ಕೇಂದ್ರ ಸರ್ಕಾರಿ ನೌಕರರ ಜಂಟಿ ನಿಯೋಗದ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಭೇಟಿ
ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಯನ್ನು ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ಮಾಡಿದೆ. ಈ ನಡುವೆ ಇದಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರ ಜಂಟಿ ನಿಯೋಗದ ಸಿಬ್ಬಂದಿ ವರ್ಗದ ತಂಡವನ್ನು ಪಿಎಂ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಜೆಸಿಎಂನ ಸಿಬ್ಬಂದಿ ವರ್ಗದ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ಕುರಿತು ರಾಷ್ಟ್ರೀಯ ಮಂಡಳಿ (ಜೆಸಿಎಂ) ಕಾರ್ಯದರ್ಶಿ (ಸಿಬ್ಬಂದಿ ಭಾಗ) ಗೋಪಾಲ್ ಮಿಶ್ರಾ ಸಂತಸ ವ್ಯಕ್ತಪಡಿಸಿದ್ದಾರೆ.
“ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿಯೊಬ್ಬರು ನಮ್ಮ ಜೊತೆ ಮಾತುಕತೆ ನಡೆಸಿದ್ದಾರೆ. ಇದಕ್ಕೆ ನಾವು ರಾಷ್ಟ್ರೀಯ ಕೌನ್ಸಿಲ್ (ಜೆಸಿಎಂ) ಪರವಾಗಿ ಕೃತಜ್ಞರಾಗಿರುತ್ತೇವೆ. ಪ್ರಧಾನಿಯೊಬ್ಬರು ರಾಷ್ಟ್ರೀಯ ಮಂಡಳಿಯ (ಜೆಸಿಎಂ) ನಿಯೋಗವನ್ನು ಮಾತುಕತೆಗೆ ಆಹ್ವಾನಿಸಿದ್ದು ಇದೇ ಮೊದಲು. ಇದು 32 ಲಕ್ಷ ಸರ್ಕಾರಿ ನೌಕರರಿಗೆ ಹೆಮ್ಮೆಯ ಕ್ಷಣವಾಗಿದೆ. ಎಲ್ಲ ಸರ್ಕಾರಿ ನೌಕರರನ್ನು ನಾವು ಪ್ರತಿನಿಧಿಸಿದ್ದೇವೆ.” ಎಂದು ಹೇಳಿದ್ದಾರೆ.
VIDEO | PM Modi (@narendramodi) met a delegation of staff side of Joint Consultative Machinery for Central Government employees earlier today.
(Source: Third Party) pic.twitter.com/8VNAPSeRkc
— Press Trust of India (@PTI_News) August 24, 2024
ಇದನ್ನೂ ಓದಿ: Unified Pension Scheme: ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಪ್ರಧಾನಿ ಮೋದಿ ಸಂಪುಟ ಅನುಮೋದನೆ
ಈ ನಡುವೆ ಇಂದು ಸಂಜೆ ಹಳೆಯ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆಗೆ ಬದಲಾಗಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 25 ವರ್ಷ ಕೆಲಸ ಮಾಡುವ ನೌಕರರಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಯುಪಿಎಸ್ ಯೋಜನೆಯಿಂದ 23 ಲಕ್ಷ ಕೇಂದ್ರ ನೌಕರರು ಪ್ರಯೋಜನ ಪಡೆಯಲಿದ್ದಾರೆ.
VIDEO | Here’s what Gopal Mishra, Secretary (Staff Side), National Council (Joint Consultative Machinery) on PM Modi meeting a delegation of staff side of JCM for Central Government employees.
“We are thankful on behalf of the National Council (Joint Consultative Machinery).… pic.twitter.com/569CMEw1eo
— Press Trust of India (@PTI_News) August 24, 2024
ಇದರ ಪ್ರಕಾರ, 10 ವರ್ಷ ಸೇವೆ ಸಲ್ಲಿಸಿದವರಿಗೆ 10 ಸಾವಿರ ಪಿಂಚಣಿ ಸಿಗಲಿದೆ. ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ ಅವರ ಪತ್ನಿಯರಿಗೆ ಶೇ.60ರಷ್ಟು ಪಿಂಚಣಿ ನೀಡಲಾಗುವುದು. ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರವೂ ಜಾರಿಗೊಳಿಸಬಹುದು ಎಂದು ಸರ್ಕಾರ ಹೇಳಿದೆ. ಈ ಯೋಜನೆಯಿಂದ ನೌಕರರ ಮೇಲೆ ಯಾವುದೇ ಹೊರೆ ಇರುವುದಿಲ್ಲ. ಒಬ್ಬ ಉದ್ಯೋಗಿ ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ವೇತನದ ಕನಿಷ್ಠ ಶೇ. 50ರಷ್ಟನ್ನು ಪಿಂಚಣಿಯಾಗಿ ನೀಡಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