ಹನುಮನ ಹುಟ್ಟಿದ ಸ್ಥಳ ವಿವಾದ: ಟಿಟಿಡಿ ಹೇಳಿಕೆ ಖಂಡಿಸಿ ತಿರುಪತಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ ಅಂಜನಾದ್ರಿಯ ಅರ್ಚಕ

guruganesh bhat

| Edited By: Ayesha Banu

Updated on: Apr 15, 2021 | 8:01 AM

Kishkindha God Anjaneya Birthplace: ‘ಕಿಷ್ಕಿಂದೆಯೇ ಹನುಮನ ಜನ್ಮಸ್ಥಳ. ಅದಕ್ಕೆ ಪೂರಕ ದಾಖಲೆಗಳು ನಮ್ಮ‌ಬಳಿ ಇವೆ‌.  ಟಿಟಿಡಿ ಇಷ್ಟು ವರ್ಷ ಸುಮ್ಮನಿದ್ದು ಇದೀಗ ಯಾಕೆ ಈ ವಿಷಯ ತಗೆದಿದ್ದಾರೆ’ ಎಂದು ಅರ್ಚಕ ವಿದ್ಯಾದಾಸ್ ಬಾಬಾ ಪ್ರಶ್ನೆ ಎತ್ತಿದ್ದಾರೆ.

ಹನುಮನ ಹುಟ್ಟಿದ ಸ್ಥಳ ವಿವಾದ: ಟಿಟಿಡಿ ಹೇಳಿಕೆ ಖಂಡಿಸಿ ತಿರುಪತಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ ಅಂಜನಾದ್ರಿಯ ಅರ್ಚಕ
ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ
Follow us

ರಾಮಭಕ್ತ ಹನುಮಂತ ಹುಟ್ಟಿದ್ದು ಎಲ್ಲಿ ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.  ಕೊಪ್ಪಳ ಜಿಲ್ಲೆಯ ಆನೆಗೊಂದಿಯ ಅಂಜನಾದ್ರಿ ಪರ್ವತ ಹನುಮ ಹುಟ್ಟಿದ ಸ್ಥಳ ಎಂಬುದು ಲಕ್ಷಾಂತರ ಜನರ ನಂಬಿಕೆ. ಆದರೆ  ಟಿಟಿಡಿ ಹನುಮ‌ ಹುಟ್ಟಿದ್ದು ನಮ್ಮಲ್ಲಿ ಎಂದು ಹೇಳುತ್ತಿದೆ.  ಈ ಹೇಳಿಕೆಗೆ ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಟಿಡಿಯ ಹೇಳಿಕೆಯನ್ನು ಖಂಡಿಸಿ ತಿರುಪತಿಗೆ ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದ್ದಾರೆ.

ಸುಮಾರು 20 ವರ್ಷಗಳಿಂದ ಅಂಜನಾದ್ರಿ ಪರ್ವತದ ಅರ್ಚಕರಾಗಿರುವವರೇ ವಿದ್ಯಾದಾಸ್ ಬಾಬಾ.   ‘ಕಿಷ್ಕಿಂದೆಯೇ ಹನುಮನ ಜನ್ಮಸ್ಥಳ. ಅದಕ್ಕೆ ಪೂರಕ ದಾಖಲೆಗಳು ನಮ್ಮ‌ಬಳಿ ಇವೆ‌.  ಟಿಟಿಡಿ ಇಷ್ಟು ವರ್ಷ ಸುಮ್ಮನಿದ್ದು ಇದೀಗ ಯಾಕೆ ಈ ವಿಷಯ ತಗೆದಿದ್ದಾರೆ’ ಎಂದು ಅರ್ಚಕ ವಿದ್ಯಾದಾಸ್ ಬಾಬಾ ಪ್ರಶ್ನೆ ಎತ್ತಿದ್ದಾರೆ. ಅಲ್ಲದೇ  ಟಿಟಿಡಿ ಹೇಳಿಕೆ ಖಂಡಿಸಿ ತಿರುಪತಿಗೆ ಪಾದಯಾತ್ರೆ  ನಡೆಸಲು ಅವರು ಮುಂದಾಗಿದ್ದಾರೆ.

