ಜನವರಿ 9 ರಂದು ‘ಪ್ರವಾಸಿ ಭಾರತೀಯ ದಿವಸ್ (Pravasi Bharatiya Divas)‘ ಎಂದು ಆಚರಣೆ ಮಾಡಲಾಗುತ್ತದೆ. ವಿದೇಶದಲ್ಲಿರುವ ಭಾರತೀಯರ ಸಾಧನೆಗಳನ್ನು ಜಗತ್ತಿ ಮುಂದಿಡಲು ಪ್ರತಿ ವರ್ಷ ಜನವರಿ 9 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಿನ್ನೆ (ಜನವರಿ 8) ಈ ವಿಶೇಷ ದಿನಾಚರಣೆ ಆರಂಭವಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ದಿನದ ಅಂಗವಾಗಿ ಭಾನುವಾರ ನಡೆದ ಯುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಎಸ್.ಜೈಶಂಕರ್ ಮತ್ತು ಅನುರಾಗ್ ಠಾಕೂರ್ ಜೊತೆಗೆ ಆಸ್ಟ್ರೇಲಿಯದ ಸಂಸದೆ ಜನೆತಾ ಮಸ್ಕರೇನ್ಹಸ್ ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜನವರಿ 8ರಂದು ಆರಂಭವಾದ ಈ ಆಚರಣೆ ಜನವರಿ 10ರವರೆಗೆ ನಡೆಯಲಿದೆ. ಈ ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಿಸುವುದರ ಹಿಂದೆ ದೊಡ್ಡ ಇತಿಹಾಸವಿದೆ. 2003 ರಿಂದ ದೇಶದಲ್ಲಿ ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಿಸಲಾಗುತ್ತದೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ 17ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುರಿನಾಮ್‌ನ ಅಧ್ಯಕ್ಷ ಚಂದ್ರಿಕಾಪರ್ಸಾದ್ ಸಂತೋಖಿ ಮತ್ತು ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು.
Prime Minister Narendra Modi, President of Suriname Chandrikapersad Santokhi and President of Guyana Irfaan Ali launch commemorative stamp at the 17th Pravasi Bharatiya Divas Convention in Indore, Madhya Pradesh. pic.twitter.com/QVNGAwDjxf
— ANI (@ANI) January 9, 2023
ಜನವರಿ 9 (1915) ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ದಿನ. ಅದಕ್ಕಾಗಿಯೇ ಈ ದಿನವನ್ನು ಪ್ರವಾಸಿ ಭಾರತೀಯ ದಿವಸ್ ಎಂದು ಆಚರಣೆ ಮಾಡಲಾಗುತ್ತದೆ. ಎಲ್‌ಎಂ ಸಿಂಘ್ವಿ ನೇತೃತ್ವದ ಭಾರತೀಯ ಡಯಾಸ್ಪೊರಾ ಉನ್ನತ ಮಟ್ಟದ ಸಮಿತಿ ನೀಡಿದ ಶಿಫಾರಸುಗಳ ಮೇರೆಗೆ ಪ್ರವಾಸಿ ಭಾರತೀಯ ದಿನವನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆಗಿನ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಘೋಷಣೆಯ ನಂತರ ಪ್ರವಾಸಿ ಭಾರತೀಯ ದಿವಸ್ ಆಚರಿಸಲು ನಿರ್ಧರಿಸಲಾಯಿತು.
ಇದನ್ನು ಓದಿ:Narendra Modi Stadium: ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ
ವಿದೇಶದಲ್ಲಿ ನೆಲೆಸಿರುವ ಭಾರತೀಯರ ಸಾಧನೆಗಳನ್ನು ಜಗತ್ತಿನ ಮುಂದೆ ವ್ಯಕ್ತಪಡಿಸುವ ಉದ್ದೇಶದಿಂದ ಪ್ರವಾಸಿ ಭಾರತೀಯ ದಿವಸ್ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆಯು ವಿದೇಶದಲ್ಲಿರುವ ಭಾರತೀಯರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಜಗತ್ತು ಗುರುತಿಸುವಂತೆ ಮಾಡುತ್ತದೆ. ಪ್ರವಾಸಿ ಭಾರತೀಯ ದಿವಸ್ ಹೆಸರಿನಲ್ಲಿ, ವಲಸಿಗರಿಗೆ ಸ್ಥಳೀಯರನ್ನು ಭೇಟಿ ಮಾಡಲು ಅವಕಾಶ ಸಿಗುತ್ತದೆ. ಇದೇ ಸಂದರ್ಭದಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ದೇಶದೊಂದಿಗೆ ಸಂಪರ್ಕಿಸುವಲ್ಲಿ ಪ್ರಧಾನಿ ಮೋದಿಯವರೂ ಬಹುಮುಖ್ಯ ಪಾತ್ರ ವಹಿಸಿದ್ದಾರೆ.
