ಅಯೋಧ್ಯೆ ರಾಮಮಂದಿರಕ್ಕೂ ಮುನ್ನ ಹನುಮನ ಜನ್ಮಸ್ಥಾನ ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಕೊಡಿ: ಮಧುಗಿರಿ ಮೋದಿ ಆಗ್ರಹ
ಅಂಜನಾದ್ರಿ ಪರ್ವತವೇ ಆಂಜನೇಯನ ಜನ್ಮಸ್ಥಳ. ಇದರ ಹೊರತಾಗಿ ಬೇರೆ ಬೇರೆ ಸ್ಥಳಗಳ ಹೆಸರು ಹೇಳುವವರಿಗೆ ಸಮರ್ಪಕ ಮಾಹಿತಿ ಇಲ್ಲ. ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಅಧ್ಯಾತ್ಮಿಕ ಕೇಂದ್ರ ಮಾಡಬೇಕು: ಅತುಲ್ ಸಭರ್ವಾಲ್
ಕೊಪ್ಪಳ: ಕೆಲ ತಿಂಗಳಿನಿಂದ ಮುನ್ನೆಲೆಗೆ ಬಂದ ಆಂಜನೇಯನ (Lord Anjaneya) ಜನ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಅಂಜನಾದ್ರಿ ಪರ್ವತವನ್ನು (Anjanadri Hill) ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರ ಮಾಡಬೇಕೆಂದು ಕೆಲ ಸಂಘಟನೆಗಳು ಒತ್ತಾಯಿಸಿವೆ. ಗೋಕರ್ಣವು ಹನುಮನ ಜನ್ಮಸ್ಥಳ (Birth Place) ಎಂದು ಹೇಳುವ ರಾಮಚಂದ್ರಪುರ ಮಠದ ಸ್ವಾಮೀಜಿಗೆ ಮಾಹಿತಿ ಕೊರತೆ ಇದೆ. ಆಂಜನೇಯನ ನಿಜವಾದ ಜನ್ಮಸ್ಥಾನ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ. ರಾಮಾಯಣ ಅಧ್ಯಯನ ಮಾಡದವರು ತಿರುಪತಿ, ಗೋಕರ್ಣ ಹನುಮನ ಜನ್ಮಸ್ಥಳ ಎನ್ನುತ್ತಾರೆ ಎಂದು ಮಧುಗಿರಿ ಮೋದಿ ಎಂದು ಕರೆಸಿಕೊಳ್ಳುವ ಕರ್ನಾಟಕ ರಾಜ್ಯ ಹಿಂದೂ ಸಮ್ರಾಟ್ ಧರ್ಮಸೇನೆ ಅಧ್ಯಕ್ಷ ಅತುಲ್ ಸಭರ್ವಾಲ್ ಹೇಳಿಕೆ ನೀಡಿದ್ದಾರೆ.
ಅಂಜನಾದ್ರಿ ಪರ್ವತವೇ ಆಂಜನೇಯನ ಜನ್ಮಸ್ಥಳ. ಇದರ ಹೊರತಾಗಿ ಬೇರೆ ಬೇರೆ ಸ್ಥಳಗಳ ಹೆಸರು ಹೇಳುವವರಿಗೆ ಸಮರ್ಪಕ ಮಾಹಿತಿ ಇಲ್ಲ. ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಅಧ್ಯಾತ್ಮಿಕ ಕೇಂದ್ರ ಮಾಡಬೇಕು. ಈಗಿರುವ ಮುಜರಾಯಿ ಇಲಾಖೆಯಿಂದ ಪ್ರಾಧಿಕಾರ ರಚಿಸಬೇಕು. ಸನಾತನ ಧರ್ಮೀಯರನ್ನು ಸೇರಿಸಿಕೊಂಡು ಪ್ರಾಧಿಕಾರ ರಚಿಸಿ, 5000 ಕೋಟಿ ರೂಪಾಯಿ ವೆಚ್ಚದಲ್ಲಿ ಅದನ್ನು ಅಭಿವೃದ್ಧಿಪಡಿಸಬೇಕು ಎಂದು ಅತುಲ್ ಸಭರ್ವಾಲ್ ಒತ್ತಾಯಿಸಿದ್ದಾರೆ.
ಗೋಕರ್ಣವು ಹನುಮನ ಜನ್ಮಸ್ಥಳ ಎಂದು ಹೇಳುವ ರಾಮಚಂದ್ರಪುರ ಮಠದ ಸ್ವಾಮೀಜಿಗೆ ಮಾಹಿತಿ ಕೊರತೆ ಇದೆ. ರಾಮಾಯಣದ ಅಧ್ಯಯನ ಮಾಡದವರು ತಿರುಪತಿ, ಗೋಕರ್ಣ ಹನುಮನ ಜನ್ಮಸ್ಥಳ ಎಂದು ವಾದಿಸುತ್ತಾರಷ್ಟೇ. ಆದರೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎನ್ನುವುದು ಸತ್ಯ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.
ಇಲ್ಲಿರುವ ಋಷಿಮುಖ ಪರ್ವತ, ಪಂಪಾಸರೋವರ, ಮಾತಂಗ ಬೆಟ್ಟಗಳನ್ನೂ ಅಭಿವೃದ್ಧಿ ಪಡಿಸಬೇಕು. ಸರ್ಕಾರಗಳು ಹನುಮನ ಜನ್ಮಸ್ಥಳ ಅಭಿವೃದ್ಧಿಪಡಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ರಾಮಬಂಟ ಹನುಮನ ಜನ್ಮಸ್ಥಳವನ್ನು ಅಭಿವೃದ್ಧಿ ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದೂ ಸಮ್ರಾಟ್ ಧರ್ಮಸೇನೆ ಅಧ್ಯಕ್ಷ ಅತುಲ್ ಸಭರ್ವಾಲ್( ಮಧುಗಿರಿ ಮೋದಿ) ಆಗ್ರಹಿಸಿದ್ದಾರೆ.
(Government should allocate Rs 5000 crore for development of Anjanadri hill says Madhugiri Modi)
ಇದನ್ನೂ ಓದಿ: ತಿರುಪತಿ ಆಡಳಿತ ಮಂಡಳಿಯಿಂದ ಅಪಚಾರ; ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ ತಿರುಪತಿಯಲ್ಲಂತೆ!