ತಿರುಪತಿಗೆ ಪಾದಯಾತ್ರೆ, ಸಂತ ಸಮಾವೇಶ ಮಾಡಲು‌ ನಿರ್ಧಾರ ತಿರುಪತಿ ಹನುಮ ಹುಟ್ಟಿದ್ದು ನಮ್ಮಲ್ಲಿ ಎಂಬುದಕ್ಕೆ ಕೆಲವು  ದಾಖಲೆ ಬಿಡುಗಡೆ ಮಾಡಿದ ಬಳಿಕ ಅರ್ಚಕ ವಿದ್ಯಾದಾಸ್ ಬಾಬಾ ಅಂಜನಾದ್ರಿ ಪರ್ವತದಲ್ಲಿ ಸಂತ ಸಮಾವೇಶ ಮಾಡಲು‌ ನಿರ್ಧರಿಸಿದ್ದಾರೆ. ದೇಶದ ನಾನಾ ಭಾಗದ ಸಂತರನನ್ನು ಕರೆಸಿ ಅಂಜನಾದ್ರಿಯಲ್ಲಿ ಬೃಹತ್ ಸಮಾವೇಶ ಮಾಡುವ ಚಿಂತನೆ ನಡೆಸಿದ್ದಾರೆ. ಟಿಟಿಡಿ ಬಳಿ ಯಾವ ಪೂರಕ ದಾಖಲೆ ಇಲ್ಲದಿದ್ದರೂ  ಹನುಮ ಹುಟ್ಟಿದ್ದು ನಮ್ಮಲ್ಲಿ ಎಂದು ವಾದಿಸುತ್ತಿದೆ.  ಆದರೆ, ಕಿಷ್ಕಿಂಧೆ ಹನುಮ‌ ಹುಟ್ಟಿದ ಸ್ಥಳ, ಹೀಗಾಗಿ ನಾವು ಟಿಟಿಡಿ ದಾಖಲೆ ಬಿಡುಗಡೆ ಮಾಡಿದ ಬಳಿಕ ಸಂತ ಸಮಾವೇಶ ಮಾಡುತ್ತೇವೆ. ಜೊತೆಗೆ ಕನಕಗಿರಿಯಿಂದ ಭಕ್ತರೊಂದಿಗೆ ತಿರುಪತಿವರೆಗೂ ಪಾದಯಾತ್ರೆ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ಟಿವಿ9ಗೆ ತಿಳಿಸಿದ್ದಾರೆ.

ANJANADRI PRIEST

ವಿವಿಧ ಸಾಧು ಸಂತರ ಜತೆಗೆ ಅಂಜನಾದ್ರಿ ಅರ್ಚಕ ವಿದ್ಯಾದಾಸ್ ಬಾಬಾ

ಕೊಪ್ಪಳದ ಕಿಷ್ಕಿಂದೆಯೇ ಹನುಮ ಹುಟ್ಟಿದ ಸ್ಥಳ; ಇಲ್ಲಿವೆ ಖಚಿತ ದಾಖಲೆಗಳು

ತಿರುಮಲದಲ್ಲಿ  ಅಂಜನಾದ್ರಿ ಪರ್ವತ ಇದೆ ಎಂಬ ಕಾರಣಕ್ಕೇ ಹನುಮ ನಮ್ಮಲ್ಲಿ ಹುಟ್ಟಿದ್ದಾನೆ ಎಂದು ವಾದಿಸುತ್ತಿದೆ. ಕಿಷ್ಕಿಂಧೆಯಲ್ಲಿ ಇರುವ ಭೌಗೋಳಿಕ ವಾತಾವರಣ, ದಾಖಲೆಗಳು ಟಿಟಿಡಿಯಲ್ಲಿ ಇಲ್ಲ. ಜತೆಗೆ ಹನುಮ‌ ಹುಟ್ಟಿದ್ದಾನೆ ಎಂದು  ಥೈಲ್ಯಾಂಡ್, ನಾಸಿಕ ಮುಂತಾದ ಸ್ಥಳಗಳೂ ಸೇರಿ ಒಟ್ಟು 14 ಸ್ಥಳಗಳ ಐತಿಹ್ಯಗಳು ವಾದಿಸುತ್ತವೆ.   ಆದರೆ ಕಿಷ್ಕಿಂಧೆ ಪ್ರದೇಶದ ಕುರಿತು ಅನೇಕ ಶಾಸನಗಳು, ದಾಖಲೆಗಳು ಮತ್ತು ಇಲ್ಲಿರುವ ಪ್ರಕೃತಿ- ವಾತಾವರಣ ಬೇರೆ ಯಾವ ಕಡೆಯೂ‌ ಇಲ್ಲ.  ಕಿಷ್ಕಿಂಧೆಯ ವಾತಾವರಣವೇ  ಹನುಮನ‌ ಜನ್ಮಸ್ಥಳ ಎಂಬುದನ್ನು ಸಾರುತ್ತದೆ.  ಇತರ ಸ್ಥಳಗಳಲ್ಲಿ ಕಿಷ್ಕಿಂಧೆಯಂತೆ ಪರ್ವತ ಪ್ರದೇಶ ಇದ್ದರೂ ಅಲ್ಲಿ ಅಂಜನಾದೇವಿ ನೆಲೆಸಿದ್ದು, ರಾಮ‌ ಲಕ್ಷ್ಮಣರ ಭೇಟಿ, ವಾಲಿ ಸುಗ್ರೀವರ ಕಾದಾಟ ಇದ್ಯಾವುದರ ಉಲ್ಲೇಖವಿಲ್ಲ. ಆದರೆ ಕಿಷ್ಕಿಂಧೆ ಪ್ರದೇಶದಲ್ಲಿ ಇವೆಲ್ಲವುಗಳ ಉಲ್ಲೇಖಗಳು ಇಂದಿಗೂ ಜೀವಂತವಿದೆ. ಅಕ್ಕ‌ಪಕ್ಕದ ಬೆಟ್ಟ ಗುಡ್ಡಗಳು, ಅಂಜನಾದ್ರಿ ಪರ್ವತದ ಕೆಳಗಿರುವ ಬಾಳೆ ವನ, ಪಂಪಾ ಸರೋವರ ಇವೆಲ್ಲವೂ ಹನುಮ‌ ಇಲ್ಲೇ ಜನಿಸಿದ್ದು ಎಂಬುದಕ್ಕೆ ಸಾಕ್ಷಿಯಾಗಿವೆ. ಹೀಗಾಗಿ ಟಿಟಿಡಿ ದಾಖಲೆ ಬಿಡುಗಡೆ ಮಾಡಿದ ಬಳಿಕ‌ ನಾವು‌ ಭಕ್ತರೊಂದಿಗೆ ಪಾದಯತ್ತೆ ಮಾಡುತ್ತೇವೆ ಎಂದು ಮಹಾಂತ ವಿದ್ಯಾದಾಸ ಬಾಬಾ ತಿಳಿಸುತ್ತಾರೆ.

