಸಲಿರುವ ಫೇಸ್​ಬುಕ್: ಏನಿದರ ವಿಶೇಷತೆ?

Facebook: ಫೇಸ್‌ಬುಕ್ ಪರಿಚಯಿಸಲಿರುವ ಈ ಸ್ಮಾರ್ಟ್ ಗ್ಲಾಸ್‌ಗಳು ಸ್ನ್ಯಾಪ್ ಸ್ಪೆಕ್ಟ್ರಮ್ ಮತ್ತು ಅಮೆಜಾನ್ ಇಕೋ ಸ್ಮಾರ್ಟ್​ ಗ್ಲಾಸ್​ನಂತೆ ಕಾರ್ಯ ನಿರ್ವಹಿಸಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Sep 08, 2021 | 10:43 PM

ಫೇಸ್​ಬುಕ್ ಕಂಪೆನಿಯು ತನ್ನ ಬಳಕೆದಾರರ ಅನುಭವವನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ಆಕರ್ಷಕವಾಗಿಸಲು ಹಲವು ಹೊಸ ಫೀಚರ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಕಂಪನಿಯು ಐಷಾರಾಮಿ ಕನ್ನಡಕ ಕಂಪನಿ ರೇ-ಬನ್ ಸಹಭಾಗಿತ್ವದಲ್ಲಿ ತನ್ನದೇ ಆದ ಸ್ಮಾರ್ಟ್ ಗ್ಲಾಸ್ ಬಿಡುಗಡೆ ಮಾಡಲು ಮುಂದಾಗಿದೆ.

1 / 5
ಹೈಟೆಕ್ ಗ್ಯಾಜೆಟ್​ನಲ್ಲಿ ಹೊಸ ಪರೀಕ್ಷೆ ನಡೆಸಲು ಮುಂದಾಗಿರುವ ಫೇಸ್​ಬುಕ್ ಇದೇ ಮೊದಲ ಬಾರಿಗೆ ಸ್ಮಾರ್ಟ್​ ಗ್ಲಾಸ್ ಪರಿಚಯಿಸಲು ಮುಂದಾಗಿದೆ. ಅದರಂತೆ ಇದಕ್ಕಾಗಿ ಪ್ರಸಿದ್ಧ ಗ್ಲಾಸ್ ಕಂಪೆನಿ ರೇ-ಬನ್ ಜೊತೆ ಕೈ ಜೋಡಿಸಿದೆ. ಈ ಸ್ಮಾರ್ಟ್​ ಗ್ಲಾಸ್​ನಲ್ಲಿ ಕ್ಲಾಸಿಕ್ ರೇ-ಬ್ಯಾನ್ ಫ್ರೇಮ್ ಅನ್ನು ಒಳಗೊಂಡಿರುತ್ತವೆ. ಜೊತೆಗೆ ಅತ್ಯದ್ಭುತ ಗ್ರಾಫಿಕ್ಸ್‌ನೊಂದಿಗೆ ಸಂಯೋಜಿತ AR ವೈಶಿಷ್ಟ್ಯಗಳನ್ನು ಹೊಂದಿರಲಿದೆ.

2 / 5
 ಫೇಸ್​ಬುಕ್ ಸ್ಮಾರ್ಟ್​ ಗ್ಲಾಸ್​ನ ವಿಶೇಷತೆಗಳೇನು: ಕ್ಲಾಸಿಕ್ ರೇ-ಬ್ಯಾನ್ ಲುಕ್​ನಲ್ಲಿರುವ ಸ್ಮಾರ್ಟ್​ ಗ್ಲಾಸ್ ಬಗ್ಗೆ ಬಗ್ಗೆ ಫೇಸ್​ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಇದಾಗ್ಯೂ ಈ  ಸ್ಮಾರ್ಟ್ ಗ್ಲಾಸ್‌ಗಳಲ್ಲಿ ವಾಯ್ಸ್ ಅಸಿಸ್ಟೆಂಟ್ ಜೊತೆಗೆ ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಸಮಗ್ರ ಡಿಸ್‌ಪ್ಲೇ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಈ ಗ್ಲಾಸ್​ ಅನ್ನು ಕನೆಕ್ಟ್ ಮಾಡಿಕೊಳ್ಳಬಹುದು.

3 / 5
ಹಾಗೆಯೇ ಫೇಸ್‌ಬುಕ್ ಪರಿಚಯಿಸಲಿರುವ ಈ ಸ್ಮಾರ್ಟ್ ಗ್ಲಾಸ್‌ಗಳು ಸ್ನ್ಯಾಪ್ ಸ್ಪೆಕ್ಟ್ರಮ್ ಮತ್ತು ಅಮೆಜಾನ್ ಇಕೋ ಸ್ಮಾರ್ಟ್​ ಗ್ಲಾಸ್​ನಂತೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ.

4 / 5
ಪ್ರಸ್ತುತ ಮಾಹಿತಿ ಪ್ರಕಾರ ಸೆಪ್ಟೆಂಬರ್ 9 ರಂದು ಹೊಸ ಸ್ಮಾರ್ಟ್​ ಗ್ಲಾಸ್ ಬಿಡುಗಡೆಯಾಗಲಿದ್ದು, ಆ ಬಳಿಕವಷ್ಟೇ  ಫೇಸ್​ಬುಕ್​ ಸ್ಮಾರ್ಟ್​ ಗ್ಲಾಸ್​ನ ತಾಂತ್ರಿಕ ವಿಶೇಷತೆ ಬಹಿರಂಗವಾಗಲಿದೆ. ಇನ್ನು ಸ್ಮಾರ್ಟ್ ಗ್ಲಾಸ್‌ಗಳ ಹೊರತಾಗಿ, ಫೇಸ್‌ಬುಕ್ ಸ್ಮಾರ್ಟ್‌ವಾಚ್‌ ಅನ್ನು ಸಹ ಪರಿಚಯಿಸಲಿದೆ ಎಂದು ವರದಿಯಾಗಿದೆ.

5 / 5
Follow us