ಕೊರೊನಾ ಲಸಿಕೆ ಜೊತೆಗೆ ಮುನ್ನೆಚ್ಚರಿಕೆಯೂ ಬೇಕು: ಲವ್ ಅಗರ್ವಾಲ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 16, 2021 | 5:27 PM

ಕೊರೊನಾ ಲಸಿಕೆಯೂ ಇದೆ. ಅದರ ಜೊತೆಗೆ ನಮಗೆ ಮನ್ನೆಚ್ಚರಿಕೆಯೂ ಇರಬೇಕು ಎಂದು ಅಭಿಪ್ರಾಯಪಟ್ಟರು.

ಕೊರೊನಾ ಲಸಿಕೆ ಜೊತೆಗೆ ಮುನ್ನೆಚ್ಚರಿಕೆಯೂ ಬೇಕು: ಲವ್ ಅಗರ್ವಾಲ್
ಲವ್ ಅಗರ್ವಾಲ್
Follow us on

ದೆಹಲಿ: ಕೊರೊನಾ ಲಸಿಕೆ ಜೊತೆಗೆ ಮುನ್ನೆಚ್ಚರಿಕೆಯನ್ನೂ ಎಲ್ಲರೂ ತಪ್ಪದೇ ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸಲಹೆ ಮಾಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೂ ತಪ್ಪದೇ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಕೊರೊನಾ ಲಸಿಕೆಯೂ ಇದೆ. ಅದರ ಜೊತೆಗೆ ನಮಗೆ ಮನ್ನೆಚ್ಚರಿಕೆಯೂ ಇರಬೇಕು ಎಂದು ಅಭಿಪ್ರಾಯಪಟ್ಟರು.

ತಮಿಳುನಾಡಿನ ಪೊಲೀಸರಲ್ಲಿ ಲಸಿಕೆ ಪಡೆದವರ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಎರಡು ಡೋಸ್ ಲಸಿಕೆ ಪಡೆದವರಿಗೆ ಸಾವಿನಿಂದ ರಕ್ಷಣೆ ಸಿಕ್ಕಿರುವುದು ದೃಢಪಟ್ಟಿದೆ. 2 ಡೋಸ್ ಲಸಿಕೆ ಪಡೆದ 67 ಸಾವಿರ ತಮಿಳುನಾಡು ಪೊಲೀಸರ ಪೈಕಿ ಕೇವಲ ನಾಲ್ವರು ಮೃತಪಟ್ಟಿದ್ದಾರೆ. ಸಿಂಗಲ್ ಡೋಸ್ ಲಸಿಕೆ ಪಡೆದಿದ್ದ 32 ಸಾವಿರ ಪೊಲೀಸರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಕೊರೊನಾ ಕಾರ್ಯಪಡೆ ಮುಖ್ಯಸ್ಥ ಡಾ.ವಿ.ಕೆ.ಪೌಲ್ ಹೇಳಿದರು.

ಜಗತ್ತು ಇದೀಗ ಕೊರೊನಾದ 3ನೇ ಅಲೆಯತ್ತ ಹೋಗುತ್ತಿದೆ. ನೆದರ್​ಲ್ಯಾಂಡ್, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಆಫ್ರಿಕಾ ದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಾವು ಇನ್ನೂ ಹರ್ಡ್ ಇಮ್ಯೂನಿಟಿ ಹಂತ ತಲುಪಿಲ್ಲ. ಅಂದರೆ ಸಮುದಾಯದಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ ಎಂದು ತಿಳಿಸಿದರು.

ಭಾರತ ದೇಶವು ಇನ್ನೂ ಕೊರೊನಾ ಸೋಂಕಿನಿಂದ ಮುಕ್ತಿ ಪಡೆದಿಲ್ಲ. ನಾವು ಈಗಲೂ ಕೊರೊನಾಗೆ ತುತ್ತಾಗಬಹುದು. ಆದರೆ ಭಾರತದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಭಾರತದಲ್ಲಿ ಕೊರೊನಾದ ಮೂರನೇ ಅಲೆ ಬರಲು ಅವಕಾಶ ಕೊಡಬಾರದು. ಮುಂದಿನ 100-125 ದಿನ ಬಹಳ‌ ನಿರ್ಣಾಯಕ ಎಂದು ನುಡಿದರು.

ಕೇಂದ್ರ ಸರ್ಕಾರವು ಲಸಿಕೆಯ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಂಡಿದೆ. ಮೂರರಿಂದ ನಾಲ್ಕು ಪಟ್ಟು ಲಸಿಕೆ ಉತ್ಪಾದನೆ ಹೆಚ್ಚಾಗುತ್ತಿದೆ. ದೇಶದಲ್ಲಿ 7.92 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ. 31.61 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈಗ 47 ಜಿಲ್ಲೆಗಳಲ್ಲಿ ಶೇ 10 ಕ್ಕಿಂತ ಹೆಚ್ಚಿನ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇದೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಸಭೆ
ದೇಶದ 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೊರೊನಾ ನಿರ್ವಹಣೆ ಕುರಿತು ಚರ್ಚಿಸಿದರು. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳ ಮುಖ್ಯಮಂತ್ರಿಗಳೊಂದಿಗೆ ಬೆಳಿಗ್ಗೆ 11 ಗಂಟೆಗೆ ವಿಡಿಯೊ ಕಾನ್ಫರೆನ್ಸ್​​ ಮೂಲಕ ಸಂವಾದ ನಡೆಸಿ ಚರ್ಚಿಸಿದರು.

(Precautions also required with vaccination says luv Agarwal union health ministry)

ಇದನ್ನೂ ಓದಿ: Corona third Wave: ಆಗಸ್ಟ್​ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ ನಿಶ್ಚಿತ: ಐಸಿಎಂಆರ್​ ಹಿರಿಯ ವೈದ್ಯ

ಇದನ್ನೂ ಓದಿ: Corona Vaccination: ಕೊರೊನಾ ಲಸಿಕಾ ಕೇಂದ್ರದಲ್ಲಿ ಪ್ರತ್ಯಕ್ಷವಾಯ್ತು ಡೈನೋಸಾರ್!

Published On - 5:23 pm, Fri, 16 July 21