ಯಾವುದೇ ದೇಶಕ್ಕೆ ವಿದೇಶ ಪ್ರವಾಸ ಹೋದರೂ ಭಾರತೀಯ ಡಯಾಸ್ಪೊರಾಗೆ ವಿಭಿನ್ನವಾದ ಗುರುತನ್ನು ನೀಡುತ್ತಾರೆ. ಪ್ರಧಾನಿ ಮೋದಿಯವರು ಡಯಾಸ್ಪೊರಾದೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಹೊಂದಿದ್ದಾರೆ. ಮೋದಿ ಅವರು ಆರ್‌ಎಸ್‌ಎಸ್ ಯುವ ಕಾರ್ಯಕರ್ತನಾಗಿದ್ದ ದಿನಗಳಲ್ಲಿ ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಮತ್ತು ಪ್ರಪಂಚದಾದ್ಯಂತದ ಭಾರತೀಯರೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ. ಹೀಗೆ ಮಾಡುವುದರಿಂದ ಸಾಗರೋತ್ತರ ಭಾರತೀಯರು ಭಾರತದತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪ್ರಧಾನಿ ಮೋದಿ ಭಾಷಣದಲ್ಲಿ ಎನ್‌ಆರ್‌ಐ ನೆರೆದಿದ್ದ ರೀತಿ.. ಪ್ರಧಾನಿ ಮೋದಿ ನಾಯಕತ್ವದಲ್ಲಿ ಅನಿವಾಸಿ ಭಾರತೀಯರಿಗೆ ಸಂಪೂರ್ಣ ನಂಬಿಕೆ ಎಂದು ಹೇಳಿದ್ದಾರೆ.
PM Modi’s relationship with the diaspora is decades old. As a young karyakarta, he traveled all over the world, establishing personal relationships with Indians across the world.
On #PravasiBharatiyaDivas, we explore PM @narendramodi‘s bond with the Indian diaspora pic.twitter.com/SNtRLWiVsT
— Modi Archive (@modiarchive) January 9, 2023
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತೀಯರು ವಿಶ್ವದಲ್ಲೇ ಅತಿ ಹೆಚ್ಚು ಬಹುಸಂಖ್ಯಾತರು ಆಗಿದ್ದಾರೆ. 2019 ರಲ್ಲಿ, ಅವರ ಸಂಖ್ಯೆ ವಿಶ್ವಾದ್ಯಂತ 1.8 ಕೋಟಿ. ವಲಸಿಗರ ಸಂಖ್ಯೆಯಲ್ಲಿ ಮೆಕ್ಸಿಕೋ ಎರಡನೇ ಸ್ಥಾನದಲ್ಲಿದೆ ಮತ್ತು ಚೀನಾ ಮೂರನೇ ಸ್ಥಾನದಲ್ಲಿದೆ. ಇಂಟರ್ನ್ಯಾಷನಲ್ ಮೈಗ್ರೆಂಟ್ ಸ್ಟಾಕ್ 2019 ರ ವರದಿಯ ಪ್ರಕಾರ, ವಿಶ್ವಾದ್ಯಂತ ವಲಸಿಗರ ಸಂಖ್ಯೆ 272 ಮಿಲಿಯನ್ (27 ಕೋಟಿ 20 ಲಕ್ಷ). ಇದರಲ್ಲಿ ಮೂರನೇ ಒಂದು ಭಾಗವು ವಿಶ್ವದ ಕೇವಲ 10 ದೇಶಗಳಿಂದ ಬಂದಿದೆ. ಈ 10 ದೇಶಗಳಲ್ಲೂ ಭಾರತ ಮುಂಚೂಣಿಯಲ್ಲಿದೆ. 1.18 ಕೋಟಿ ಜನರೊಂದಿಗೆ ಮೆಕ್ಸಿಕೋ ಎರಡನೇ ಸ್ಥಾನದಲ್ಲಿದ್ದು, 1.07 ಕೋಟಿ ಜನರೊಂದಿಗೆ ಚೀನಾ ಮೂರನೇ ಸ್ಥಾನದಲ್ಲಿದೆ.
2003 ರಿಂದ ಆಚರಿಸಲಾಗುವ ಪ್ರವಾಸಿ ಭಾರತೀಯ ದಿವಸ್‌ನಿಂದಾಗಿ, ವಲಸಿಗರೊಂದಿಗೆ ಭಾರತೀಯ ಸಂಬಂಧಗಳು ಗಟ್ಟಿಯಾಗುತ್ತಿವೆ. ಅಲ್ಲದೆ ಅನಿವಾಸಿಗಳಿಂದಾಗಿ ಭಾರತದಲ್ಲಿ ವಿದೇಶಿ ಹೂಡಿಕೆ ಹೆಚ್ಚುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ವರದಿಯೊಂದರ ಪ್ರಕಾರ, 2022 ರ ವೇಳೆಗೆ ಭಾರತದಲ್ಲಿ ಎಫ್‌ಡಿಐ 100 ಶತಕೋಟಿ ರೂ. ದಾಟುವ ನಿರೀಕ್ಷೆಯಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Mon, 9 January 23