ನವದೆಹಲಿ, ಆಗಸ್ಟ್ 25: ಕೇಂದ್ರ ಸಂಪುಟ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆಯನ್ನು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ನ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ಸ್ವಾಗತಿಸಿದ್ದಾರೆ. ಹಳೆಯ ಪೆನ್ಷನ್ ಸಿಸ್ಟಂಗೆ ತಿಲಾಂಜಲಿ ಹೇಳಿ ಎನ್ಪಿಎಸ್ ಜಾರಿಗೆ ತರಲಾಗಿದ್ದನ್ನೂ ಪ್ರವೀಣ್ ಈ ಹಿಂದೆ ಸಮರ್ಥನೆ ಮಾಡಿಕೊಂಡಿದ್ದರು. ಇದೀಗ ಎನ್ಪಿಎಸ್ನಲ್ಲಿ ಕೈಬಿಡಲಾಗಿದ್ದ ಕನಿಷ್ಠ ಖಾತ್ರಿ ಪಿಂಚಣಿಯನ್ನು ಯೂನಿಫೈಡ್ ಪೆನ್ಷನ್ ಸಿಸ್ಟಂನಲ್ಲಿ ಅಳವಡಿಸಲಾಗಿದೆ. ಇದು ಸಕಾರಾತ್ಮಕವಾದುದು ಮತ್ತು ಸ್ವಾಗತಾರ್ಹವಾದುದು ಎಂದಿದ್ದಾರೆ ಪ್ರವೀಣ್ ಚಕ್ರವರ್ತಿ.
ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಪಿಂಚಣಿ ಮೂಲಕ ಹಣಕಾಸು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೂನಿಫೈಡ್ ಪೆನ್ಷನ್ ಸ್ಕೀಮ್ ಎನ್ಪಿಎಸ್ ಮತ್ತು ಒಪಿಎಸ್ನ ಕೆಲ ಅಂಶಗಳನ್ನು ಕೂಡಿಸಿದೆ. ಕನಿಷ್ಠ ಪಿಂಚಣಿ, ನಿಶ್ಚಿತ ಪಿಂಚಣಿ, ಹಣದುಬ್ಬರಕ್ಕೆ ತಕ್ಕಂತೆ ಬದಲಾವಣೆ ಇತ್ಯಾದಿ ಅಂಶಗಳು ಯುಪಿಎಸ್ನಲ್ಲಿ ಇವೆ.
ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆಗೂ, ಎನ್ಪಿಎಸ್, ಒಪಿಎಸ್ಗೂ ವ್ಯತ್ಯಾಸಗಳೇನು?
ಕಾಂಗ್ರೆಸ್ನ ಡಾಟಾ ಅನಾಲಿಟಿಕ್ಸ್ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರವೀಣ್ ಚಕ್ರವರ್ತಿ ಕೇಂದ್ರದ ಈ ಹೊಸ ಪಿಂಚಣಿ ಸುಧಾರಣೆಯನ್ನು ಪ್ರಶಂಸಿಸಿದ್ದಾರೆ.
Pension for govt staff in India is inherently a tax on the majority poor to pay the elite minority
So, OPS was reformed to NPS in 2013
But NPS did not assure a minimum amount for retired families
Now, UPS does that
UPS = NPS + Min guaranteeThis is prudent & welcome https://t.co/1Lz4GVuJyo
— Praveen Chakravarty (@pravchak) August 25, 2024
‘ಸರ್ಕಾರಿ ಸಿಬ್ಬಂದಿಗೆ ಪೆನ್ಷನ್ ಕೊಡುವುದೆಂದರೆ, ಮೇಲಿನ ಅಲ್ಪಸಂಖ್ಯಾತರಿಗೆ ಪಾವತಿಸಲು ಕೆಳಗಿನ ಬಹುಜನರಿಗೆ ತೆರಿಗೆ ವಿಧಿಸಿದಂತೆ. ಹೀಗಾಗಿ, 2013ರಲ್ಲಿ ಹಳೆಯ ಪೆನ್ಷನ್ ಸಿಸ್ಟಂನಲ್ಲಿ ಸುಧಾರಣೆ ಮಾಡಿ ಎನ್ಪಿಎಸ್ ತರಲಾಯಿತು. ಆದರೆ, ನಿವೃತ್ತ ಕುಟುಂಬಗಳಿಗೆ ಕನಿಷ್ಠ ಪಿಂಚಣಿ ಮೊತ್ತವನ್ನು ಎನ್ಪಿಎಸ್ನಲ್ಲಿ ಖಾತ್ರಿಗೊಳಿಸಿರಲಿಲ್ಲ. ಈಗ ಯುಪಿಎಸ್ ಆ ಕೆಲಸ ಮಾಡಿದೆ,’ ಎಂದು ಪ್ರವೀಣ್ ಚಕ್ರವರ್ತಿ ತಮ್ಮ ಎರಡು ವರ್ಷದ ಹಿಂದಿನ ಪೋಸ್ಟ್ ಅನ್ನು ಕೋಟ್ ಮಾಡುತ್ತಾ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರ ಜಂಟಿ ನಿಯೋಗದ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಭೇಟಿ
‘ಗುಜರಾತ್ನಲ್ಲಿ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 3 ಲಕ್ಷ ಮಂದಿ ಸರ್ಕಾರಿ ಸೇವೆಯಲ್ಲಿದ್ದಾರೆ. ಹಳೆಯ ಪೆನ್ಷನ್ ಸ್ಕೀಮ್ ಸುಮಾರು ಶೇ. 15ರಷ್ಟು ತೆರಿಗೆ ಆದಾಯವನ್ನು ತಿನ್ನುತ್ತದೆ. ಶೇ 0.5ರಷ್ಟು ಜನರು ನಿವೃತ್ತಿ ಪಿಂಚಣಿಗೆ ಶೇ 15ರಷ್ಟು ತೆರಿಗೆದಾರರ ಹಣವನ್ನು ಪಡೆಯಬೇಕಾ?’ ಎಂದು ಅಭಿಪ್ರಾಯಪಟ್ಟಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Sun, 25 August 24