Riots in Brazil: ಬ್ರೆಜಿಲ್ ಗಲಭೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವವನ್ನು ಎಲ್ಲರೂ ಗೌರವಿಸಿ
ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಬೆಂಬಲಿಗರು ಭಾನುವಾರ ಸರ್ಕಾರದ ಉನ್ನತ ಸಂಸ್ಥೆಗಳನ್ನು ಆಕ್ರಮಿಸಿ ಧ್ವಂಸಗೊಳಿಸಿದ್ದಾರೆ. ಇದೀಗ ಈ ಬಗ್ಗೆ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವದ ಬೇರೆ ಬೇರೆ ನಾಯಕರು ಈ ಬಗ್ಗೆ ಖಂಡಿಸಿದ್ದಾರೆ.
ಬ್ರೆಜಿಲ್‌ನ ( Brazil) ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ (prez Bolsonaro’s) ಬೆಂಬಲಿಗರು ಭಾನುವಾರ ಸರ್ಕಾರದ ಉನ್ನತ ಸಂಸ್ಥೆಗಳನ್ನು ಆಕ್ರಮಿಸಿ ಧ್ವಂಸಗೊಳಿಸಿದ್ದಾರೆ. ಇದೀಗ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (narendra modi) ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವದ ಬೇರೆ ಬೇರೆ ನಾಯಕರು ಈ ಬಗ್ಗೆ ಖಂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಟ್ವಿಟರ್ ಮೂಲಕ ಅವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ನೇತೃತ್ವದ ಬ್ರೆಜಿಲ್ ಸರ್ಕಾರಕ್ಕೆ ಶುಭಾ ಹಾರೈಸಿದರು. ಬ್ರೆಸಿಲಿಯಾದಲ್ಲಿ ಸರ್ಕಾರಿ ಸಂಸ್ಥೆಗಳ ವಿರುದ್ಧ ಗಲಭೆ ಮತ್ತು ವಿಧ್ವಂಸಕ ಕೃತ್ಯದ ಬಗ್ಗೆ ತೀವ್ರ ಕಳವಳವಿದೆ. ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು. ನಾವು ಬ್ರೆಜಿಲ್ಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಯುಎಸ್ ಕ್ಯಾಪಿಟಲ್ ಆಕ್ರಮಣದ ಕೂಗಿನ ನಂತರ ಬಲಪಂಥೀಯ ನಾಯಕ ಬೋಲ್ಸನಾರೊ ಅವರ ಬೆಂಬಲಿಗರು ಭಾನುವಾರ ರಾತ್ರಿ ಬ್ರೆಜಿಲ್‌ನ ಅಧ್ಯಕ್ಷೀಯ ಅರಮನೆಗೆ ನುಗ್ಗಿ ವಿರೂಪಗೊಳಿಸಿದರು, ಕಾಂಗ್ರೆಸ್‌ನ ಕೆಲವು ಭಾಗಗಳನ್ನು ಸ್ಪ್ರಿಂಕ್ಲರ್ ವ್ಯವಸ್ಥೆಯಿಂದ ತುಂಬಿಸಿದರು ಮತ್ತು ರಾಜಧಾನಿ ಬ್ರೆಸಿಲಿಯಾದಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ಸಮಾರಂಭದ ಕೊಠಡಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದ ಅನೇಕ ಸಾವು ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಈ ಕೃತ್ಯದ ನಂತರ ಪೊಲೀಸರು ಸರ್ಕಾರಿ ಕಟ್ಟಡಗಳಿಂದ ಬೃಹತ್ ಜನಸಂದಣಿಯನ್ನು ತೆರವುಗೊಳಿಸಿದ್ದಾರೆ ಮತ್ತು 400 ಮಂದಿಯನ್ನು ಬಂಧಿಸಿದ್ದಾರೆ.
ಅಕ್ಟೋಬರ್ 30 ರಂದು ನಡೆದ ಚುನಾವಣೆಯಲ್ಲಿ ಬೋಲ್ಸನಾರೊ ಅವರನ್ನು ಸೋಲಿಸಿದ ಅಧ್ಯಕ್ಷ ಲುಲಾ ಡ ಸಿಲ್ವಾ ಅವರು ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಈ ಘಟನೆ ಸಂಭವಿಸಿವೆ. ಬೋಲ್ಸನಾರೊ ಚುನಾವಣಾ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು ಮತ್ತು ಅಧಿಕಾರದ ಪರಿವರ್ತನೆಗೆ ಸಹಕರಿಸುವುದಾಗಿ ಹೇಳಿದ್ದರೂ ಕೂಡ ಈ ಬಗ್ಗೆ ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ.
ಬ್ರೆಸಿಲಿಯಾ ಗಲಭೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದು ಅಧ್ಯಕ್ಷ ಲುಲಾ ಡ ಸಿಲ್ವಾ ಹೇಳಿದ್ದಾರೆ. ಪ್ರತಿಭಟನಾಕಾರರನ್ನು “ಮತಾಂಧ ಫ್ಯಾಸಿಸ್ಟ್‌ಗಳು” ಎಂದು ಕರೆದಿದ್ದಾರೆ. ನಾವು ಮತಾಂಧ ನಾಜಿಗಳು, ಮತಾಂಧ ಸ್ಟಾಲಿನಿಸ್ಟ್‌ಗಳು … ಮತಾಂಧ ಫ್ಯಾಸಿಸ್ಟ್‌ಗಳು ಎಂದು ಕರೆಯಬಹುದಾದ ಈ ವಿಧ್ವಂಸಕರು ಈ ದೇಶದ ಇತಿಹಾಸದಲ್ಲಿ ಹಿಂದೆಂದೂ ಮಾಡದ ಕೆಲಸವನ್ನು ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಕಂಡುಹಿಡಿಯಿರಿ ಮತ್ತು ಅವರಿಗೆ ಶಿಕ್ಷೆಯಾಗುತ್ತದೆ.
ಘಟನೆಯನ್ನು ವಿಶ್ವ ನಾಯಕರಗಳು ಖಂಡಿಸಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಈ ಘಟನೆಗಳನ್ನು “ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ ಮತ್ತು ಇದರ ಜೊತೆಗೆ ಶಾಂತಿಯುತ ಅಧಿಕಾರದ ವರ್ಗಾವಣೆ ಆಗಬೇಕು ಎಂದು ಹೇಳಿದ್ದಾರೆ. ಬ್ರೆಜಿಲ್‌ನ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:54 am, Mon, 9 January 23