ಅರ್ಚಕ ವಿದ್ಯಾದಾಸ ಬಾಬಾ  ಅವರಿಗೆ ಭಕ್ತರು ಜತೆಯಾಗುವರೇ? ವಿದ್ಯಾದಾಸ್ ಬಾಬಾ ಅವರು ಕಳೆದ 20 ವರ್ಷಗಳಿಂದ ಅಂಜನಾದ್ರಿಯಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನಿಜ. ಆದರೆ ಅವರ ಮೇಲೊಂದು ಆರೋಪವಿದೆ.  ಕಳೆದ ಎರಡು ವರ್ಷಗಳ ಹಿಂದೆ ಓರ್ವ ಮಹಿಳೆಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪದಡಿ  ಅರ್ಚಕ ಹುದ್ದೆಯಿಂದ ಅವರನ್ನು ಕೆಳಗಿಳಿಸಲಾಗಿತ್ತು.  ಆದರೆ ಕೋರ್ಟ್ ಮೆಟ್ಟಿಲೇರಿ ಮಹಾಂತ ವಿದ್ಯಾದಾಸ್ ಬಾಬಾ ಮತ್ತೆ ಅರ್ಚಕರಾಗಿದ್ದಾರೆ. ಅವರ ಮೇಲಿನ ಒಂದು ಆರೋಪ ಭಕ್ತರು ಅವರಿಗೆ ಜತೆಯಾಗುವ ಕುರಿತು ಅನುಮಾನವನ್ನೂ ಹುಟ್ಟಿಸಿವೆ.

‘ಅಂಜನಾದ್ರಿ ಪರ್ವತವೇ ಹನುಮ ಹುಟ್ಟಿದ ಸ್ಥಳ. ಟಿಟಿಡಿ ಹೇಳ್ತಳುತ್ತಿರುವುದು ಸುಳ್ಳು. ಇದನ್ನು ಸಾಬೀತು‌ ಮಾಡಲು ನಾವು ಏನು ಮಾಡಲೂ ಸಿದ್ಧವಿದ್ದೇವೆ.  ಆದರೆ ವಿದ್ಯಾದಾಸ್ ಬಾಬಾ ಅವರು ಸಮಾವೇಶ, ಪಾದಯಾತ್ರೆ ಮಾಡುವ ವಿಚಾರ ಇನ್ನು ನಮ್ಮ‌ ಗಮನಕ್ಕೆ ಬಂದಿ‌ಲ್ಲ’ ಎಂದು ಆರ್​ಎಸ್​ಎಸ್​ನ ಸ್ಥಳೀಯ ಮುಖಂಡ, ಭಕ್ತ ಹನುಮಂತ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೊಪ್ಪಳದ ಕಿಷ್ಕಿಂದೆಯೇ ಹನುಮ ಹುಟ್ಟಿದ ಸ್ಥಳ; ಇಲ್ಲಿವೆ ಖಚಿತ ದಾಖಲೆಗಳು

ತಿರುಪತಿ ಆಡಳಿತ ಮಂಡಳಿಯಿಂದ ಅಪಚಾರ; ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ ತಿರುಪತಿಯಲ್ಲಂತೆ!

(Kishkindha Anjanadri temple priest decided to Hike Tirupati tirumala in Koppal district is the Birth Place of God Anjaneya)

ತಾಜಾ ಸುದ್ದಿ

Related Stories

Click on your DTH Provider to Add TV9 Kannada