ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಕಾನೂನುಬಾಹಿರ ಕಸಾಯಿಖಾನೆ; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಚಿವ ಪ್ರಭು ಚವ್ಹಾಣ್ ಗರಂ

ಇಲ್ಲಿಯವರೆಗೆ ಯಾಕೇ ಪಶು ಸಂಗೋಪನೆ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಎಲ್ಲಾ ತಾಲೂಕಿನಲ್ಲಿ ಜಾಗೃತಿ ಈ ಬಗ್ಗೆ ಮೂಡಿಸಬೇಕು. ಅಧಿಕಾರಿಗಳಿಗೆ ಆಸಕ್ತಿ ಇಲ್ಲ ಅಂದರೆ ಅವರು ಬೇರೆ ಕಡೆ ಹೋಗಲಿ. ಇಲ್ಲ ಅಂದರೆ ಮನೆಗೆ ಹೋಗಿ ಎಂದು ಅಧಿಕಾರಿಗಳಿಗೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಕಾನೂನುಬಾಹಿರ ಕಸಾಯಿಖಾನೆ; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಚಿವ ಪ್ರಭು ಚವ್ಹಾಣ್ ಗರಂ
ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್

ಶಿವಮೊಗ್ಗ: ಮುಖ್ಯಮಂತ್ರಿ ತವರು ಕ್ಷೇತ್ರ ಶಿಕಾರಿಪರ ಮತ್ತು ಸೊರಬ ತಾಲೂಕಿನಲ್ಲಿ ಕಾನೂನು ಬಾಹಿರ ಕಸಾಯಿಖಾನೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಪಶು ಸಂಗೋಪನೆ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ? ಗೋ ರಕ್ಷಣೆಗೆ ಏನೆಲ್ಲಾ ಕ್ರಮ ವಹಿಸಿದ್ದೀರಿ? ಎಂದು ಪಶು ಸಂಗೋಪನೆ ಅಧಿಕಾರಿಗೆ ಡಾ. ಶಿವಯೋಗಿ ಅವರಿಗೆ ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಪ್ರಶ್ನಿಸಿದ್ದಾರೆ.

ಗೋಹತ್ಯೆ ನಿಷೇಧ ಹೊಸ ಕಾನೂನು ಕುರಿತು ಯಾಕೇ ಜಾಗೃತಿ ಮೂಡಿಸಿಲ್ಲ? ಇಲ್ಲಿಯವರೆಗೆ ಯಾಕೇ ಪಶು ಸಂಗೋಪನೆ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಎಲ್ಲಾ ತಾಲೂಕಿನಲ್ಲಿ ಜಾಗೃತಿ ಈ ಬಗ್ಗೆ ಮೂಡಿಸಬೇಕು. ಅಧಿಕಾರಿಗಳಿಗೆ ಆಸಕ್ತಿ ಇಲ್ಲ ಅಂದರೆ ಅವರು ಬೇರೆ ಕಡೆ ಹೋಗಲಿ. ಇಲ್ಲ ಅಂದರೆ ಮನೆಗೆ ಹೋಗಿ ಎಂದು ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ 180 ಖಾಸಗಿ ಗೋ ಶಾಲೆಗಳಿವೆ. ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಇಲಾಖೆಯ ಗೋ ಶಾಲೆ ಆರಂಭವಾಗಲಿದೆ. 8000 ಸಾವಿರ ಹುದ್ದೆಗಳ ಇಲಾಖೆ ಖಾಲಿ ಇದೆ. ಪಶು ಸಂಗೋಪನೆ ಇಲಾಖೆಯಿಂದ ಇತರೆ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ಮತ್ತು ನೌಕರರು ಶೀಘ್ರವೇ ಮತ್ತೆ ಮಾತೃ ಇಲಾಖೆಗೆ ವಾಪಸ್ ಆಗುವಂತೆ ಆದೇಶ ನೀಡಿದ್ದಾರೆ.

ಪ್ರತಿವರ್ಷ 2 ಲಕ್ಷ ಗೋವುಗಳ ರಕ್ಷಣೆ ಮಾಡಬೇಕಿದೆ: ಸಚಿವ ಪ್ರಭು ಚವ್ಹಾಣ್
ಪ್ರತಿವರ್ಷವೂ 2 ಲಕ್ಷ ಗೋವುಗಳನ್ನು ರಕ್ಷಣೆ ಮಾಡಬೇಕು. ಇನ್ನು ಎರಡು ವರ್ಷ ಇದೇ ಇಲಾಖೆಯಲ್ಲಿ ಇರುತ್ತೇನೆ. ನನಗೆ ಬೇರೆ ಇಲಾಖೆಗಳು ಬೇಕಿಲ್ಲ. ನನಗೆ ಇದೇ ಇಲಾಖೆಯಲ್ಲೇ ಇರಬೇಕೆಂಬ ಆಸೆ ಇದೆ. ಆದರೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ಬದ್ಧನಾಗಿರುತ್ತೇನೆ ಎಂದು ಬೆಂಗಳೂರಿನಲ್ಲಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಿಂದ ಸಚಿವ ಪ್ರಭು ಚವ್ಹಾಣ್ ಅವರನ್ನು ಕೈಬಿಡುವ ವಿಚಾರವಾಗಿ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಮಾಧ್ಯಮಗಳಿಗೆ ಸ್ವತಃ ಅವರೇ ಪ್ರತಿಕ್ರಿಯೆ ನೀಡಿ, ‘ನನಗೆ ಪಶು ಸಂಗೋಪನಾ ಇಲಾಖೆಯೇ ಬಹುಪ್ರಿಯ. ಇಲ್ಲೇ ಮುಂದುವರೆಯಲು ಇಚ್ಛಿಸುತ್ತೇನೆ. ಆದರೆ ಪಕ್ಷದ ಹೈಕಮಾಂಡ್ ನಿರ್ಧಾರಗಳಿಗೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರ ಕೊರತೆ ವಿಚಾರವಾಗಿ 1,200 ಪಶುವೈದ್ಯರ ಅವಶ್ಯಕತೆ ಇದೆ. ಸದ್ಯ 300 ಮಂದಿಯ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ನೇಮಕಾತಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ವತಿಯಿಂದ ಪ್ರಾಣಿ ರಕ್ಷಣೆ ಮಂಡಳಿ ಸ್ಥಾಪಿಸಿದ್ದೇವೆ. 18 ಜಿಲ್ಲೆಗಳಲ್ಲಿ 1,962 ಪಶು ಸಂಜೀವಿನಿ ಆ್ಯಂಬುಲೆನ್ಸ್​ಗಳನ್ನು ಆರಂಭಿಸಿದ್ದು ಹಳ್ಳಿಗರಿಗೆ ಸಹಕಾರಿಯಾಗಲಿದೆ. ಹೈನುಗಾರರು ಅಗತ್ಯಬಿದ್ದಲ್ಲಿ ಈ ಪಶು ಆ್ಯಂಬುಲೆನ್ಸ್​ಗಳನ್ನು ಕೂಡಲೇ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ:
ಅವಸಾನದತ್ತ ಸಾಗಿದ ದೇವಣಿ ತಳಿ ಸಂರಕ್ಷಣೆಗೆ ಮುಂದಾದ ಬೀದರ್ ಜನತೆ; ಗೋ ಸಂತತಿ ಹೆಚ್ಚಿಸಲು ಫಾರಂ ಸ್ಥಾಪನೆ

ಪ್ರತಿವರ್ಷ 2 ಲಕ್ಷ ಗೋವುಗಳ ರಕ್ಷಣೆ ಮಾಡಬೇಕಿದೆ, ಈ ಇಲಾಖೆಯಲ್ಲೇ ಮುಂದುವರೆಯುವ ಇಚ್ಛೆಯಿದೆ: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್

 

Click on your DTH Provider to Add TV9 Kannada