ಯುವತಿ ವಿಚಾರವಾಗಿ ನಡು ರಸ್ತೆಯಲ್ಲೇ ಸ್ನೇಹಿತರ ನಡುವೆ ಮಾರಾಮಾರಿ; 8 ಜನರ ಗುಂಪಿಂದ ಯುವಕನ ಮೇಲೆ ಹಲ್ಲೆ

ಕುಡಿದ ಮತ್ತಿನಲ್ಲಿ ಯುವತಿ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಬಳಿಕ ಸಮಾಧಾನವಾಗಿ ಸ್ನೇಹಿತರು ಮನೆಗೆ ತೆರಳಿದ್ದಾರೆ. ಅದೇ ಕೋಪದಲ್ಲಿ ಮನೆಯಲ್ಲಿ ಮಲಗಿದ್ದ ದೇವೆಂದ್ರಪ್ಪನನ್ನು ಹೊರಗೆ ಕರೆದುಕೊಂಡು ಬಂದು 8 ಜನರ ಗುಂಪು ಹಲ್ಲೆ ನಡೆಸಿದೆ.

ಯುವತಿ ವಿಚಾರವಾಗಿ ನಡು ರಸ್ತೆಯಲ್ಲೇ ಸ್ನೇಹಿತರ ನಡುವೆ ಮಾರಾಮಾರಿ; 8 ಜನರ ಗುಂಪಿಂದ ಯುವಕನ ಮೇಲೆ ಹಲ್ಲೆ
ಯುವತಿ ವಿಚಾರವಾಗಿ ನಡು ರಸ್ತೆಯಲ್ಲೇ ಸ್ನೇಹಿತರ ನಡುವೆ ಮಾರಾಮಾರಿ

ಕಲಬುರಗಿ: ಯುವತಿ ವಿಚಾರವಾಗಿ ಸ್ನೇಹಿತರ ನಡುವೆ ರಸ್ತೆಯಲ್ಲೇ ಗಲಾಟೆ ಆಗಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಂದನೂರು ಗ್ರಾಮದಲ್ಲಿ ನಡೆದಿದೆ. ನಡು ರಸ್ತೆಯಲ್ಲಿ 8 ಜನ ಸ್ನೇಹಿತರು ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದೇವೇಂದ್ರಪ್ಪ ಎಂಬಾತನ ಮೇಲೆ ಎಂಟು ಜನರಿಂದ ಹಲ್ಲೆ ನಡೆದಿದೆ. ಸದ್ಯ ಹಲ್ಲೆಯ ವಿಡಿಯೋ ವೈರಲ್ ಆಗಿದೆ.

ಜುಲೈ 4ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಯುವತಿ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಬಳಿಕ ಸಮಾಧಾನವಾಗಿ ಸ್ನೇಹಿತರು ಮನೆಗೆ ತೆರಳಿದ್ದಾರೆ. ಅದೇ ಕೋಪದಲ್ಲಿ ಮನೆಯಲ್ಲಿ ಮಲಗಿದ್ದ ದೇವೆಂದ್ರಪ್ಪನನ್ನು ಹೊರಗೆ ಕರೆದುಕೊಂಡು ಬಂದು 8 ಜನರ ಗುಂಪು ಹಲ್ಲೆ ನಡೆಸಿದೆ. ಗಾಯಾಳು ದೇವೆಂದ್ರಪ್ಪಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಸ್ನೇಹಿತರ ನಡುವೆ ಆದ ಜಗಳಕ್ಕೆ ತಿಲಾಂಜಲಿ ಇಡುವ ಸಲುವಾಗಿ ಸ್ನೇಹಿತರು ತಾವೇ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೇಳಿ ದೂರು ಹಿಂಪಡಿದಿದ್ದಾರೆ. ಇಷ್ಟೆಲ್ಲಾ ಕೃತ್ಯದ ಬಳಿಕ ಸ್ನೇಹಿತರು ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು