ಮೇಕೆದಾಟು ಯೋಜನೆ: ಕರ್ನಾಟಕದ ವರದಿ ಒಪ್ಪುವುದಿಲ್ಲವೆಂದು ತಮಿಳುನಾಡು ನಿಯೋಗಕ್ಕೆ ಕೇಂದ್ರ ಸಚಿವ ಶೇಖಾವತ್ ಭರವಸೆ

ಇನ್ನು ಜುಲೈ 18 ರಂದು ತಮಿಳುನಾಡು ಸಿಎಂ ಸ್ಟಾಲಿನ್ ದೆಹಲಿಗೆ ತೆರಳಲಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಲಿದ್ದಾರೆ. ಮೇಕೆದಾಟು ಯೋಜನೆಗೆ ಅವಕಾಶ ನೀಡದಂತೆ ಮನವಿ ಮಾಡಲಿದ್ದಾರೆ.

ಮೇಕೆದಾಟು ಯೋಜನೆ: ಕರ್ನಾಟಕದ ವರದಿ ಒಪ್ಪುವುದಿಲ್ಲವೆಂದು ತಮಿಳುನಾಡು ನಿಯೋಗಕ್ಕೆ ಕೇಂದ್ರ ಸಚಿವ ಶೇಖಾವತ್ ಭರವಸೆ
ಮೇಕೆದಾಟು ಯೋಜನೆ: ಕರ್ನಾಟಕದ ವರದಿ ಒಪ್ಪುವುದಿಲ್ಲವೆಂದು ತಮಿಳುನಾಡು ನಿಯೋಗಕ್ಕೆ ಕೇಂದ್ರ ಸಚಿವ ಶೇಖಾವತ್ ಭರವಸೆ
TV9kannada Web Team

| Edited By: sadhu srinath

Jul 16, 2021 | 3:50 PM

ಕರ್ನಾಟದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಯೋಜನೆ ವಿರೋಧಿಸಿ ತಮಿಳುನಾಡು ಸರ್ವಪಕ್ಷಗಳ ನಿಯೋಗ (all-party delegation from Tamilnadu) ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಭೇಟಿಯಾಗಿದೆ. ಯೋಜನೆಗೆ ಒಪ್ಪಿಗೆ ನೀಡದಂತೆ ನಿಯೋಗ ಮನವಿ ಮಾಡಿದೆ. ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ನೀಡಿರುವ ವಿಸ್ತೃತ ವರದಿಯನ್ನು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಶೇಖಾವತ್ (Union Minister for Jal Shakti Gajendra Singh Shekhawat) ಭರವಸೆ ನೀಡಿದ್ದಾರೆ.

ಕರ್ನಾಟಕ ನೀಡಿರುವ  ಮೇಕೆದಾಟು ಯೋಜನೆ (Mekedatu dam project) ವರದಿಯಲ್ಲಿ ಹಲವು ತಪ್ಪುಗಳಿವೆ, ತಮಿಳುನಾಡು ರಾಜ್ಯದ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದನ್ನು ಯಾವುದೇ ಕಾರಣಕ್ಕೂ ಕೇಂದ್ರ ಒಪ್ಪುವುದಿಲ್ಲ. ಕರ್ನಾಟಕ ವರದಿಯನ್ನು ತಿರಸ್ಕರಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಮಾಧ್ಯಮದವರಿಗೆ ಹೇಳಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ: ಇನ್ನು ಜುಲೈ 18 ರಂದು ತಮಿಳುನಾಡು ಸಿಎಂ ಸ್ಟಾಲಿನ್ ದೆಹಲಿಗೆ ತೆರಳಲಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಭೇಟಿಯಾಗಲಿದ್ದಾರೆ. ಮೇಕೆದಾಟು ಯೋಜನೆಗೆ ಅವಕಾಶ ನೀಡದಂತೆ ಮನವಿ ಮಾಡಲಿದ್ದಾರೆ.

ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯಿಂದ ಕರ್ನಾಟಕ ಸರ್ಕಾರ 440 ಮೆಗಾ ವ್ಯಾಟ್ ವಿದ್ಯುತ್‌ ಉತ್ಪಾದನೆ ಮಾಡಲು ಉದ್ದೇಶಿಸಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಅನ್ವಯ ಕುಡಿಯುವ ನೀರಿನ ಬಳಕೆಗೂ ಯೋಜನೆ ಸಹಕಾರಿಯಾಗಲಿದೆ. ಆದರೆ, ಕುಡಿಯುವ ಉದ್ದೇಶಕ್ಕೆ ಈ ಯೋಜನೆಯ ಅಗತ್ಯವಿಲ್ಲ. ಇದೇ ವೇಳೆ ಯೋಜನೆಯನ್ನು ನೀರಾವರಿಗೆ ಬಳಕೆ ಮಾಡುವುದಕ್ಕೆ ಅವಕಾಶವಿಲ್ಲ.

ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಮತ್ತೊಂದು ವಿಘ್ನ; ಈ ಬಾರಿ ಪುದುಚೇರಿಯಿಂದ ಅಡ್ಡಗಾಲು! ಯಾಕಂತೆ?

(mekedatu project tamil nadu chief minister mk stalin to meet president ramnath kovind)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada